ಸೂಪರ್ ಟೆಕ್ ಟ್ವಿನ್ ಟವರ್ಸ್‌ ನೆಲಸಮವಾಗುವ ದೃಶ್ಯಗಳು

ನೋಯ್ಡಾದ ಸೂಪರ್ ಟೆಕ್ ಟ್ವಿನ್ ಟವರ್ಸ್‌ಗಳನ್ನು ಡೆಮಾಲಿಷ್‌ ಮಾಡಲಾಗಿದೆ. ಭಾನುವಾರ ಮಧ್ಯಾಹ್ನ 2:30ರ ವೇಳೆಗೆ ಅವಳಿ ಗೋಪುರಗಳು ಬ್ಲಾಸ್ಟ್‌ ಮಾಡಿ ಉರುಳಿಸಲಾಯಿತು. ಒಟ್ಟು 40 ಅಂತಸ್ತುಗಳುಳ್ಳ ಕಟ್ಟಡಗಳು ಅಕ್ರಮವಾಗಿ ನಿರ್ಮಾಣಗೊಂಡ ಹಿನ್ನೆಲೆ ಅವಳಿ ಕಟ್ಟಡವನ್ನು ಧ್ವಂಸ ಗೊಳಿಸಲು ಸುಪ್ರೀಂ ಕೋರ್ಟ್ ಆ. 28ರವರೆಗೆ ಗಡುವು ವಿಸ್ತರಿಸಿತ್ತು. ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ಗೆ ಹತ್ತಿರದಲ್ಲಿರುವ ನೋಯ್ಡಾದ 93- ಎ ಸೆಕ್ಟರ್‌ನಲ್ಲಿ ಸೂಪರ್‌ಟೆಕ್ 40 ಅಂತಸ್ತಿನ ಬೃಹತ್ ಅವಳಿ ಕಟ್ಟಡಗಳನ್ನು ನಿರ್ಮಿಸಿದೆ. ಇದರಲ್ಲಿ ಒಂದರ ಎತ್ತರ 103 ಮೀಟರ್‌ಗಳಾಗಿದ್ದರೆ, ಮತ್ತೊಂದು 97 ಮೀಟರ್ ಎತ್ತರವಿದೆ. ಈ ಎರಡೂ ಕಟ್ಟಡಗಳು ಒಟ್ಟು 7.5 ಲಕ್ಷ ಚದರ ಅಡಿ ಪ್ರದೇಶದಲ್ಲಿ ನಿರ್ಮಾಣಗೊಂಡಿವೆ. ಆದರೆ, ಕಟ್ಟಡಗಳ ನಡುವೆ ಅತ್ಯಂತ ಕಡಿಮೆ ಅಂತರವಿದ್ದು, ಕಟ್ಟಡ ನಿರ್ಮಾಣ ನಿಯಮಗಳ ಉಲ್ಲಂಘನೆಯಾಗಿದೆ. ಅಲ್ಲದೆ, ಉತ್ತರ ಪ್ರದೇಶದ ಅಪಾರ್ಟ್‌ಮೆಂಟ್ ಕಾಯ್ದೆಯಲ್ಲಿ ಸೂಚಿಸಿರುವಂತೆ ನಿವೇಶನಗಳ ಮಾಲೀಕರ ಒಪ್ಪಿಗೆ ಪಡೆಯದೆ ಅಕ್ರಮವಾಗಿ ನಿರ್ಮಿಸಲಾಗಿದೆ. ಹೀಗಾಗಿ 2021ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಈ ಕಟ್ಟಡಗಳ ಧ್ವಂಸಕ್ಕೆ ಆದೇಶ ನೀಡಿತ್ತು. ಅಸಲಿಗೆ ಅವಳಿ ಕಟ್ಟಡಗಳನ್ನು ಮೇ 22ರ ವೇಳೆಗೆ ಧ್ವಂಸಗೊಳಿಸಬೇಕಿತ್ತು. ಆದರೆ, ಆ ಗಡುವನ್ನು ಇಲ್ಲಿಯವರೆಗೆ ಮುಂದೂಡಲಾಗಿತ್ತು.

ಕಟ್ಟಡಗಳು ನೆಲಸಮವಾದ ಬಳಿಕ ಕಂಡುಬಂದ ದೃಶ್ಯಗಳು.

Leave a Reply