ಅಯ್ಯಪ್ಪ ನೀನೆ ಕಾಪಾಡಪ್ಪಾ.. 

ತಿರುವನಂತಪುರ: ಇನ್ನು ಅಯ್ಯಪ್ಪ ದರ್ಶನಕ್ಕೂ ಕೊರೊನಾ ನೆಗಟಿವ್ ಸರ್ಟಿಫಿಕೇಟ್ ಕಡ್ಡಾಯ. ಭಾರತದ ಸುಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಗೆ ಭಕ್ತರು ಇರುಮುಡಿಯೊಂದಿಗೆ ಕೊರೋನಾ ನೆಗೆಟಿವ್ ಸರ್ಟಿಫಿಕೇಟ್ ಒಯ್ಯುವುದು ಕಡ್ಡಾಯ. ಹೌದು, ಇನ್ನುಮುಂದೆ ಭಕ್ತರಿಗೆ ದೇಗುಲ ಪ್ರವೇಶಿಸಲು ಕೊರೊನಾ ನೆಗಟಿವ್ ಪ್ರಮಾಣ ಪತ್ರ ಕಡ್ಡಾಯವಗಲಿದೆ.ಈಗಾಗಲೇ ಕೇರಳ ಸರ್ಕಾರಕ್ಕೆ ಈ ಕುರಿತು ಶಿಫಾರಸು ಮಾಡಲಾಗಿದ್ದು, ನಾಳಿನ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿದ್ದಾರೆ.

ಸದ್ಯ ನ. 16ರಿಂದ ಎರಡು ತಿಂಗಳ ವಾರ್ಷಿಕ ಮಂಡಲ ಪೂಜೆ ಮಹೋತ್ಸವ ಮತ್ತು ಮಕರವಿಳಕ್ಕು ಉತ್ಸವ ಆರಂಭ ವಾಗಲಿದೆ. ದೇವಾಲಯ ತೆರೆದ ಬಳಿಕ ಪಾಲಿಸಬೇಕಾದ ಸೂಚನೆಗಳನ ಬಗ್ಗೆ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ನೀಡಿದ್ದು, ಅದರಲ್ಲಿ ಕೋವಿಡ್-19 ನೆಗಟಿವ್ ವರದಿ ಕಡ್ಡಾಯವಾಗಿಸಬೇಕು ಎಂಬ ಶಿಫಾರಸು ಮಾಡಲಾಗಿದೆ. ಹಾಗೂ 60 ವರ್ಷ ದಾಟಿದ ವೃದ್ಧರು ಮತ್ತು ಯಾವುದೇ ಗಂಭೀರ ಕಾಯಿಲೆ ಇರುವವರಿಗೆ ಪ್ರವೇಶ ರದ್ದು ಮಾಡಬೇಕು ಎಂದು ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.

 
 
 
 
 
 
 
 
 
 
 

Leave a Reply