ಉದ್ಯಾವರ: ನವೀಕೃತ ತಾಮ್ರದ ಸುತ್ತುಪೌಳಿ ಸಮರ್ಪಣೆ, ಬ್ರಹ್ಮಕುಂಭಾಭಿಷೇಕ ಹಾಗು ರಾಶಿಪೂಜಾ ಮಹೋತ್ಸವ

ಉಡುಪಿ ತಾಲೂಕಿನ  ಉದ್ಯಾವರ, ಮಟ್ಟು  ಹಾಗೂ ನಿಡಂಬೂರು ಮಾಗಣೆಯ ಕುತ್ಪಾಡಿ, ಕಡೇಕಾರು, ಕಿದಿಯೂರು, ಅಂಬಲ್ಪಾಡಿ, ಬನ್ನಂಜೆ, ಕಪ್ಪೆಟ್ಟು ಹಾಗೂ  ಕನ್ನರ್ ಪಾಡಿ ಗ್ರಾಮದ ಸಮಸ್ತರಿಗೆ ಉದ್ಯಾವರ ಶ್ರೀ ಸಿದ್ಧಿ ವಿನಾಯಕನು ಗ್ರಾಮಾಧಿಪತಿಯಾಗಿ ಆರಾಧ್ಯ ದೇವರೆನಿಸಿದ್ದಾರೆ.  ಅತ್ಯಂತ ಪ್ರಾಚೀನವಾದ ಈ ದೇವಾಲಯವು ಆಲೂಪ ಅರಸರ ಕಾಲದಿಂದಲೂ ಆರಾಧಿಸಿ ಕೊಂಡು ಬಂದುದಾಗಿದೆ.  ಕಳೆದ 50 ವರ್ಷಗಳಿಂದ 3ಬಾರಿ ಬ್ರಹ್ಮಕಲಶ  ಹಾಗೂ ಹಲವು ಬಾರಿ ಜೀರ್ಣೋದ್ದಾರ ಹಾಗು ಬಹಳಷ್ಟು ಅಭಿವೃದ್ಧಿ  ಕಾರ‍್ಯಗಳಾಗಿವೆ.
ಈ ಬಾರಿ ದೇವಾಲಯದ ಸುತ್ತುಪೌಳಿ ಮತ್ತು ಅಗ್ರಸಭಾ ಮಂಟಪವನ್ನು ನವೀಕರಿಸಿ ತಾಮ್ರದ ಮುಚ್ಚಿಗೆ ಹಾಕುವ ಕಾಮಗಾರಿಗೆ ರೂ 1.5 ಕೋಟಿ  ಅಂದಾಜಿಸಿ ಕಾರ‍್ಯಾರಂಭಿಸಲಾಯಿತು.  ಭಕ್ತರು ತಾವಾಗಿಯೇ ಇಲ್ಲಿಗೆ ಬಂದು  ಅಭಿವೃದ್ಧಿ ಕಾರ‍್ಯಗಳಿಗೆ ಸಂಪೂರ್ಣ ಸಹಕಾರ ನೀಡಿರುವುದರಿಂದ  ಈ ಕಾರ‍್ಯ ಪೂರ್ಣಡಿ ರುವುದಲ್ಲದೆ  ಗರ್ಭ ಗುಡಿಯ ಸುತ್ತು ಹಾಸುಕಲ್ಲಿನ ನವೀಕರಣ ವ್ಯವಸ್ಥೆ, ಒಳ ಮತ್ತು ಹೊರಸುತ್ತಿನ ತಗಡಿನ ಚಪ್ಪರದ ನವೀಕರಣ ಹಾಗೂ ದೇವಸ್ಥಾನದ ಎದುರಿನ ರಥಬೀದಿಯ ಕಾಂಕ್ರೀಟಿಕರಣ ಗೊಳಿಸಿ ದೇವಾಲ ಯಕ್ಕೆ ಸಮರ್ಪಿಸುವರೇ ಸಜ್ಜಾಗಿದೆ.

ಶ್ರೀ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು , ಶ್ರೀ ಸೋದೆ ವಾದಿರಾಜ ಮಠ, ಮತ್ತು  ಶ್ರೀ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು  ಶ್ರೀ ಅದಮಾರು ಮಠ ಉಡುಪಿ. ಇವರ ಆಶೀರ್ವಾದದೊಂದಿಗೆ ವೇದ ಮೂರ್ತಿ ಪುತ್ತೂರು  ಶ್ರೀಶ ತಂತ್ರಿ ಮತ್ತು  ವೇದಮೂರ್ತಿ ಕುತ್ಪಾಡಿ  ಬಾಲಕೃಷ್ಣ ಭಟ್ ಇವರ ನೇತೃತ್ವದಲ್ಲಿ ಮಹತೋಭಾರ ಶ್ರೀ ಸಿದ್ಧಿ ವಿನಾಯಕ ದೇವರಿಗೆ ನವೀಕೃತ ತಾಮ್ರ ಸುತ್ತುಪೌಳಿ ಸಮರ್ಪಣೆ,  ಬ್ರಹ್ಮಕುಂಭಾ ಭಿಷೇಕ ಹಾಗೂ ರಾಶಿಪೂಜಾ ಮಹೋತ್ಸವ ಸಂಪನ್ನಗೊಳ್ಳಲಿರುವುದು.

