ಉಡುಪಿ ನಗರದಲ್ಲಿಯೇ ಅತೀ ದೊಡ್ಡ ಸರ್ಕಲ್ ಬ್ರಹ್ಮಗಿರಿ ವೃತ್ತ~ಸುರಭಿ ರತನ್ ಉಡುಪಿ

ಉಡುಪಿ ನಗರದ ಪ್ರಮುಖ ಸ್ಥಳಗಳಲ್ಲಿ ಬ್ರಹ್ಮಗಿರಿ ಎಲ್ಲರಿಗೂ ತಿಳಿದಿರುವ ವಿಷಯ.  ವಸತಿಗೃಹಗಳು, ವಾಣಿಜ್ಯ ಸಂಕೀರ್ಣ, ರಾಷ್ಟ್ರೀಯ ಹೆದ್ದಾರಿ, ಫೈಯರ್ ಸ್ಟೇಷನ್ಸ್, ಜಿಲ್ಲಾಸ್ಪತ್ರೆ  ಹಾಗೂ ಅನೇಕ ಸರಕಾರಿ ಇಲಾಖೆಗಳು, ದೇವಸ್ಥಾನ ಚರ್ಚ್, ಮಸೀದಿ, ಕ್ರೀಡಾಂಗಣ, ಈಜುಕೊಳ, ವಿದ್ಯಾಸಂಸ್ಥೆಗಳು ಹಾಗೂ ಪುರಾತನ ನಾಯರ್ ಕೆರೆಗಳಿಗೆಲ್ಲ ಸಮೀಪದಲ್ಲಿರುವ ಸರ್ಕಲ್. 
 
ರಾಷ್ಟ್ರೀಯ ಹೆದ್ದಾರಿ, ಬನ್ನಂಜೆ, ಕಾಡಬೆಟ್ಟು, ಉಡುಪಿ ನಗರ, ಅಜ್ಜರಕಾಡು, ಕಿನ್ನಿಮುಲ್ಕಿ ಹೀಗೆ ಐದು ಮುಖ್ಯ ರಸ್ತೆಗಳು ಸೇರುವಂತಹ ಬ್ರಹತ್ ವೃತ್ತ. ಸುಮಾರು ಹದಿನಾರು ವರ್ಷದ ಹಿಂದೆ ಒಂದು ಸಣ್ಣ ಸರ್ಕಲ್ ಇದ್ದಂತಹ ಜಾಗದಲ್ಲಿ ಅಂದಿನ ಅಂದಿನ ಉಡುಪಿಯ ನಗರಸಭೆಯ ಉಪಾಧ್ಯಕ್ಷ ನ್ಯಾಯವಾದಿ ರೊನಾಲ್ಡ್ ಪ್ರವೀಣ್ ಕುಮಾರ್ ಅವರು ಸ್ಥಳೀಯ ದಾನಿಗಳ ಸಹಕಾರದೊಂದಿಗೆ ಸುಂದರ ಸರ್ಕಲ್ ನಿರ್ಮಾಣಗೊಳಿಸಿದ್ದರು. ಅಭಿವೃದ್ಧಿಗೊಳ್ಳುತ್ತಿರುವ ಉಡುಪಿ ನಗರದ ಅತಿ ದೊಡ್ಡ ಸರ್ಕಲ್ ಎಂಬ ಖ್ಯಾತಿಗೆ ಪಾತ್ರವಾಗಿರುವ  ಬ್ರಹ್ಮಗಿರಿ ಸರ್ಕಲ್  ಇನ್ನಷ್ಟು  ಅಭಿವೃದ್ಧಿಗೊಂಡರೆ  ಉಡುಪಿ ನಾಗರಿಕರಿಗೆ ಹೆಮ್ಮೆಯ ವಿಷಯ.  
 
ಅಲ್ಲದೆ ಉದ್ಯಾವರದಿಂದ ಬರುವ ಬಸ್ ಗಳು ಕಿನ್ನಿಮೂಲ್ಕಿ ಸ್ವಾಗತ ಗೋಪುರದಿಂದಾಗಿ ನಾಯರ್ ಕೆರೆ ರಸ್ತೆ ಮೂಲಕ ಬ್ರಹ್ಮಗಿರಿ ಸರ್ಕಲ್ ಮುಖಾಂತರ ಬರುವ ವ್ಯವಸ್ಥೆ ಆದಲ್ಲಿ ಅಬಕಾರಿ ಇಲಾಖೆ, ವಾರ್ತಾ ಭವನ, ಕಾಂಗ್ರೆಸ್ ಭವನ, ಜಿ.ಶಂಕರ್ ಮಹಿಳಾ ಕಾಲೇಜ್ ಗಳಿಗೆಲ್ಲ ಬರುವ ಸಾರ್ವಜನಿಕರಿಗೆ ತುಂಬಾ ಸಹಾಯವಾಗಲಿದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಿದರೆ ಉಡುಪಿ ಬೆಳವಣಿಗೆಯಲ್ಲಿ ಬ್ರಹ್ಮಗಿರಿ ಸರ್ಕಲ್ ಪ್ರಮುಖ ಮಾರ್ಗವಾಗಲಿದೆ.     
 
 
 
 
 
 
 
 
 
 
 

Leave a Reply