ಮಧುಮೇಹ ಕುರಿತು ಅವಜ್ಞೆಸಲ್ಲ~ ಶಾಸಕ ಯಶ್ ಪಾಲ್ ಸುವರ್ಣ .

ಉಡುಪಿ , 20: ಪ್ರಸಕ್ತ ಕಾಲಘಟ್ಟದಲ್ಲಿ ಮಧುಮೇಹ ತೀವ್ರವಾಗಿ ವ್ಯಾಪಿಸುತ್ತಿದೆ. ಹಾಗಾಗಿ ಮಧುಮೇಹ ಬಾರದಂತೆ ತಡೆಯಲು ಎಲ್ಲರೂ ಪ್ರಯತ್ನಪಡಬೇಕು. ಈ ಬಗ್ಗೆ ಅವಜ್ಞೆಸಲ್ಲ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು.

ಅವರು ಆದರ್ಶ ಚಾರಿಟೇಬಲ್ ಟ್ರಸ್ಟ್ , ಆದರ್ಶ ಸಮೂಹ ಸಂಸ್ಥೆಗಳು, ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ , ಜಿಲ್ಲಾ ಆಸ್ಪತ್ರೆ, ಜಿಲ್ಲಾ ಸರ್ವೇಕ್ಷಣಾ ಘಟಕ , ಐಎಂಎ , ಎಪಿಐ ಉಡುಪಿ ಮತ್ತು ಲಯನ್ಸ್ ಜಿಲ್ಲಾ 317ಸಿ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಆರಂಭವಾದ ಮಧುಮೇಹ ಬೃಹತ್ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು.

ಆದರ್ಶ ಆಸ್ಪತ್ರೆಯು ಅನೇಕ ಸಮಾಜಮುಖಿ ಚಟುವಟಿಕೆಗಳನ್ನು ಮಾಡುತ್ತಿದೆ. ಸರಕಾರ ಮಾಡುವ ಕೆಲಸಕ್ಕೆ ಉತ್ತೇಜನೆ ನೀಡುತ್ತಿದೆ ಎಂದು ಶ್ಲಾಘಿಸಿದರು. ಮಧುಮೇಹ ಶಿಕ್ಷಣ ಇಂದಿನ ಅನಿವಾರ್ಯ ಕೇವಲ ಮಧುಮೇಹ ರೋಗ ಹೆಚ್ಚು ಸಮಸ್ಯೆ ತರದಿದ್ದರೂ ಈ ರೋಗದಿಂದ ಉಂಟಾಗುವ ದೂರ ಪರಿಣಾಮ ಮತ್ತು ಇತರ ಅಂಗಾಂಗಗಳ ಮೇಲೆ ಬೀರುವ ಪರಿಣಾಮದ ಬಗ್ಗೆ ಜನ ಜಾಗೃತಿ ಅನಿವಾರ್ಯ ಎಂದು ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಿ. ಎಸ್. ಚಂದ್ರಶೇಖರ್ ತಮ್ಮ ಪ್ರಸ್ತಾವಿಕ ಭಾಷಣದಲ್ಲಿ ತಿಳಿಸಿದರು.

ಬಿಜೆಪಿ ಯ ಮುಖಂಡ ಉದಯಕುಮಾರ್ ಶೆಟ್ಟಿ ಲೆಕ್ಕ ಪರಿಶೋಧಕ ಅಜಿತ್ ಕುಮಾರ್ ರಾವ್, ಎಪಿಐ ಅಧ್ಯಕ್ಷ ಡಾ. ಅಶೋಕ್ ಕುಮಾರ್ ಒಕುಡೆ, ಲಯನ್ಸ್ ಜಿಲ್ಲಾ ಗವರ್ನರ್ ಡಾ. ನೇರಿ ಕಾರ್ನೆಲಿಯೊ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಜಿಲ್ಲಾ ಸರ್ಜನ್ ಡಾ. ವೀಣಾ ಕುಮಾರಿ, ಐಎಂಎ ಉಡುಪಿ ಅಧ್ಯಕ್ಷರಾದ ಡಾ. ರಾಜಲಕ್ಷ್ಮಿ, ಕಾರ್ಯದರ್ಶಿ ಡಾ. ಅರ್ಚನಾ ಭಕ್ತಾ,ಜಿಲ್ಲಾ ಎಂಸಿಡಿ ಸಂಯೋಜಕರು ಡಾ. ಅಂಜಲಿ ಉಪಸ್ಥಿತರಿದ್ದರು.

ಆದರ್ಶ ಆಸ್ಪತ್ರೆಯ ಡಾ. ಅನುಶ್ರೀ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸಹ ಪ್ರಬಂಧಕ ಪ್ರಕಾಶ್ ವಂದಿಸಿದರು. ಹಲವು ಕಾಲೇಜಿನ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಇಂದ ಉಡುಪಿ ಜಿಲ್ಲಾ ಆಸ್ಪತ್ರೆ ಇಂದ ಆದರ್ಶ ಆಸ್ಪತ್ರೆಯವರೆಗೆ ಕಾಲ್ನಡಿಗೆ ಜಾಥಾ ನಡೆಯಿತು. ಮಧುಮೇಹ ಕುರಿತಾಗಿ ಪ್ರಜ್ಞೆ ಮೂಡಿಸುವ ಬೀದಿ ನಾಟಕ, ಟ್ಯಾಬ್ಲೋ ಪ್ರದರ್ಶನಗೊಂಡವು.

Leave a Reply