ದೇವಸ್ಥಾನ ಪ್ರಗತಿ ಹೊಂದಿದರೆ ಊರು ಪ್ರಗತಿಯಾದಂತೆ- ಪಲಿಮಾರು ಶ್ರೀ

ಮಧ್ವಾಚಾರ್ಯರು ಬಾಲ್ಯದಲ್ಲಿ ಕೊಡವೂರು ಶಂಕರನಾರಾಯಣ ದೇಗುಲ ಸಂದರ್ಶನಕ್ಕೆ ಬಂದಿದ್ದಾರೆ ಅಂದರೆ ಈ ದೇವಸ್ಥಾನಕ್ಕೆ ಸಾವಿರ ವರ್ಷ ಇತಿಹಾಸ ಇದೆ. ಯಾವುದೇ ಒಂದು ಪುಣ್ಯ ಕ್ಷೇತ್ರಗಳಿಗೆ ವರ್ಷ ಜಾಸ್ತಿ ಆಯಿತು ಅಂತಾದರೆ ಅಲ್ಲಿನ ಶಕ್ತಿಯೂ ಹೆಚ್ಚಾಗಿದೆ ಎಂದರ್ಥ. 
ದೇವಸ್ಥಾನ ಪ್ರಗತಿ ಹೊಂದಿದರೆ ಊರು ಪ್ರಗತಿಯಾದಂತೆ. ಪ್ರತಿಯೊಬ್ಬರು ಬೇದವವನ್ನು ಮರೆತು ಪೂರ್ಣ  ಭಾವದಿಂದ ಭಗವಂತನನ್ನು ಭಕ್ತಿಯಿಂದ ಜಸಿದರೆ ದೇವರ ಸಂಪೂರ್ಣ ಅನುಗ್ರಹ ಸಿಗುತ್ತದೆ ಎಂದು ಪಲಿಮಾರು ಮಠದ ಶ್ರೀ ವಿದ್ಯಾದೀಶ ತೀರ್ಥ ಶ್ರೀಪಾದರು ನುಡಿದರು. ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ನವೀಕೃತ ವಸಂತ ಮಂಟಪದ ಮೇಲ್ಛಾವಣಿಯನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಕೊಡುವವರ ಊರು-ಕೊಡವೂರು:ಪಲಿಮಾರು ಮಠದ ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ದೇವಸ್ಥಾನದ ಅಭಿವೃದ್ದಿ ಕೆಲಸಗಳು ಇಲ್ಲಿನ ಗ್ರಾಮಸ್ಥರ ನೆರವಿನಿಂದ ಅಗಿದೆ. ಹೆಸರೇ ಹೇಳುವಂತೆ ಕೊಡವೂರು ಕೊಡುವವರ ಊರು. ಇಲ್ಲಿನ ಗ್ರಾಮಸ್ಥರು ಪುಣ್ಯ ಕಾರ್ಯ ಮಾಡಲು ಯಾರು ಬಂದರೂ ಇಲ್ಲ ಎನ್ನದೇ ಇದ್ದದ್ದನ್ನು ಮನ ಪೂರ್ವಕವಾಗಿ ಕೊಡುತ್ತಾರೆ ಎಂದರು.
ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ  ಸಾಧು ಸಾಲ್ಯಾನ್ ವಹಿಸಿದ್ದರು.  ಉಡುಪಿ ಶಾಸಕ ಕೆ. ರಘುಪತಿ ಭಟ್, ಮೀನು ಮಾರಾಟ ಫೆಡರೇಶನಿನ ಅಧ್ಯಕ್ಷ  ಯಶ್‌ಪಾಲ್ ಸುವರ್ಣ, ಧಾರ್ಮಿಕ ದತ್ತಿ ಪರಿಷತ್ತಿನ ಮೋಹನ್ ಉಪಾಧ್ಯಾಯ, ನಗರಸಭ ಅಧ್ಯಕ್ಷೆ ಸುಮಿತ್ರ ನಾಯಕ್, ಕೊಡವೂರು ವಾರ್ಡ್ ಸದಸ್ಯ ವಿಜಯ ಕೊಡವೂರು, ಸ್ಥಾಯೀ ಸಮಿತಿ ಅಧ್ಯಕ್ಷ  ಶ್ರೀಶ ಕೊಡವೂರು ದೇಗುಲದ ತಂತ್ರಿ ವೇ|ಮೂ| ಹಯವದನ ತಂತ್ರಿ, ಸೇವಾ ಸಮಿತಿಯ ಗೌರವಾಧ್ಯಕ್ಷ  ಆನಂದ ಪಿ. ಸುವರ್ಣ ಉಪಸ್ಥಿತರಿದ್ದರು.
ಪ್ರಮುಖರಿಗೆ ಗೌರವಾರ್ಪಣೆ: ದೇವಸ್ಥಾನದ ಅಭಿವೃದ್ದಿ ಕೆಲಸದಲ್ಲಿ ಸರ್ವ ರೀತಿಯಲ್ಲಿ ಸಹಕರಿಸಿದ ಪ್ರಮುಖರಾದ ವೇ| ಮೂ| ಹಯವದನ ತಂತ್ರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಾಲ್ಯಾನ್, ಸೇವಾ ಸಮಿತಿಯ ಗೌರವಾಧ್ಯಕ್ಷ  ಆನಂದ ಪಿ. ಸುವರ್ಣ, ಶ್ರೀನಿವಾಸ ಉಪಾಧ್ಯ , ಪ್ರಸಾದ್ ರಾವ್, ನಾಗರಾಜ್ ಸುವರ್ಣ, ಸುಧಾಕರ ಎ. ಕುಂದರ್, ಪ್ರೇಮಾ ಬಾಯರಿ, ಪ್ರಕಾಶ್ ಕರ್ಕೇರ, ವಿಶ್ವನಾಥ್ ಭಟ್  ಮೊದಲಾದವರನ್ನು ಸ್ವಾಮೀಜಿಗಳು ಗೌರವಿಸಿದರು.
ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸುಭಾಸ್  ಎಸ್. ಮೆಂಡನ್, ಗೋವಿಂದ ಪಾಲನ್, ಜೀವನ್ ಕುಮಾರ್ ಪಾಳೆಕಟ್ಟೆ, ಚಂದ್ರಾವತಿ ಮೊದಲಾದವರು ವೇದಿಕೆಯಲ್ಲಿದ್ದರು. ವ್ಯವಸ್ಥಾಪನಾ ಸಮಿತಿ ಸದಸ್ಯ ಸುಧೀರ್ ರಾವ್ ಕೊಡವೂರು ಸ್ವಾಗತಿಸಿದರು. ಪೂರ್ಣಿಮಾ ಜನಾರ್ದನ್ ವಂದಿಸಿದರು. ವಿದ್ವಾಂಸ ಶಿವರಾಜ್ ಉಪಾಧ್ಯಾಯ  ಕಂಬ್ಳಕಟ್ಟ ಕಾರ್ಯಕ್ರಮ ನಿರೂಪಿಸಿದರು.

