ಗುರು ವಿದ್ಯಾಮಾನ್ಯತೀರ್ಥರ ಮೃತ್ತಿಕಾ ವೃಂದಾವನ ದೊಂದಿಗೆ ಶಿಷ್ಯರ ಸಹ”ವಾಸ”

ವೃಂದಾವನದಲ್ಲೂ ಗುರು ಶಿಷ್ಯರ ಸಹ”ವಾಸ”
ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು. ಈ ಹೆಸರು ಕೇಳಿದೊಡನೇ, ಹಲವಾರು ಆಯಾಮದ, ವ್ಯಕ್ತಿತ್ವ ಕಣ್ಣಮುಂದೆ ಸರಿದು ಹೋಗುತ್ತೆ. ಅವರು ಕರ್ನಾಟಕ ಕಂಡ ಸಂತ ಶ್ರೇಷ್ಠರಲ್ಲಿ ಒಬ್ಬರು. ಹಲವು ಸ್ಥಾಪಿತ ಸೂತ್ರ ಗಳನ್ನು ಮೀರಿ ಕಲ್ಮಶವಿಲ್ಲದ ನಗುವಿ ನೊಂದಿಗೆ ಎಲ್ಲರನ್ನೂ ಜೊತೆಗೆಯಾಗಿ ಕೊಂಡೊಯ್ಯಬಲ್ಲ ಧಾರ್ಮಿಕ ನಾಯಕ ರಾಗಿದ್ದವರು. ಧರ್ಮ ರಕ್ಷಣೆಗೆ ತಮ್ಮ ಜೀವನ ವನ್ನೇ ಮುಡಿಪಾಗಿಟ್ಟು, ಮಾದರಿಯಾದ ಯತಿಗಳು.
ಗುರು ವಾದಿರಾಜರ ನಂತರ ಉಡುಪಿ ಮಠದಲ್ಲಿ 5 ನೆಯ ಬಾರಿ ಪರ್ಯಾಯ ಅಲಂಕರಿಸಿದ ಖ್ಯಾತಿ ಶ್ರೀ ವಿಶ್ವೇಶ ತೀರ್ಥ ಸ್ವಾಮಿಗಳದ್ದು. ಗುರು ವಿದ್ಯಾಮಾನ್ಯರಲ್ಲಿ ಅಧ್ಯಯನ ಆರಂಭಿಸಿದ ಶ್ರೀಗಳು, 8 ವರ್ಷಗಳ ಕಾಲ ಸತತವಾಗಿ ಧಾರ್ಮಿಕ ಗ್ರಂಥಗಳ ಅಧ್ಯಯನ ನಡೆಸಿದರು.

ಗುರು ಶಿಷ್ಯರ ಅಪರೂಪದ ಚಿತ್ರ
1951 ರಲ್ಲಿ ಆಗಮತ್ರಯ ವಿದ್ವಾಂಸರ ಸಮ್ಮೇಳನದಲ್ಲಿ 20 ವರ್ಷದ ತರುಣ ಯತಿಗಳಾಗಿದ್ದ ವಿಶ್ವೇಶ ತೀರ್ಥರ ಪಾಂಡಿತ್ಯ ಕಂಡು ತಲೆದೂಗಿದ್ದ ಜಯಚಾಮರಾಜೇಂದ್ರ ಒಡೆಯರು ಶ್ರೀಗಳನ್ನು ಅರಮನೆಗೆ ಕರೆಸಿ, ಅವರಿಂದ ಪೂಜೆ ಮಾಡಿಸಿದ್ದರು. ಸಕಲ ರನ್ನೂ ಆಕರ್ಷಿಸುವ ವಿದ್ವತ್ತು, ಸೌಜನ್ಯ, ದೀನ ದಲಿತರ ಏಳಿಗೆಯ ಕಾಳಜಿಗಳು ಶ್ರೀಗಳ ವ್ಯಕ್ತಿತ್ವಕ್ಕೆ ಮುಕುಟ ಪ್ರಾಯ.
ಮಾನವತೆಯೇ ದೇಹ ಧರಿಸಿದಂತಿದ್ದ ಪೇಜಾವರ ಶ್ರೀಗಳನ್ನು ಕಂಡು ಆಕರ್ಷಿತ ರಾಗದವರಾರು? ಈಗ ಇದೆಲ್ಲವೂ ನೆನೆಪು ಮಾತ್ರ. ಬೆಂಗಳೂರಿನ ಪೂರ್ಣ ಪ್ರಜ್ಞ ವಿದ್ಯಾಪೀಠದಲ್ಲಿ ಕೀರ್ತಿಶೇಷ ಶ್ರೀಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ವೃಂದಾವನ ಪೇಜಾವರ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ವಿಶೇಷ ಮುತುವರ್ಜಿಯಿಂದ ನಿರ್ಮಾಣ ಕಾರ್ಯ ಭರದಿಂದ ಸಾಗುತಿದೆ.
ವೃಂದಾವನ ನಿರ್ಮಾಣ ಕಾರ್ಯ
ಅಕ್ಕ ಪಕ್ಕದಲ್ಲಿ ಎರಡು ವೃಂದಾವನಿದೆ. ಒಂದು ಪೇಜಾವರ ಶ್ರೀಗಳದ್ದು, ಇನ್ನೊಂದು ವಿದ್ಯಾಮಾನ್ಯತೀರ್ಥ ಶ್ರೀಪಾದರದ್ದು. ಡಿಸೆಂಬರ್ 17ಕ್ಕೆ ಗುರುಗಳ ಪ್ರಥಮಾರಾಧನೆ. ಈ ಸಂದರ್ಭದಲ್ಲಿ ಶ್ರೀಗಳ ವೃಂದಾವನದ ಕೆಲಸ ಸಂಪೂರ್ಣ ಮುಗಿಯಲಿದೆ. ಪೇಜಾವರ ಶ್ರೀಗಳ ಆಶಯದಂತೆ ಪಕ್ಕದಲ್ಲಿ ಅವರ ಗುರುಗಳಾದ ವಿದ್ಯಾಮಾನ್ಯತೀರ್ಥರ ವೃಂದಾವನವೂ ಆಗುತ್ತಿದೆ. ವಾಸ್ತು ತಜ್ಞ ಸುಬ್ರಹ್ಮಣ್ಯ ಭಟ್ ರ ನೇತೃತ್ವದಲ್ಲಿ ಶಿಲ್ಪಿ ಕಾರ್ಕಳ ರಾಮಚಂದ್ರ ಭಟ್ ಈ ವೃಂದಾವನ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ
 
 
 
 
 
 
 
 
 
 
 

Leave a Reply