ಬೆನ್ನು ಮೂಳೆ ಮುರಿತಕ್ಕೆ ಒಳಗಾದವರ ಆರೋಗ್ಯ ತಪಾಸಣೆ

ಉಡುಪಿ: ಜಿಲ್ಲೆಯಲ್ಲಿ ಒಟ್ಟು 60 ಕ್ಕೂ ಹೆಚ್ಚಿನ ಬೆನ್ನು ಮೂಳೆ ಮುರಿತಕ್ಕೆ ಒಳಗಾದವರು ನಾಲ್ಕು ಗೋಡೆಯ ಮಧ್ಯದಲ್ಲಿ ದುಃಖದ ಜೀವನವನ್ನು ನಡೆಸುತ್ತಿದ್ದಾರೆ. ನಮ್ಮಿಂದ ಏನೂ ಸಾಧ್ಯವಿಲ್ಲ, ನಾವು ಮನೆಯವರಿಗೆ,ಸಮಾಜಕ್ಕೆ ಹೊರೆಯಾಗಿದ್ದೇವೆ ಎಂದು ದುಃಖಿಸುತ್ತಾ ಇದ್ದು, ಅಂತಹವರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಇಟ್ಟು ಇವರುಗಳ ಮತ್ತು ಮನೆಯವರಿಗೆ ಸಮಾಜಕ್ಕೆ ಇನ್ನೊಬ್ಬರಿಗೆ ಹೊರೆಯಾಗದಂತೆ ಸ್ವಂತ ಉದ್ಯೋಗ ಮಾಡಿ ಬದುಕು ಕಟ್ಟಿಕೊಳ್ಳಬೇಕಾದರೆ ಇಂತಹ ಶಿಬಿರಗಳಿಂದ ಪುನಃ ಚೇತನ ಆಗಲು ಸಾದ್ಯವಿದೆ ಎಂದು ಸೇವಧಾಮ ಕನ್ಯಾಡಿ ಬೆನ್ನು ಮೂಳೆ ಮುರಿತತಕ್ಕೆ ಒಳಗಾದವರ ಪುನಃ ಚೇತನದ ಅಧ್ಯಕ್ಷ ವಿನಾಯಕ್ ರಾವ್ ತಿಳಿಸಿದರು.

ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.ಸೇವಾಧಾಮದ ನಿರ್ದೇಶಕ ಮತ್ತು ಉಡುಪಿ ನಗರ ಸಭೆಯ ಸದಸ್ಯ ಕೆ ವಿಜಯ್ ಕೊಡವೂರು ಮಾತನಾಡಿ, ಸೇವಾ ಧಾಮದಂತಹ ಪುನಃ ಚೇತನ ಮಾಡುವ ಕಾರ್ಯ ಉಡುಪಿ ಜಿಲ್ಲೆಯಲ್ಲಿ ಆಗಬೇಕಾಗಿದೆ. ದಾನಿಗಳನ್ನು ಮತ್ತು ಸರಕಾರದಿಂದ ಇವರಿಗೆ ಬೇಕಾಗಿರುವ ವ್ಯವಸ್ಥೆ ಮತ್ತು ಸಹಕಾರವನ್ನು ನೀಡಲು ನಾನು ಬದ್ಧನಾಗಿದ್ದೇನೆ, ಇದು ನನ್ನ ಜೀವನದ ಗುರಿ ಎಂದು ತಿಳಿಸಿದರು.

 ಉಜ್ಜಾಡಿ ಪ್ರಭಾಕರ್ ನಾಯಕ್, ಸೇವಾ ಧಾಮದ ನಿರ್ದೇಶಕ ರಾಯನ್ ಫೆರ್ನಾಂಡಿಸ್, ರೂಪಾಲಕ್ಷ್ಮಿ DNA ಬೆಂಗಳೂರು, ಸಕ್ಷಮ ಉಡುಪಿ ಜಿಲ್ಲಾ ಅಧ್ಯಕ್ಷೆ ಲತಾ ಭಟ್, ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರಿನ ಅಧ್ಯಕ್ಷ ಹರೀಶ್ ಕೊಡವೂರು,ಡಾ ಶರತ್, ಮನೋರಾಮ, ಇನ್ನಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply