ಉಚ್ಚಿಲ ​ಮಹಾಲಕ್ಷ್ಮೀ 400 ಗ್ರಾಂ ಚಿನ್ನದ ಮೀನಿನ ಸರ​ದಲ್ಲಿ ಶೋಭಿತೆ 

ಉಡುಪಿ: ಇಲ್ಲಿನ ಉಚ್ಚಿಲದ ಮೊಗವೀರ ಸಮುದಾಯದ ಶ್ರೀ ಮಹಾಲಕ್ಷ್ಮೀ ದೇವಿಯ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ರಥೋತ್ಸವ ಮತ್ತು ನಾಗಮಂಡಲ ಕಾರ್ಯಕ್ರಮಗಳದ ​ಅದ್ದೂರಿಯಿಂದ ಸಾಗುತ್ತಿರುವ ​ಪ್ರಯುಕ್ತ ಬುಧವಾರ ಮಂಗಳೂರಿನ ಸೌತ್ ವಾರ್ಫ್ ಯಾಂತ್ರಿಕ ಮೀನುಗಾರರ ಸಹಕಾರಿ ಸಂಘ ನಿಯಮಿತದ ವತಿಯಿಂದ ದೇವಿಗೆ ಅಪರೂಪದ ಚಿನ್ನದ ಮೀನಿನ ಸರವನ್ನು ಸಮರ್ಪಿಸಲಾಯಿತು.

ಚಿನ್ನದಲ್ಲಿ ಮೀನಿನ ರೂಪಗಳಿಂದ ರಚಿಸಲಾಗಿರುವ ಈ ಸರವು ಸುಮಾರು 50 ಪವನ್ (400) ತೂಕವಿದ್ದು, ಅತ್ಯಾಕರ್ಷಕವಾಗಿದೆ. ಮೂಗವೀರ ಸಮುದಾಯದವರು ತಮ್ಮ ಕುಲವೃತ್ತಿಯಾದ ಮೀನುಗಾರಿಕೆಯ ನೆನಪಿನಲ್ಲಿ

ಈ ಸರವನ್ನು ದೇವಿಗೆ ಸಮರ್ಪಿಸಲಾಗಿದೆ.

Leave a Reply