ಕಂದಹಾರ್ ತ್ಯಜಿಸಿದ ಭಾರತೀಯ ರಾಜತಾಂತ್ರಿಕರು

ಕಂದಹಾರ್ ಪ್ರದೇಶವನ್ನು ತಾಲೀಬಾನ್ ಉಗ್ರರು ವಶಪಡಿಸಿಕೊಂಡ ಬಳಿಕ ಭಾರತ ಸುಮಾರು 50 ರಾಜತಾಂತ್ರಿಕರು ಹಾಗೂ ಭದ್ರತಾ ಸಿಬ್ಬಂದಿಯನ್ನು ಭಾರತ ಸ್ಥಳಾಂತರಿಸಿದೆ.

ಇನ್ನೊಂದೆಡೆ ಅಮೆರಿಕ ಪಡೆಗಳು ಕಾಲ್ಕಿತ್ತ ನಂತರ ಪ್ರಬಲವಾಗುತ್ತಿರುವ ತಾಲಿಬಾನ್ ಪಡೆಗಳು ಈಗ ಚೀನಾ ತನ್ನ ಸ್ನೇಹಿತ ಎಂದು ಹೇಳುತ್ತಿದೆ.  “ಚೀನಾ ಅಫ್ಘಾನಿಸ್ತಾನದ ಸ್ನೇಹಿತ. ಯುದ್ಧ ಪೀಡಿತ ದೇಶಗಳಿಗೆ ಪುನರ್ ನಿರ್ಮಾಣ ನಡೆಸಲು ಚೀನಾ ಹೂಡಿಕೆ ಮಾಡುವ ನಿರೀಕ್ಷೆ ಇದೆ” ಎಂದು ತಾಲಿಬಾನ್ ತಿಳಿಸಿದೆ.

ತಮ್ಮ ಹಿಡಿತದಲ್ಲಿರುವ ಶೇ.85ರಷ್ಟು ಭೂಮಿಯಲ್ಲಿ ಚೀನಾದ ಹೂಡಿಕೆದಾರರು, ಕಾರ್ಮಿಕರ ಸುರಕ್ಷತೆಯನ್ನು ಕಾಪಾಡಲಾಗುತ್ತದೆ ಎಂದು ತಾಲಿಬಾನ್ ಭರವಸೆ ನೀಡಿದೆ.

 
 
 
 
 
 
 
 
 
 
 

Leave a Reply