ಪಿತ್ರೋಡಿ ವೆಂಕಟರಮಣ ಸ್ಪೋರ್ಟ್ಸ್& ಕಲ್ಚರಲ್ ಕ್ಲಬ್ಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ  

​ಟೀಮ್ ಫಾರ್ ಸೋಷಲ್ ವರ್ಕ್..  
ದಿನದ 24 ಗಂಟೆ ಸಮಾಜ ಸೇವೆಯಲ್ಲಿರುವ ಪಿತ್ರೋಡಿ ವಿಸಿಸಿ ಬ್ಲಡ್ ಫಾರ್ ಲೈಫ್‌ನ ಯುವಕ ಯುವತಿಯರ ತಂಡ
ಹುಟ್ಟಿ ಸಾಯುವ ನಾಲ್ಕು ದಿನದ ಈ ಜೀವನದಲ್ಲಿ ಎನನ್ನಾದರು ಸಾಧಿಸ ಬೇಕೆಂಬ ಉತ್ಸಾಹದೊಂದಿಗೆ ಸಮಾಜ ಸೇವೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚೆೆಚ್ಚು ಯುವಕರು ತೊಡಗಿಸಿ ಕೊಳ್ಳುತ್ತಿರುವುದು ಸಂತಸದ ವಿಷಯ. ಅದರಲ್ಲೂ ಉದ್ಯಾವರ ಪಿತ್ರೋಡಿ  ವೆಂಕಟರಮಣ ಸ್ಪೋರ್ಟ್ಸ್& ಕಲ್ಚರಲ್ ಕ್ಲಬ್  ಮತ್ತು ಅದರ ಅಂಗ ಸಂಸ್ಥೆ ವಿಸಿಸಿ ಬ್ಲಡ್ ಫಾರ್ ಲೈಫ್‌ನ ಸದಸ್ಯರು ಒಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. 
163 ಯುವಕ, ಯುವತಿಯರ ಸದಸ್ಯ ಬಲವನ್ನುಹೊಂದಿರುವ ಈ ಸಂಘಟನೆ ಈಗಾಗಲೇ ಬಡರೋಗಿಗಳಿಗೆ ಕೆ.ಎಂ.ಸಿ ರಕ್ತನಿಧಿ ಪ್ರೋತ್ಸಾಹದೊಂದಿಗೆ 6000 ಯೂನಿಟ್‌ಗೂ ಮೇಲ್ಪಟ್ಟು ರಕ್ತದಾನವನ್ನು ನೀಡಿ ಸದ್ದಿಲ್ಲದೆ ಹಲವಾರು ವರ್ಷದಿಂದ ಸಮಾಜ ಸೇವೆ ಮಾಡುತ್ತಿದೆ.  ದ್ವಿಚಕ್ರ ಸವಾರರ ಸುರಕ್ಷತೆ, ರಸ್ತೆ ಸುರಕ್ಷತೆ, ಸಂಚಾರ ನಿಯಮ ಪಾಲನೆ ಮತ್ತು ವಿದ್ಯಾರ್ಥಿಗಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವ ಸಲುವಾಗಿ ಹೆಲ್ಮೆಟ್ ಬಳಕೆಯ ಕುರಿತು ಜನ ಜಾಗೃತಿ ಸಂದೇಶ ಜಾಥಾ ಉಡುಪಿಯಾದ್ಯಂತ ಹಮ್ಮಿ ಕೊಂಡಿದೆ. ನೇತ್ರದಾನ ಅಭಿಯಾನದಡಿ ಸಂಸ್ಥೆಯ 78 ಸದಸ್ಯರು ನೇತ್ರದಾನ ಪ್ರಕ್ರಿಯೆಗೆ ಸಹಿ ಹಾಕಿ ಮಾದರಿಯಾಗಿದ್ದಾರೆ.   
ಶಿಸ್ತಿಗಾಗಿ ಕ್ರಿಕೆಟ್ ಎಂಬ ಧ್ಯೇಯದಡಿ ಹಲವಾರು ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿ, ಅಚ್ಚುಕಟ್ಟಾಗಿ ನಿರ್ವಹಿಸಿ, ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾದ ಸಂಸ್ಥೆಯಾಗಿದೆ. ಕೆಲವು ವರ್ಷಗಳಿಂದ ಸಂಘಟನೆಯ ಸದಸ್ಯರು ದೀಪಾವಳಿ ಹಬ್ಬದ ಸಂದರ್ಭ ಯಾವುದೇ ಸುಡುಮದ್ದುಗಳಿಗೆ ಹಣ ವಿನಿಯೋಗಿಸದೆ, ಉಡುಪಿಯಲ್ಲಿರುವ ಶ್ರೀಕೃಷ್ಣ ಬಾಲನಿಕೇತನದ ಮಕ್ಕಳಿಗೆ ಹೊಸ ಬಟ್ಟೆಗಳನ್ನು ನೀಡಿ ಅವರ ಮೊಗದಲ್ಲಿ ಅರಳುವ ಮಂದಹಾಸಕ್ಕೆ ತಾವು ಸಂತಸ ಪಡುವ ಮಾನವೀಯ ಗುಣಗಳನ್ನು ಹೊಂದಿದ 
