ಕವನ “ಬಣ್ಣ” ~ಸುವತ್ಸ

ಭಿನ್ನತೆಯಿದ್ದರೂ
ಭಿನ್ನಮತವಿಲ್ಲ
ವರ್ಣದ್ವೇಷವಿಲ್ಲ
ತಾರತಮ್ಯವಿಲ್ಲ

ಪ್ರಕೃತಿ
ಮೌನಿಯಾಗಿ ಸದಾ
ಕಾರ್ಯವೆಸಗುವುದು ಗಡಿಯಾರದಂತೆ
ತೋರುವುದು ಮನುಕುಲಕೆ ಸಹಜ ಜೀವನಧರ್ಮ

ಎಂದು ನೀ ಅರಿಯುವೆಯೋ, ಹೇ ಮನುಜ!
ಬಣ್ಣಗಳ ಭಿನ್ನತೆ
ಭಿನ್ನಮತ ಮೂಡಿಸುವುದಿಕ್ಕಲ್ಲ
ವರ್ಣದ್ವೇಷ ಹುಟ್ಟುಹಾಕಲಲ್ಲ  
ತರತಮಕ್ಕಲ್ಲವೆಂದು?

-ಸುವತ್ಸ

 
 
 
 
 
 
 
 
 
 
 

Leave a Reply