ಭಾವಿ ಪರ್ಯಾಯ ಕೃಷ್ಣಾಪುರ ಮಠದ ಕಟ್ಟಿಗೆ ಮುಹೂರ್ತ 

ಉಡುಪಿ: ಕೃಷ್ಣಾಪುರ ಮಠದ ಪರ್ಯಾಯ ಪೂರ್ವಭಾವಿ 3ನೇ ಕಾರ್ಯಕ್ರಮ  ಕಟ್ಟಿಗೆ ಮುಹೂರ್ತ ಭಾನುವಾರ ಬೆಳಗ್ಗೆ 8.45ಕ್ಕೆ ಕೃಷ್ಣ ಮಠದ ಮಧ್ವ ಸರೋವರದ ಬಳಿ  ನೆರವೇರಿತು.
ಮಠದ ಪಟ್ಟದ ದೇವರು  ಕಾಳೀಯಮರ್ದನ ಕೃಷ್ಣ ಹಾಗೂ ನರಸಿಂಹ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ನವಗ್ರಹ ಪೂಜೆ ಸಲ್ಲಿಸಿ ಕಟ್ಟಿಗೆಗಳನ್ನು ತಲೆಹೊರೆಯಲ್ಲಿ ಹೊತ್ತು ಕೊಂಡು ಚಂದ್ರೇಶ್ವರ, ಅನಂತೇಶ್ವರ, ಮಧ್ವಾಚಾರ್ಯರು.
ಕೃಷ್ಣ ದೇವರ ದರ್ಶನ ಪಡೆದು ನಂತರ ಮಧ್ವ ಸರೋವರದ ಈಶಾನ್ಯ ಭಾಗದಲ್ಲಿ  ಕಟ್ಟಿಗೆಗೆ  ಪೂಜೆ ಸಲ್ಲಿಸಲಾಯಿತು. ಶ್ರೀ ಮಠದ ಪುರೊಹಿತ ಅಂಬಲಪಾಡಿ ಕೆ.ಶ್ರೀನಿವಾಸ ಉಪಾಧ್ಯಾಯ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.  
ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ, ಕಾಷ್ಠ ಮುಹೂರ್ತ ಪರ್ಯಾಯ ಕಾಲದ ವ್ಯಾಪ್ತೋ ಪಾಸನೆಗೆ ಪೂರಕ ಅಂಶ. ಕೃಷ್ಣ ಮಠದಲ್ಲಿ ಶ್ರೀ ವಾದಿರಾಜರು ಹಾಕಿಕೊಟ್ಟ ಪೂಜಾಕ್ರಮವೇ ವಿಶಿಷ್ಟವಾಗಿದ್ದು, ದೇವರನ್ನು ಗರ್ಭಗೃಹ ಮಾತ್ರವಲ್ಲದೆ ಪ್ರತೀ ಅಧಿಷ್ಠಾನಗಳಲ್ಲೂ ಆರಾಧಿಸ ಲಾಗುತ್ತದೆ.
ಹಿಂದಿನ ಕಾಲದಲ್ಲಿ ಮಳೆಗಾಲದಲ್ಲಿ ಜನರಿಗೆ ಯಾವುದೇ ಉದ್ಯೋಗ ಇರಲಿಲ್ಲ. ಅಂಥವರ ಅನುಕೂಲಕ್ಕಾಗಿ ಪರ್ಯಾಯಕ್ಕೆ ಅನೇಕ ತಿಂಗಳು ಪೂರ್ವದಲ್ಲೇ ಕಟ್ಟಿಗೆ ರಥ ನಿರ್ಮಾಣ ಮಾಡಲಾಗುತ್ತದೆ. 1 ಕಟ್ಟು ಕಟ್ಟಿಗೆಗೆ 1 ಸೇರು ಅಕ್ಕಿ ನೀಡುವ ಪದ್ಧತಿ ಚಾಲ್ತಿಯಲ್ಲಿತ್ತು ಎಂದು ಹೇಳಿದರು.
ಕಟ್ಟಿಗೆ-ಮುಹೂರ್ತ: ಕಟ್ಟಿಗೆಯ ಹೊರೆಯನ್ನು ಹೊತ್ತ ಮಠದ ಸಿಬ್ಬಂದಿಗಳು ಮೆರವಣಿಗೆಯಲ್ಲಿ ಸಾಗಿ ಬಂದು, ಧಾರ್ಮಿಕ ವಿಧಿವಿಧಾನಗಳು ನೆರವೇರಿದ ನಂತರ ಉರುವಲನ್ನು ಸಂಗ್ರಹಿಸಿಡಲು ಕಟ್ಟಿಗೆಯ ತುಂಡುಗಳನ್ನು ವಿಶಿಷ್ಠ ರೀತಿಯಲ್ಲಿ ರಥದಂತೆ ಜೋಡಿಸುತ್ತಾರೆ.  ಸುಮಾರು ಐವತ್ತು ಅಡಿ ಎತ್ತರದ ಈ ‘ಕಟ್ಟಿಗೆ ರಥ’ ಭೋಜನಶಾಲೆಯ  ಹಿಂದೆ ಇದ್ದು ನೋಡುಗರ ಮನ ಸೂರೆ ಗೊಳ್ಳುತ್ತದೆ. ಪರ್ಯಾಯದ ಕೊನೆಯ ಹಂತದಲ್ಲಿ ಈ ಕಟ್ಟಿಗೆಯನ್ನು ಅಡುಗೆಗೆ ಉಪಯೋಗಿ ಸುತ್ತಾರೆ. 
ಕಟೀಲು ದೇವಳ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ ಮತ್ತು ಕಮಲಾದೇವಿಪ್ರಸಾದ ಆಸ್ರಣ್ಣ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಮೂಡುಬಿದಿರೆ ಉದ್ಯಮಿ ಕೆ. ಶ್ರೀಪತಿ ಭಟ್, ದ.ಕ. ಕಸಾಪ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೆ.ಭುವನಾಭಿರಾಮ ಉಡುಪ.
ಶಿರೂರು ಮಠದ ದಿವಾನ ಉದಯಕುಮಾರ್ ಸರಳತ್ತಾಯ, ಪಾಡಿಗಾರು ವಿಷ್ಣು ಪ್ರಸಾದ್, ಗೋಪಾಲಕೃಷ್ಣ ಸಾಮಗ, ಭಾಸ್ಕರ್ ರಾವ್ ಕಿದಿಯೂರ್,  ಶ್ರೀಕಾಂತ  ಉಪಾಧ್ಯಾಯ, ತಲ್ಲೂರು ಶಿವರಾಂ ಶೆಟ್ಟಿ, ಕೃಷ್ಣ ಆಚಾರ್ಯ, ಹರಿದಾಸ ಉಪಾಧ್ಯಾಯ, ಬಾಲಾಜಿ ರಾಘವೇಂದ್ರ ಆಚಾರ್ಯ , ಪದ್ಮರಾಜ ಭಟ್, ನಾಗರಾಜ ಉಪಾಧ್ಯ, ಸೂರ್ಯನಾರಾಯಣ ಉಪಾಧ್ಯ, ಬಿವಿ ಲಕ್ಷ್ಮೀನಾರಾ ಯಣ ಉಪಸ್ಥಿತರಿದ್ದರು. ವಿದ್ವಾಂಸ ಬನ್ನಂಜೆ ಗೋಪಾಲಕೃಷ್ಣ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.
 
 
 
 
 
 
 
 
 
 
 

Leave a Reply