ದಿನಾಂಕ 19.05.2023ರ ಶುಕ್ರವಾರದಂದು  ಅಪರಾಹ್ನ 3.30ಕ್ಕೆ  ಅಂಬಲ್ಪಾಡಿ ದೇವಸ್ಥಾನದಿಂದ ವಾಹನ ಮುಖಾಂತರ ಆರಂಭಗೊಳ್ಳುವ ಹೊರೆಕಾಣಿಕೆ ಮೆರವಣಿಗೆಗೆ ಅಂಬಲ್ಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ। ನಿ. ಬಿ. ವಿಜಯ ಬಲ್ಲಾಳರು ಚಾಲನೆ ನೀಡಲಿರುವರು. ಮೆರವಣಿಗೆಯು ಕಿದಿಯೂರು, ಕಡೇಕಾರು, ಕುತ್ಪಾಡಿ, ಸಂಪಿಗೆನಗರ, ಗುಡ್ಡೆಅಂಗಡಿಯಾಗಿ ಶಂಭುಕಲ್ಲು ದೇವಸ್ಥಾನದ ಬಳಿಕ ಪಾದಯಾತ್ರೆ ಮೂಲಕ ಮಠದಂಗಡಿಗಾಗಿ ದೇವಸ್ಥಾನ ತಲುಪುವುದು.

ದಿನಾಂಕ 21.05.2023ರ ಆದಿತ್ಯವಾರದಂದು ಬೆಳಿಗ್ಗೆ 9.15ಕ್ಕೆ ಮಿಥುನ ಲಗ್ನದಲ್ಲಿ ಶ್ರೀ  ಸಿದ್ಧಿ ವಿನಾಯಕ ದೇವರಿಗೆ ಬ್ರಹ್ಮಕುಂಭಾಭಿಷೇಕ, ಬಳಿಕ ಮಹಾಪೂಜೆ ಹಾಗೂ  ಮಹಾ ಅನ್ನ ಸಂತರ್ಪಣೆ ಜರಗಲಿರುವುದು.  ದಿನಾಂಕ 23.04.2023 ನೇ ಮಂಗಳವಾರದಂದು ಬೆಳಿಗ್ಗೆ 5.38ರಿಂದ ವೃಷಭ ಲಗ್ನ ದಲ್ಲಿ ರಾಶಿಪೂಜೆ ಮಹೋತ್ಸವವು ಆರಂಭ ಗೊಂಡು ದಿನಾಂಕ 24.05.3023 ನೇ ಬುಧವಾರ ಬೆಳಿಗ್ಗೆ 5.24ರ ಮೇಷ ಲಗ್ನದಲ್ಲಿ ಪರಿಸಮಾಪ್ತಿ ಗೊಳ್ಳಲಿರುವುದು. 
 

ಈ ಮಧ್ಯೆ ಅಹೋ ರಾತ್ರಿ ಅಖಂಡ ಭಜನೆ ಹಾಗೂ ನಿರಂತರ ಊಟ- ಉಪಹಾರದ ವ್ಯವಸ್ಥೆಯನ್ನು ಮಾಡ ಲಾಗುವುದು. ದಿನಾಂಕ 17.05.2023ರಿಂದ 24.05.2023ರ ಪರ್ಯಂತ ಪ್ರತಿ ದಿನ ಧಾರ್ಮಿಕ ಕಾರ‍್ಯಕ್ರಮಗಳಲ್ಲದೆ  ಪ್ರವಚನ, ಸಭಾ ಕಾರ‍್ಯಕ್ರಮ, ಸಾಂಸ್ಕೃತಿಕ ಕಾರ‍್ಯಕ್ರಮಗಳು,  ನಿರಂತರ ಭಜನೆ ನಡೆಯಲಿರುವುದು ಎಂದು ಸಮಿತಿ ಕಾರ್ಯಾಧ್ಯಕ್ಪ ಉದಯಕುಮಾರ್ ಶೆಟ್ಟಿ ತಿಳಿಸಿದರು.

 

ಪತ್ರಿಕಾ ಗೋಷ್ಠಿಯಲ್ಲಿ , ಶ್ರೀಶ ಭಟ್ ಕಡೇಕಾರು, ಹರಿಯಪ್ಪ ಕೋಟ್ಯಾನ್, ಶ್ರೀನಿವಾಸ ಯು.ಬಿ., ಸಂತೋಷ್ ಕುಮಾರ್, ಸುರೇಶ ಆಚಾರ್ಯ, ಗಣಪತಿ ಕಾರಂತ್ ಹಾಗು ವಿನೋದ್ ಕುಮಾರ್ ಹಾಗು ಪ್ರಭಾಕರ ಗಾಣಿಗ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply