ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಿಶ್ವ ರೂಪದರ್ಶನ 

ಕಲ್ಯಾಣಪುರ ಶ್ರೀ​ ವೆ೦ಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಆದಿತ್ಯವಾರ  ಮುಂಜಾನೆ ವಿಶ್ವ​ರೂಪ ದರ್ಶನ ಜರಗಿತು​. ಸಾವಿರಾರು ಹಣತೆ ದೀಪಗಳ ನಡುವೆ ಮೂಡಿಬಂದ “ಭಾರತ್ ”  ಹೂವಿನ ರಂಗವಲ್ಲಿ ರಚಿಸಿದ  ಶ್ರೀ ವೆಂಕಟರಮಣ, ಭಕ್ತರ ಮನ ಸೆಳೆಯಿತು​.  

ಶ್ರೀ ದೇವರಿಗೆ ವಿಶೇಷ ಹೂವಿನ ಅಲಂಕಾರ ಹಾಗು ಮಹಾ ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯತು​. ಆಡಳಿತ ಮೊಕ್ತೇಸರ ಕೆ ಅನ೦ತಪದ್ಮನಾಭ ಕಿಣಿ, ಅರ್ಚಕರಾದ ಜಯದೇವ ಭಟ್ ,ಗಣಪತಿ ಭಟ್  ಹಾಗೂ ಆಡಳಿತ ಮ೦ಡಳಿಯ ಸದಸ್ಯರು ಮತ್ತು ಜಿಎಸ್ ಬಿ ಸಭಾ  ಸದಸ್ಯರು ಹಾಗೂ ಸಮಾಜ ಭಾ೦ಧವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply