ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣ್ಣಗುಡ್ಡೆ ಶ್ರೀ ಲಲಿತ ಸಹಸ್ರ ಕದಳಿ ಯಾಗ

ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರ ದಲ್ಲಿ ಅಗಸ್ಟ್ ಒಂದನೇ ತಾರೀಕು ಹುಣ್ಣಿಮೆಯ ಪರ್ವಕಾಲದಲ್ಲಿ ಶ್ರೀ ಚಕ್ರ ಪೀಠ ಸುರಪೂಜಿತೆಗೆ ಅತಿ ವಿಶೇಷವಾದ ಶ್ರೀ ಲಲಿತಾ ಸಹಸ್ರ ಕದಳಿ ಯಾಗ ಕ್ಷೇತ್ರದ ಧರ್ಮದ ಶ್ರೀ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಕ್ಷೇತ್ರದ ಭಕ್ತರೋರ್ವರ ಪ್ರಯುಕ್ತ ಪ್ರಾಯಶ್ಚಿತ ರೂಪಕವಾಗಿ ಕ್ಷೇತ್ರದಲ್ಲಿ ನೆರವೇರಲಿದೆ.

 ಬಹು ಅಪರೂಪವಾದ ಅತಿ ವಿಶಿಷ್ಟವಾದ ಫಲಪ್ರದವೆನಿಸಿದ ಈ ಯಾಗವು ಬೆಳಿಗ್ಗೆ 9:00ಗೆ ಆರಂಭಗೊಳ್ಳಲಿದೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬಾಳೆಹಣ್ಣನ್ನು ತ್ರಿಮ ದುರಯುಕ್ತವಾಗಿ ಹೋಮಿಸಿ ಲಲಿತಾ ಸಹಸ್ರನಾಮದಿಂದ ಶ್ರೀ ರಾಜರಾಜೇಶ್ವರಿಯನ್ನು ಆರಾಧಿಸಿ ವಿಧ ವಿಧದ ಪುಷ್ಪಗಳಿಂದ ಆಕೆಯನ್ನು ಅರ್ಚಿಸಿ ಬಗೆ ಬಗೆಯ ನೈವೇದ್ಯವನ್ನು ಇತ್ತು ಅನುಗ್ರಹ ಯಾಚಿಸುವ ಈ ಪೂಜೆಯಿಂದ ಮೋಕ್ಷ ಹಾಗೂ ಭೋಗವನ್ನು ಏಕಕಾಲದಲ್ಲೇ ಪಡೆಯಬಹುದು.

ಯಾಗದ ಪ್ರಯುಕ್ತ ಬ್ರಾಹ್ಮಣ ಸುವಾಸಿನಿ ಆರಾಧನೆ ಕನ್ನಿಕ ಆರಾಧನೆ ಅನ್ನ ಸಂತರ್ಪಣೆ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ.

 
 
 
 
 
 
 
 
 
 
 

Leave a Reply