ಹೆಲ್ಮೆಟ್ ಬಳಕೆಯ ಕುರಿತು ಪ್ರತಿಜ್ಞಾ ಸ್ವೀಕಾರ ಮತ್ತು ಹೆಲ್ಮೆಟ್‌ನ ಮಹತ್ವದ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಸ್ಥಳೀಯ ಶಾಲೆಗಳಲ್ಲಿ ರಸಪ್ರಶ್ನೆಯನ್ನು ಆಯೋಜಿಸುತ್ತಿದೆ. ಕಲಿಕಾ ಪ್ರೋತ್ಸಾಹಕ್ಕೆ ಹೆಚ್ಚು ಗಮನ ಕೊಡುವ ಈ ತಂಡ ಆಯ್ದ ಅರ್ಹ ಬಡ ವಿದ್ಯಾರ್ಥಿಗಳಿಗೆ ಒಂದನೇ ತರಗತಿಯಿಂದ ಕಾಲೇಜಿನ ವರೆಗಿನ ಶುಲ್ಕವನ್ನು ಬರಿಸುತ್ತಿದೆ. ವೆಚ್ಚಗಳನ್ನುಪ್ರಾರಂಭದಲ್ಲಿ ಸದಸ್ಯರೆ ಬರಿಸುತ್ತಿದ್ದರು. ಈಗ ಇವರ ಸೇವೆಯನ್ನು ಗುರುತಿಸಿ ಊರಿನ ಕೆಲವರು ಸಹಾಯಹಸ್ತ ನೀಡುತ್ತಿದ್ದಾರೆ. 
ಹೊಸ ಹೊಸ ಯೋಜನೆಯ ಕನಸುಗಾರರಿವರು:  ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದರಸ ಪ್ರಶ್ನೆ ಏರ್ಪಡಿಸುವುದು, ರಕ್ತದಾನವನ್ನು ಜಿಲ್ಲೆಯಾದ್ಯಂತ ವಿಸ್ತರಿಸುವುದು,  ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು. ನಮ್ಮ ವೃತ್ತಿಯೊಂದಿಗೆ ಸಮಾಜ ಸೇವೆಯನ್ನು ಪ್ರವೃತ್ತಿಯಾಗಿ ಸ್ವೀಕರಿಸುವುದು. ವೆಂಕಟರಮಣ ಸಂಸ್ಥೆ ಆಯೋಜಿಸುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ವೈಶಿಷ್ಟ್ಯತೆಯನ್ನು ಮೆರೆದು, ಹಲವಾರು ಸಾಧಕರನ್ನು ಗುರುತಿಸಿ ಸನ್ಮಾನಿಸಿರುತ್ತಾರೆ. Say No 2 Drugs ಯೋಜನೆ ರೂಪಿಸಿ ಯಶಸ್ವಿ ಯಾಗಿರುತ್ತಾರೆ​. ​
ಸಮಾಜದ ಋಣವನ್ನು ತೀರಿಸುವ ಸಣ್ಣ ಪ್ರಯತ್ನ ನಮ್ಮದು. ಜನರ ಸಹಕಾರದೊಂದಿಗೆ ಮಾದರಿ ಸಂಘಟನೆಯಾಗಿ ಸಮಾಜದಲ್ಲಿ ಗುರುತಿಸಿ ಕೊಂಡಿದ್ದೇವೆ. ರಕ್ತದಾನದಿಂದ ವ್ಯತಿರಿಕ್ತ ಪರಿಣಾಮ ಉಂಟಾಗುವುದಿಲ್ಲ. ರಕ್ತದಾನ ಮಾಡಿದರೆ ನಮ್ಮ ಆರೋಗ್ಯ ಕೂಡಾ ಉತ್ತಮ ವಾಗುವುದು. ಜಾತಿಮತ ಭೇದವಿಲ್ಲದೆ ನಿರಂತರ ರಕ್ತದಾನಮಾಡುತ್ತಿದ್ದೇವೆ ಹಾಗು ಮಾಹಿತಿ ನೀಡುತ್ತಿದ್ದೇವೆ. ವೃತ್ತಿಯೊಂದಿಗೆ ಸಮಾಜ ಸೇವೆಯನ್ನು ​ನಾವು ​ಪ್ರವೃತ್ತಿಯಾಗಿ ​ಕಂಡುಕೊಂಡಿದ್ದೇವೆ 
ನವೀನ್ ಸಾಲ್ಯಾನ್ , ಅಧ್ಯಕ್ಷರು, ವೆಂಕಟರಮಣ ಸ್ಪೋರ್ಟ್ಸ್& ಕಲ್ಚರಲ್ ಕ್ಲಬ್​(ರಿ)​

 ​​
 
 
 
 
 
 
 
 
 
 
 
 

Leave a Reply