ವಿಶ್ವ ಹಾಗೂ ಏಷ್ಯನ್ ಬಾಡಿ ಬಿಲ್ಡಿಂಗ್ ಸ್ಪರ್ಧೆಗೆ ಉಡುಪಿಯ ನಿತ್ಯಾನಂದ ಕೋಟ್ಯಾನ್ ಆಯ್ಕೆ

ನೇಪಾಳದ ಕಾಠ್ಮಂಡುವಿನಲ್ಲಿ ಸೆಪ್ಟಂಬರ್ ತಿಂಗಳಲ್ಲಿ ನಡೆಯುವ 55ನೇ ಏಷ್ಯನ್ ಬಾಡಿ ಬಿಲ್ಡಿಂಗ್ ಮತ್ತು ಫಿಸಿಕ್ಸ್ ಸ್ಪೋಟ್ಸ್ ಚಾಂಪಿಯನ್‌ಶಿಪ್ 2023 ಹಾಗೂ ದಕ್ಷಿಣ ಕೊರಿಯಾದಲ್ಲಿ ನವೆಂಬರ್ ತಿಂಗಳಲ್ಲಿ ನಡೆಯುವ 14ನೇ ವರ್ಲ್ಡ್ ಬಾಡಿ ಬಿಲ್ಡಿಂಗ್ ಮತ್ತು ಫಿಸಿಕ್ಸ್ ಸ್ಪೋಟ್ಸ್ ಚಾಂಪಿಯನ್‌ಶಿಪ್ 2023 ಸ್ಪರ್ಧೆಗಳಲ್ಲಿ ಮಾಸ್ಟರ್ ೮೦ಕೆಜಿ ಮೇಲ್ಪಟ್ಟ ವಿಭಾಗದಲ್ಲಿ ಭಾರತದ ಪರವಾಗಿ ಭಾಗವಹಿಸಲು ಉಡುಪಿ ಜಿಲ್ಲೆಯ ನಿತ್ಯಾನಂದ ಕೋಟ್ಯಾನ್ ಆಯ್ಕೆಯಾಗಿರುತ್ತಾರೆ.

ಗೋವಾದಲ್ಲಿ ನಡೆದ ಆಯ್ಕೆಯ ಶಿಬಿರದಲ್ಲಿ ಕರ್ನಾಟಕದ ಪರವಾಗಿ ಆಯ್ಕೆಯಾದ ಕೇವಲ ೪ ಮಂದಿಯಲ್ಲಿ ಇವರು ಒಬ್ಬರಾಗಿದ್ದಾರೆ. ಇವರು ೧೧ ಬಾರಿ ಮಿಸ್ಟರ್ ಕರ್ನಾಟಕ, ೧ ಬಾರಿ ಮಿಸ್ಟರ್ ಇಂಡಿಯಾ ಮಾಸ್ರ‍್ಸ್ ಪ್ರಶಸ್ತಿಯನ್ನು ಗೆದ್ದಿರುತ್ತಾರೆ.

 
 
 
 
 
 
 
 
 
 
 

Leave a Reply