Janardhan Kodavoor/ Team KaravaliXpress
24 C
Udupi
Saturday, January 23, 2021

2020 ಪರೀಕ್ಷೆಯ ವಷ೯ದಲ್ಲಿ ಕಲಿತ ಪಾಠವನ್ನು 2021ಕ್ಕೆ ಮರೆಯದಿರೋಣ~ರಾಘವೇಂದ್ರ ಪ್ರಭು, ಕವಾ೯ಲು

ಹೊಸ ವರುಷ, ಪ್ರತಿ ನಿಮಿಷ, ತರಲಿ ಹರುಷ, ಇರಲಿ ಸರಸ, ಬೇಡ ವಿರಸ ಎಂಬ ಶುಭಕಾಮನೆಯೊಂದಿಗೆ ಹೊಸ ವರ್ಷ 2021 ಕ್ಕೆ ಕಾಲಿಡೋಣ. ಈಗ ಕಾಡುವ ಒಂದು ಪ್ರಶ್ನೆಯೇನೆಂದರೆ ನಮ್ಮ ಕೈಗೂಡದ ಆಸೆಗಳ ಪೂರೈಕೆಗೆ ಹೊಸ ವರ್ಷಕ್ಕೆ ಕಾಯಬೇಕೇ? ಈ ಕಾಯ೯ವನ್ನು ಇಂದೇ ಪ್ರಾರಂಭಿಸೋಣ ಇನ್ನು ನಾವು ಹೊಸ ವರ್ಷವನ್ನು ಅಷ್ಟೊಂದು ಸಂಭ್ರಮದಿಂದ, ಸಡಗರದಿಂದ ಆಚರಿಸಲು ಕಾರಣವಾದರೂ ಏನು?

ಏಕೆಂದರೆ ಈ ಹೊಸ ವರ್ಷದ ಆಚರಣೆ ಸಂಪ್ರದಾಯವು ನಮ್ಮ ಪೂರ್ವಿಕರಿಂದ ಬಳುವಳಿಯಾಗಿ ಬಂದಿದೆ. ವಿವಿಧ ಪಂಗಡದ ಜನರ ಸಂಪ್ರದಾಯಗಳು ಮತ್ತು ಸಂಸ್ಕೃತಿ ಅದಾಗಿದೆ. ವಿವಿಧ ಜನರ ಶೈಲಿ ಮತ್ತು ಪದ್ಧತಿ ಗಳಲ್ಲಿ ಸ್ವಲ್ಪ ಭಿನ್ನತೆಯಿದ್ದರೂ, ಹೊಸ ವರ್ಷದ ಆಚರಣೆ ಬಂತೆಂದರೆ ಸಾಕು ಎಲ್ಲರದ್ದೂ ಒಂದೇ ರೂಪ, ಒಂದೇ ಗುರಿ. ಪ್ರತಿ ವರ್ಷದ ಜನವರಿ ಒಂದರಂದು ಹೊಸ ವರ್ಷದ ಆಚರಣೆ ಶುರುವಾಗುತ್ತದೆ.

ಹೊಸ ವರ್ಷವನ್ನು ಹೊಸ ಜೀವನದೊಂದಿಗೆ ಆರಂಭಿಸಲು ಜನತೆ ಬಯಸುತ್ತದೆ. ಅದು ಮಾನವನ ಸಹಜ ಸ್ವಭಾವ. ಜನರು ಹೊಸತಿನ ಬಗ್ಗೆ ಹೊಸ ವಿಷಯಗಳನ್ನು ನಿರೀಕ್ಷಿಸುತ್ತಾರೆ. ಈ ಪರಿಕಲ್ಪನೆಯು ನ್ಯೂ ಇಯರ್‌ಗೆ ಅನ್ವಯವಾಗುತ್ತದೆ. ಹಳೆಯ ವರ್ಷದಲ್ಲಿ ಮಾಡಲಾಗದ್ದನ್ನು ಈ ವರ್ಷ ಮಾಡಿ ತೋರಿಸುವುದಾಗಿ ಕೆಲವರು ಹೊಸ ವರ್ಷಕ್ಕೆ ಪ್ರತಿಜ್ಞೆ ಮಾಡುತ್ತಾರೆ.