ಭಾಗವತ ಸಪ್ತಾಹ, ಯಾಗ ಜ.9ರಿಂದ ಜ.15ರವರೆಗೆ ಪ್ರತಿ ನಿತ್ಯ ಬೆಳಗ್ಗೆ 8ರಿಂದ ಭಾಗವತ ಪಾರಾಯಣ ಹಾಗೂ ಸಂಜೆ 4.30ರಿಂದ 6ರ ವರೆಗೆ ಶ್ರೀ ವಿದ್ಯಾಧೀಶ ತೀರ್ಥ ಶ್ರೀ ಗಳಿಂದ ಭಾಗವತ ಪ್ರವಚನ ನಡೆಯಲಿದೆ. ಜ. 12ರಂದು ಸಂಜೆ 5ಕ್ಕೆ ಬೆಳ್ಳಿ ಮಂಟಪದ ಸಮರ್ಪಣೆಯಾಗಲಿದೆ. ಪ್ರತೀದಿನ ವಿಶೇಷವಾಗಿ ಯಾಗಾದಿಗಳು ನಡೆಯಲಿದೆ. ಜ.15ರಂದು ಮಧ್ಯಾಹ್ನ  12.30ರಿಂದ ಮಹಾ ಅನ್ನಸಂತರ್ಪಣೆ ಜರಗಲಿದೆ.

 
 
 
 
 
 
 
 
 
 
 

Leave a Reply