ತನಿಖೆಯನ್ನು ಚುರುಕುಗೊಳಿಸಿ ~ವಿಹಿಂಪ, ಹಿಂದೂಜಾ ಆಗ್ರಹ

ಉಡುಪಿ: ಅಪ್ರಾಪ್ತೆ ಬಾಲಕಿಯನ್ನು ಅನ್ಯ ಕೋಮಿನ ಯುವಕನೋರ್ವ ಅಪಹರಿಸಿದ್ದಾನೆ, ಆಕೆಯನ್ನು ಈ ಕೂಡಲೇ ಹುಡುಕಿ ರಕ್ಷಿಣೆ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ವಿಶ್ವ ಹಿಂದು ಪರಿಷತ್ ಮತ್ತು ಹಿಂದು ಜಾಗರಣ ವೇದಿಕೆ ​ಹಿರಿಯಡಕ​ ಠಾಣೆಗೆ ಮನವಿ ಸಲ್ಲಿಸಲು ಆಗಮಿಸಿತು.  ​ಪೆರ್ಡೂರು ಸಮೀಪದ 17 ವರ್ಷದ ಬಾಲಕಿಯನ್ನು ​ ಅ. 28ರಂದು ಅದೇ ಗ್ರಾಮದ ಅನ್ಯಕೋಮಿನ ಅಪ್ರಾಪ್ತ  ಯುವಕ ಅಪಹರಣ ಮಾಡಿದ್ದಾನೆ. 
 

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಮೂರು ದಿನಗಳು ಕಳೆದರೂ ಬಾಲಕಿಯ ಸುಳಿವು ಪತ್ತೆಯಾಗಿಲ್ಲ. ಹೀಗಾಗಿ ಪೊಲೀಸ್ ಇಲಾಖೆ ತನಿಖೆಯನ್ನು ಚುರುಕು ಗೊಳಿಸಬೇಕು ಎಂದು ಆಗ್ರಹಿಸಿ​ ​ವಿಹಿಂಪ ಮತ್ತು ಹಿಂಜಾವೇ ಮನವಿ ಸಲ್ಲಿಸಿತು 

ಇನ್ನು ಈ ಅಪಹರಣದ ಹಿಂದೆ ಲವ್ ಜಿಹಾದ್‌ನ ವ್ಯವಸ್ಥಿತ ಸಂಚು ನಡೆದಿರುವ ಅನುಮಾನವಿದ್ದು, ಬಾಲಕಿಯ ಮನೆಯವರು ಮಗಳ ಚಿಂತೆಯಲ್ಲಿ ದ್ದಾರೆ. ಆಕೆಯ ಸುಳಿವು ಸಿಗದಿರುವ ಹಿನ್ನೆಲೆ ಆತಂಕಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಪೊಲೀಸರು ತೀವ್ರ ತನಿಖೆ ನಡೆಸ ಬೇಕು. ಹಾಗೂ ಆರೋಪಿಯನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿ, ಉಡುಪಿ ಡಿವೈಎಸ್ಪಿ ಜೈಶಂಕರ್ ಅವರಿಗೆ ಮನವಿ ನೀಡಲಾಯಿತು.

ವಿಹಿಂಪ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಜಿಲ್ಲಾ ಮಾತೃಶಕ್ತಿ ಪ್ರಮುಖರಾದ ಪೂರ್ಣಿಮಾ ಸುರೇಶ್, ಹಿಂಜಾವೇ ವಿಭಾಗ ಸಂಚಾಲಕ ಪ್ರಕಾಶ್ ಕುಕ್ಕೆಹಳ್ಳಿ, ಗಿರೀಶ್ ಹಿರಿಯಡ್ಕ, ಅನಿಲ್ ಆತ್ರಾಡಿ ಮೊದಲಾದವರು​ ಈ ಪ್ರತಿಭಟನೆಯ ನೇತೃತ್ವವನ್ನು ವಹಿಸಿ ದ್ದರು.​ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಉಪಾಧ್ಯಕ್ಷ ಯಶಪಾಲ ಸುವರ್ಣ, ಭಜರಂಗದಳದ ಪ್ರಮುಖ ರಾದ ಸುನೀಲ್ ಕೆ.ಆರ್. ಮೊದಲಾದವರು ಭಾಗವಹಿಸಿದ್ದರು
 
 
 
 
 
 
 
 
 
 
 
 
 
 
 
 
 
 
 

Leave a Reply