ಆದರೆ ಬರೀ ಪ್ರತಿಜ್ಞೆಯಲ್ಲೇ ಕಾಲಕಳೆದು ಅದು ಹೊಸ ವರ್ಷಕ್ಕೆ ನೆರವೇರದಿದ್ದಾಗ ಛೇ, ಈ ವರ್ಷ ಅದೃಷ್ಟ ಸರಿಯಿಲ್ಲ. ಬರುವ ವರ್ಷ ನಮ್ಮ ಅದೃಷ್ಟ ಪರೀಕ್ಷೆ ಮಾಡೋಣ ಎಂದು ಬರುವ ವರ್ಷಕ್ಕೆ ಮುಂದೂಡುತ್ತೇವೆ. ಆದರೆ ಯಾವುದೇ ಕೆಲಸಕ್ಕೆ ಬೇಕಾದ ಅರ್ಹತೆ, ಕೌಶಲ್ಯ ಪಡೆಯದೆ ವರ್ಷ, ವರ್ಷವೂ ಮುಂದೂಡುತ್ತಾ ಹೋಗುವಷ್ಟರಲ್ಲಿ ವೃದ್ಧಾಪ್ಯಕ್ಕೆ ಕಾಲಿರಿಸಿರುತ್ತೇವೆ.

ಹಿಂದಿನ ವರ್ಷವು ಅಷ್ಟೇನೂ ಭರವಸೆದಾಯಕವಾಗಿಲ್ಲದಿದ್ದರೆ ನೀವು ಹೊಸ ಜೀವನಕ್ಕೆ ಕಾಲಿರಿಸಲು ಹೊಸ ವರ್ಷವು ಒಂದು ಎಕ್ಸ್‌ಕ್ಯೂಸ್ ಎನ್ನಬಹುದು. ನಿಮ್ಮ ಹಿಂದಿನ ವರ್ಷವು ಚೆನ್ನಾಗಿದ್ದರೆ, ಈ ವರ್ಷವು ಇನ್ನೂ ಹೆಚ್ಚು ಸಮೃದ್ಧಿ ಮತ್ತು ಅದೃಷ್ಟಕ್ಕಾಗಿ ಆಶಿಸುತ್ತೀರಿ.

ಇನ್ನು ಕೆಲವರಿಗೆ ಇಡೀ ವರ್ಷದ ಶ್ರಮದಾಯಕ ದುಡಿಮೆ ಬಳಿಕ ಮನಸ್ಸು ಸ್ವಲ್ಪ ವಿಶ್ರಾಂತಿಯನ್ನು, ಮನೋರಂಜ ನೆಯನ್ನು ಬಯಸುತ್ತದೆ. ಕುಟುಂಬದ ಬಂಧವನ್ನು ಗಟ್ಟಿಗೊಳಿಸಲು ಮತ್ತು ಪ್ರೀತಿ, ಅನುಬಂಧವನ್ನು ಬಿತ್ತಲು ಸ್ನೇಹಿತರಿಗೆ ಮತ್ತು ಕುಟುಂಬಗಳಿಗೆ ಹೊಸವರ್ಷವೊಂದು ಸುವರ್ಣಾವಕಾಶ. ನಮ್ಮ ಎಲ್ಲ ಕೆಲಸಕ್ಕೆ ಸ್ವಲ್ಪ ಸಮಯ ವಿಶ್ರಾಂತಿ ಕೊಟ್ಟು ರಿಲಾಕ್ಸ್ ಮಾಡುವ ಮೂಲಕ ಸಂಭ್ರಮ, ಸಡಗರಕ್ಕೆ ಇದೊಂದು ಶುಭಗಳಿಗೆ. ಎಂದು ಹೇಳಬಹುದಾಗಿದೆ.

ಹಳೆ ವಷ೯ದಿಂದ ಪಾಠ ಕಲಿಯಬೇಕಾಗಿದೆ :-
2020 ರ ಇಸವಿ ಪರೀಕ್ಷೆಯ ಕಾಲವಾಗಿತ್ತು ಒಂದೆಡೆ ಕರೋನಾ ಕಾಟದಿಂದ ಎಲ್ಲರೂ ತೊಂದರೆ ಅನುಭವಿ ಸಿದರೆ, ಮತ್ತೊoದೆಡೆ ಪ್ರವಾಹ ಪ್ರಾಕೃತಿಕ ವಿಕೋಪದ ರುದ್ರ ನತ೯ನ ಎಲ್ಲರನ್ನು ಹೈರಾಣಾಗಿಸಿದೆ. ಒಡವ ಶ್ರೀಮಂತ ಒಂದೇ ಎಂಬoತಾಗಿದ್ದಾರೆ. ಪ್ರಕೃತಿಯಿಂದ ನಾವೆಲ್ಲರೂ ಪಾಠ ಕಲಿತು 2021ಕ್ಕೆ ಅದನ್ನು ಅನುಷ್ಟಾನಗೊಳಿಸೋಣ.

