ಬ್ರಾಹ್ಮಣ ಮಹಾಸಭಾ ಕೊಡವೂರು: ನೂರೆಂಟು ಕಾಯಿ ಗಣಹೋಮ ಹಾಗು ವಾರ್ಷಿಕ ಮಹಾ ಸಭೆ:

ಸೃಷ್ಟಿಯ ಮೊದಲ ದಿನವಾದ ಯುಗಾದಿಯಂದು ಮಂಗಳ ದ್ರವ್ಯಗಳನ್ನು ಅಂದರೆ ದೇವರ ಬಗ್ಗೆ ಜ್ಞಾನವನ್ನು ಹೆಚ್ಚಿಸುವ ವಸ್ತು ಗಳನ್ನು ಕಂಡು ನಮಸ್ಕರಿಸಿದಾಗ ವರುಷವಿಡೀ ಸುಖ,ಸಮೃದ್ಧಿ ಸಂತಸ ಪ್ರಾಪ್ತಿಯಾಗುವುದು ಎಂದು ವೇದಮೂರ್ತಿ ವಾದಿರಾಜ ತಂತ್ರಿ ಪುತ್ತೂರು ತಮ್ಮ ಪ್ರವಚನದಲ್ಲಿ ವಿಶ್ಲೇಷಿಸಿದರು.ಕೊಡವೂರು ಬ್ರಾಹ್ಮಣ ಮಹಾಸಭಾ ಆಯೋಜಿಸಿದ್ದ 108 ಕಾಯಿ ಗಣ ಹೋಮದ ಹಾಗೂ ವಾರ್ಷಿಕ ಮಹಾಸಭೆಯ ಸಂದರ್ಭ ದಲ್ಲಿ ಯುಗಾದಿ ಹಬ್ಬದ ಔಚಿತ್ಯದ ಬಗ್ಗೆ ಪ್ರವಚನ ಕಾರ್ಯಕ್ರಮ ನಡೆಸಿಕೊಟ್ಟ ಅವರು ಯುಗಾದಿಯಂದು ಪಂಚಾಂಗ ಪಠಣ ಅಥವಾ ಶ್ರವಣ ಮಾಡಿದಾಗ ಆ ಸಂವತ್ಸರದ ಆಗುಹೋಗುಗಳನ್ನು ಮನನ ಮಾಡಿದಂತಾಗುವುದು.

ಅಲ್ಲದೆ ಬೇವು ಬೆಲ್ಲದ ಸೇವನೆಯು ಜೀವನದಲ್ಲಿ ಬರುವ ನೋವು ನಲಿವುಗಳನ್ನು ಸಮನಾಗಿ ಸ್ವೀಕರಿಸಿ ಬದುಕಿನಲ್ಲಿ ಸ್ಥಿತಪ್ರಜ್ಞತೆ ಯಿಂದ ಭಗವಂತನ ಆರಾಧನೆ ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು .ವಾರ್ಷಿಕ ಮಹಾಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು.

ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯರಾದ ಶ್ರೀ ಮೋಹನ ಉಪಾಧ್ಯಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬ್ರಾಹ್ಮಣ ಮಹಾ ಸಭಾ ಕೊಡವೂರು ಇದರ ಅಧ್ಯಕ್ಷರಾದ ಶ್ರೀನಿವಾಸ ಉಪಾಧ್ಯಾಯ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ್ ಕಳೆದ ಒಂದು ವರುಷದ ಕಾರ್ಯಕ್ರಮಗಳ ವರದಿ ವಾಚಿಸಿದರು. ಕೋಶಾಧಿಕಾರಿ ಶ್ರೀಧರ ಶರ್ಮ ಖರ್ಚು ವೆಚ್ಚಗಳ ಆಯವ್ಯಯ ಪಟ್ಟಿ ಮಂಡಿಸಿದರು.ಗೌರವಾಧ್ಯಕ್ಷರಾದ ಪಿ ಗುರುರಾಜ್ ರಾವ್, ಗೋವಿಂದ ಐತಾಳ್ ಹಾಗು ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ವೈ ಸುಧಾಕರ್ ರಾವ್ ಉಪಸ್ಥಿತರಿದ್ದರು. ಶ್ರೀಜನ್ಯ ಮತ್ತು ಶ್ರೀಪ್ರಿಯ ಪ್ರಾರ್ಥನೆ ನಡೆಸಿಕೊಟ್ಟರು .ಭಾರತೀ ಸುಬ್ರಹ್ಮಣ್ಯ ಸನ್ಮಾನ ಪತ್ರ ವಾಚಿಸಿದರು. ಜೊತೆ ಕಾರ್ಯದರ್ಶಿ ರಾಜಶ್ರೀ ಪ್ರಸನ್ನ ಧನ್ಯವಾದವಿತ್ತರು. ಚಂದ್ರಶೇಖರ ರಾವ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply