ಭಾರತ- ಪಾಕ್‌ ಪಂದ್ಯ; ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟ ಪಾಂಡ್ಯ

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ- ಪಾಕ್‌ ಪಂದ್ಯ ರೋಚಕವಾಗಿತ್ತು. 148 ರನ್‌ ಟಾರ್ಗೆಟ್‌ ಬೆನ್ನಟ್ಟಿದ್ದ ಭಾರತಕ್ಕೆ ಗೆಲ್ಲಲು ಕೊನೆ ಓವರ್‌ ನಲ್ಲಿ 7 ರನ್‌ ಅಗತ್ಯವಿತ್ತು. ಪಾಕ್‌ ಸ್ಪಿನ್ನರ್‌ ನವಾಜ್ ಎಸೆದ ಕಡೆ ಓವರ್‌ ನ ಮೊದಲ ಎಸೆತದಲ್ಲೇ ರವೀಂದ್ರ ಜಡೇಜಾ ಬೋಲ್ಡ್‌ ಆಗಿ ವಿಕೆಟ್‌ ಒಪ್ಪಿಸುತಿದ್ದಂತೆ ಅಭಿಮಾನಿಗಳು ಉಸಿರು ಬಿಗಿ ಹಿಡಿದು ಪಂದ್ಯವನ್ನು ವೀಕ್ಷಿಸಿದರು. ಆ ಬಳಿಕ ಕ್ರೀಸ್‌ ಗೆ ಬಂದ ದಿನೇಶ್‌ ಕಾರ್ತಿಕ್‌ ಎರಡನೇ ಎಸೆತದಲ್ಲಿ ಸಿಂಗಲ್‌ ಗಳಿಸಿದರು. ಮುಂದಿನ ಎಸೆತ ಹಾರ್ದಿಕ್‌ ಡಾಟ್‌ ಮಾಡಿದರು. ಆಗ ಟೀಂ ಇಂಡಿಯಾ ಗೆಲುವಿಗೆ 3 ಎಸೆತಗಳಲ್ಲಿ 6 ರನ್‌ ಬೇಕಿತ್ತು. ಎರಡೂ ತಂಡದ ಅಭಿಮಾನಿಗಳು ಗೆಲುವಿಗೆ ಪ್ರಾರ್ಥಿಸುತ್ತಿದ್ದರು.

ಮೊಹಮ್ಮದ್ ನವಾಜ್ ರ 4ನೇ ಎಸೆತವನ್ನು ಪಾಂಡ್ಯ ಲಾಂಗ್​ಆನ್​ನಲ್ಲಿ ಫ್ಲಾಟ್ ಸಿಕ್ಸ್ ಸಿಡಿಸುವ ಮೂಲಕ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು. ಅಭಿಮನಿಗಳು ಕುಣಿದುಕುಪ್ಪಳಿಸಿದರು.

ನಾನ್‌ ಸ್ಟ್ರೈಕ್‌ ನಲ್ಲಿದ್ದ ದಿನೇಶ್‌ ಕಾರ್ತಿಕ್‌ ಪಾಂಡ್ಯಾಗೆ ತಲೆಬಾಗಿ ನಮಸ್ಕರಿಸಿದರು. ಪಾಂಡ್ಯ ವಿನ್ನಿಂಗ್‌ ಶಾಟ್‌ ಅನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

 
 
 
 
 
 
 
 
 
 
 

Leave a Reply