ಕುಬೇರ ಲಕ್ಷ್ಮಿ ಪ್ರತಿಷ್ಠ ವರ್ಧಂತಿ

ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣ್ಣಗುಡ್ಡೆ.

ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ವಿಶೇಷ ಸಾನಿಧ್ಯವಾದ ಕುಬೇರ ಚಿತ್ರಲೇಖ ಸಹಿತ ಮಹಾಲಕ್ಷ್ಮಿಯ ಸನ್ನಿಧಾನದ ಪ್ರಥಮ ಪ್ರತಿಷ್ಠ ವಾರ್ಷಿಕ ಮಹೋತ್ಸವ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿ ಗಳ ನೇತೃತ್ವದಲ್ಲಿ ಸಂಪನ್ನಗೊಂಡಿತು.ಆ ಪ್ರಯುಕ್ತ ಕ್ಷೇತ್ರ ದಲ್ಲಿ ಕಪಿಲ ಮಹರ್ಷಿಗಳ ಸನ್ನಿದಾನದಲ್ಲಿ ಸ್ನಪನ ಕಳಶಭಿಷೇಕ ಕುಬೇರ ಲಕ್ಷ್ಮಿ ಸನ್ನಿದಿಯಲ್ಲಿ ಲಕ್ಷ್ಮಿ ಸಹಸ್ರ ನಾಮ ಪಾಯಸ ಹೋಮ ಕುಬೇರ ಮಂತ್ರ ಹೋಮ ಪಂಚವಂಶತಿ ಕಲಶ ಅಭಿಷೇಕ ನೆರವೇರಿತು..

ಯಗದ ಅಂಗವಾಗಿ ಬ್ರಾಹ್ಮಣ ಸುವಾಸಿನಿ ಆರಾಧನೆ ಕನ್ನಿಕಾರಾದನೆ ದಂಪತಿ ಪೂಜೆ ಕುಮಾರ ಪೂಜೆ ಆಚಾರ್ಯ ಪೂಜೆ
ಮಹಾ ಅನ್ನಸಂತರ್ಪಣೆ ನೆರವೇರಿತು.. ಮಧ್ಯಾಹ್ನ ಮಹಾಪೂಜೆಯ ನಂತರ ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯರಾಧನೆ ಕುಮಾರಿಧನ್ಯ ಶ್ರೀ ಹಾಗೂ ಸಾತ್ವಿಕ ನೃತ್ಯಲಯದ ಅಮೃತ ಆಶ್ಲೇಶ್ ಅವರ ಶಿಷ್ಯರಾದ ಕುಮಾರಿ ದೃಥಿ ಧನ್ವಿತ ಅಶ್ವಿನಿ ಅವರಿಂದ ಸಮರ್ಪಿಸಲ್ಪಟ್ಟಿತು

ಸಂಜೆ ಕುಬೇರಲಕ್ಷ್ಮಿಯ ಸನ್ನಿಧಾನದಲ್ಲಿ ವಿಶೇಷ ದೀಪಾರಾಧನೆ ಸಹಿತ ರಂಗ ಪೂಜಾ ಮಹೋತ್ಸವ ನೆರವೇರಿತು. ರಾತ್ರಿಯ ಕಲ್ಪೋಕ್ತ ಪೂಜೆಯ ನಂತರ ವಿದುಷಿ ವೀಣಾ ಸಾಮಗ ಅವರ ಶಿಷ್ಯಯಾದ ಕುಮಾರಿ ಪ್ರಾರ್ಥನಾ ಅವರಿಂದ ನೃತ್ಯರಾಧನೆ ನೆರವೇರಿತು. ಅಮಾವಾಸ್ಯೆಯ ಪರ್ವಕಾಲದಲ್ಲಿ ಕ್ಷೇತ್ರ ಕುಬೇರ ಲಕ್ಷ್ಮಿಯ ಸನ್ನಿಧಾನದಲ್ಲಿ ಸಾಮೂಹಿಕವಾಗಿ ಕುಬೇರ ಲಕ್ಷ್ಮಿ ಸಹಸ್ರ ನಾಮಾವಳಿ ಸಹಿತ ಅರ್ಚನೆ ಹಾಗೂ ಪೂಜೆಗಳು ನೆರವೇರಲಿವೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ

 
 
 
 
 
 
 
 
 
 
 

Leave a Reply