ಹೊಸ ವರುಷವದೇನೋ ಸಂಭ್ರಮ, ಅದೇನೋ ಸಡಗರ,
ಹಳೆಯ ನೆನಪಿನ ಬುತ್ತಿಯನ್ನು ಮುಚ್ಚಿ, ಹೊಸ ಜೀವನದ ಪಯಣಕ್ಕೆ
ಅದೇನೋ ಕಾತುರ, ಅದೇನೋ ಆತುರ,
ಹಾದಿಯಲ್ಲಿ ಮುಳ್ಳುಕಲ್ಲುಗಳಿರಬಹುದು, ಎಚ್ಚರ,
ಎದುರಿಸಿ ಮುನ್ನಡೆದಾಗಲೇ ಸುಖಸಾಗರ.
ಕ್ಯಾಲೆಂಡರ್ ಬದಲಾದಾಗ ನಮ್ಮ ಜೀವನ ಕ್ರಮ ವಿಚಾರ ವೈವಿದ್ಯತೆ ಕೂಡ ಬದಲಾಗಲಿ’
ಬದಲಾವಣೆ ನಮ್ಮದಾಗಲಿ’

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಪಾಜಕಕ್ಷೇತ್ರದಲ್ಲಿ ಕಾಣಿಯೂರು ಮಠಾಧೀಶರಿಂದ ಮಧ್ವನವಮಿಯ ವಿಶೇಷ ಪೂಜೆ

ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಅವತಾರವೆತ್ತಿದ ಪುಣ್ಯ ಸ್ಥಳ ಪಾಜಕಕ್ಷೇತ್ರದಲ್ಲಿ ಮಧ್ವನವಮಿಯ ಪ್ರಯುಕ್ತ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ 7 ದಿನಗಳಿಂದ ನಡೆಯುತಿದ್ದ ಋಗ್ ಸಂಹಿತಾ ಯಾಗದ ಪೂರ್ಣಾಹುತಿ,ವಿದ್ವಾಂಸರಿಂದ ಸರ್ವಮೂಲ ಪಾರಾಯಣ, ಪ್ರವಚನಗಳು...

ವೇಗವಾಗಿ ಸಾಗುತ್ತಿದೆ ಅಂಬಾಗಿಲು ಪೆರಂಪಳ್ಳಿ ಮಣಿಪಾಲ ರಸ್ತೆ ಅಗಲೀಕರಣ ಕಾಮಗಾರಿ

ಉಡುಪಿ:  ಲೋಕೋಪಯೋಗಿ ಇಲಾಖೆ ವತಿಯಿಂದ ಮತ್ತು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಟಿ ಡಿ ಆರ್ ಸಹಕಾರದೊಂದಿಗೆ ಚತುಷ್ಪಥ ಗೊಳ್ಳುತ್ತಿರುವ ಅಂಬಾಗಿಲು  ಪೆರಂಪಳ್ಳಿ ಮಣಿಪಾಲ ರಸ್ತೆ ಅಗಲೀಕರಣದ ಕಾಮಗಾರಿbÿಶಾಸಕ ಕೆ. ರಘುಪತಿ ಭಟ್ ಮಾರ್ಗದರ್ಶನದಲ್ಲಿ...

ಉಡುಪಿಯಲ್ಲಿ ವೈದ್ಯರು ಸೇರಿದಂತೆ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ ವಿತರಣೆ

ಉಡುಪಿಯಲ್ಲಿ  ವೈದ್ಯರು ಸೇರಿದಂತೆ 5078 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ 2657 ಮಂದಿ ಶುಕ್ರವಾರ ಕೊರೋನ ವಿರುದ್ಧದ ‘ಕೊವಿಶೀಲ್ಡ್’ ಲಸಿಕೆ ಪಡೆದಿದ್ದಾರೆ. ಇದು ದಿನದ ನಿಗದಿತ ಗುರಿಯ ಶೇ.52ರಷ್ಟು ಸಾಧನೆಯಾಗಿದೆ ಎಂದು ಉಡುಪಿ ಜಿಲ್ಲಾ...

ಮಂಗಳೂರಿನಲ್ಲಿ ರಾಗಿಂಗ್ ನಡೆಸಿದ 9 ವಿದ್ಯಾರ್ಥಿಗಳ ಬಂಧನ

ಮಂಗಳೂರು : ರಾಗಿಂಗ್  ಮಾಡಿದ್ದಕ್ಕಾಗಿ 9 ಮಂದಿ ವಿದ್ಯಾರ್ಥಿಗಳನ್ನು ಮಂಗಳೂರು ನಗರ ಪೊಲೀಸರು ಶುಕ್ರವಾರಬಂಧಿಸಿದ ಘಟನೆ ನಡೆದಿದೆ. ಬಂಧಿತರ ಮೇಲೆ ಕರ್ನಾಟಕ ಶಿಕ್ಷಣ ಕಾಯ್ದೆ ಮತ್ತು ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಂಗಳೂರಿನ ಖಾಸಗಿ...
error: Content is protected !!