ಆರಾ ಮೆಗಾ ಆರ್ಟ್ ಶೋ

ಆರಾ ಚಿತ್ರಕಲಾ ಶಾಲೆ ಮತ್ತು ಆರ್ಟ್ ಗ್ಯಾಲರಿ ವತಿಯಿಂದದ ದಿನಾಂಕ 21 ಮೇ 2023 ರಿಂದ 23 ಮೇ 2023 ರವೆರಿಗೆ ವಿಶೇಷ ಚಿತ್ರಕಲಾ ಪ್ರದರ್ಶನವು ಆರಾ ಚಿತ್ರಕಲಾ ಶಾಲೆ, ಕುಂಜಿಬೆಟ್ಟು ಇಲ್ಲಿ ಆರಾ ಮೆಗಾ ಆರ್ಟ್ ಶೋ” ಎಂಬ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಲಾಗಿದೆ.

ರೋಟರಿ ಕ್ಲಬ್ ಮಣಿಪಾಲ ಇದರ ಅಧ್ಯಕ್ಷೆ ರೇಣು ಜಯರಾಮ್ ಚಿತ್ರಕಲಾ ಪ್ರದರ್ಶನವನ್ನು ಮೇ,21 ಭಾನುವಾರ ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ. ಜಿ. ಶಂಕರ್ ಪದವಿಪೂರ್ವ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇದರ ಪ್ರಾಂಶುಪಾರಾದ ಡಾ. ಎಸ್ ಭಾಸ್ಕರ್ ಶೆಟ್ಟಿ ಇವರು ಅತಿಥಿಯಾಗಿ ಆಗಮಿಸಲಿದ್ದಾರೆ.

ಆರಾ ಚಿತ್ರಕಲಾ ಶಾಲೆಯ ಅಧ್ಯಾಪಕ ಶೈಲೇಶ್ ಕೋಟ್ಯಾನ್ ರವರ ಮಾರ್ಗದರ್ಶನದಲ್ಲಿ ಚಿತ್ರಕಲಾ ಕೃತಿಗಳು ರಚಿಸಲ್ಪಟ್ಟಿದ್ದು

ಕಲಾವಿದರಾದ ಶ್ರೀರಕ್ಷಾ ಕರ್ಕೇರಾ, ಪೂರ್ಣ ಪ್ರಭು, ಲಕ್ಷ್ಮಿ ನಾಯಕ್ ನೇಹಾ ಹರೀಶ್, ಪ್ರದ್ನಾ ವಾಲವಲ್ಕರ್, ರಿತಿಕಾ ಉದಯ್, ಪೂರ್ವಿ ಐತಾಳ್ ಮತ್ತು ಪುಲಸ್ತ್ಯ ರಾವ್ ರವರ ಪೈಂಟಿಂಗ್ಸ್ ಗಳು ಪ್ರದರ್ಶನ ಗೊಳ್ಳಲಿವೆ.

ಚಿತ್ರಕಲಾ ಪ್ರದರ್ಶನವು ದಿನಾಂಕ 21.5 2023 ರಿಂದ 23.5.2023 ರವರೆಗೆ ಬೆಳಿಗ್ಗೆ ಗಂಟೆ10 ರಿಂದ ಸಂಜೆ 6.00 ರವರೆಗೆ ನಡೆಯಲಿದೆ.

 
 
 
 
 
 
 
 
 
 
 

Leave a Reply