ಉಡುಪಿ ಶ್ರೀ ಕೃಷ್ಣ ಹಾಗು ಕಡಿಯಾಳಿ ಶ್ರೀ ಮಹಿಷಮರ್ದಿನಿ ಸೋದರತೆಯ ಪ್ರತೀಕ~  ಪಲಿಮಾರು ಶ್ರೀ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು

ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ನೂತನ ಜೀರ್ಣೋದ್ದಾರಕ್ಕೆ  ನಿಧಿ ಕಾಣಿಕೆ ಡಬ್ಬಿಗಳನ್ನು ಶನಿವಾರ ಭಕ್ತರಿಗೆ ಪಲಿಮಾರು ಮಠಾಧೀಶರಾದ  ಶ್ರೀ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ವಿತರಣೆ  ನೀಡುವುದರ ಮೂಲಕ ಚಾಲನೆ ನೀಡಿದರು. 
ತಮ್ಮ ಅನುಗ್ರಹ ಸಂದೇಶದಲ್ಲಿ ಉಡುಪಿ ಶ್ರೀ ಕೃಷ್ಣ ಹಾಗು ಕಡಿಯಾಳಿ ಮಹಿಷಮರ್ದಿನಿ ಅಣ್ಣ ತಂಗಿ ಬಾಂಧವ್ಯ ಹೊಂದಿದ್ದು,  ತಾಯಿಯ ಅನುಗ್ರಹ ಎಲ್ಲರಿಗೂ ಬೇಕು. ಪ್ರತಿಯೊಬ್ಬರೂ ಈ ಪುಣ್ಯ ಪ್ರದವಾದ ಕಾರ್ಯದಲ್ಲಿ ಭಾಗಿಯಾಗಿ  ಅತೀ ಶೀಘ್ರ ಶ್ರೀ ದೇವಳದ ಜೀರ್ಣೋದ್ದಾರ ಕಾಮಗಾರಿ ಪೂರ್ಣಗೊಳ್ಳಲಿ  ಎಂದು ಶುಭ ಹಾರೈಸಿದರು.   
ಸ್ವತಃ ಶ್ರೀಪಾದರು ಮೊದಲ ಕಾಣಿಕೆ ಡಬ್ಬಿ ಪಡೆದು ಬಳಿಕ ತಿರುಪತಿ ಶ್ರೀನಿವಾಸ ದೇವರ ಲಡ್ಡು ಪ್ರಸಾದವನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ರವಿರಾಜ ವಿ ಆಚಾರ್ಯರಿಗೆ  ನೀಡಿ ಅನುಗ್ರಹಿಸಿದರು 
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ನಾಗೇಶ್ ಹೆಗ್ಡೆ, ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ, ನಗರಸಭಾ ಸದಸ್ಯೆ ಶ್ರೀಮತಿ ಗೀತಾ ಶೇಟ್ ,ನಗರ ಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ ಅಂಚನ್ , ದೇವಳದ ಅರ್ಚಕ ರಘುಪತಿ ಉಪಾಧ್ಯ ,ಮಂಜುನಾಥ ಹೆಬ್ಬಾರ್, ದೇವಳದ ಕಾರ್ಯ ನಿರ್ವಹಣಾಧಿಕಾರಿ ಗಣೇಶ್ ರಾವ್  ಹಾಗು  ನೂರಾರು  ಭಕ್ತಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜೀರ್ಣೋದ್ದಾರ ಸಮಿತಿ  ಪ್ರಧಾನ ಕಾರ್ಯದರ್ಶಿ ಹಾಗು ನಗರ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರೂಪಿಸಿದರು

 
 
 
 
 
 
 
 
 
 
 

Leave a Reply