527 ಶ್ರೀತಾಳೆ ಕಾಯಿ /ಬೀಜಗಳನ್ನು   ಹುತಾತ್ಮ ಯೋಧರ ಗೌರವಾರ್ಥ ಸಮರ್ಪಿಸಿದ MIT, ಮಾಹೆ, ಮಣಿಪಾಲ

ವಿನಾಶದಂಚಿನಲ್ಲಿರುವ  ಶ್ರೀತಾಳೆ ಗಿಡ ನೆಡುವ  ಮೂಲಕ ಹುತಾತ್ಮ ಯೋಧರಿಗೆ ಗೌರವ ನಮನ ಕಾರ್ಗಿಲ್ ದಿಗ್ವಿಜಯ ದಿವಸ (26-7-2023) ಮಣಿಪಾಲ ಮಾಹೆ -ಯ ಕಮಾಂಡರ್.ಡಾ ಅನಿಲ್ ರಾಣ, ನಿರ್ದೇಶಕರು (Director of MIT MAHE Manipal) ಹಾಗೂ ಸಹ ನಿರ್ದೇಶಕರಾದ ಡಾ.ಸೋಮಶೇಖರಭಟ್ ನೆರವೇರಿಸಿದರು.

ಪರಿಸರ ಚಿಂತಕರಾದ ಪ್ರೊ ಎಸ್.ಎ.ಕೃಷ್ಣಯ್ಯ ಇವರು ಕಾರ್ಗಿಲ್-ಕಾಡು/ವಂದೇಮಾತರಂ ಕಾಡು ಬೆಳೆಸುವ ಉದ್ಧೇಶ ದಿಂದ  527 ಶ್ರೀತಾಳೆ ಕಾಯಿ /ಬೀಜಗಳನ್ನು   ಹುತಾತ್ಮ ಯೋಧರ ಗೌರವಾರ್ಥ ಸಮರ್ಪಿಸಿದರು. ಪ್ರತಿವರ್ಷ ವಿನಾಶ ದಂಚಿನಲ್ಲಿರುವ   ಕೆಂಪು-ಪಟ್ಟಿಗೆ ಸೇರಿದ ಹಲವು ಮರಗಿಡಗಳ ಕಾಯಿ ಬೀಜಗಳನ್ನು ರಾಜ್ಯದ ವಿದ್ಯಾಲಯಗಳಿಗೆ, ಅಕಾಡೆಮಿ ಗಳಿಗೆ ನೀಡುವುದಾಗಿ ತಿಳಿಸಿದರು. ತಾಡೋಲೆಯಲ್ಲಿ ಚಿತ್ರ ಸಹಿತ ; ಪರಿಸರ ಸಂರಕ್ಷಣೆಯ ಸಂದೇಶ ಹೊತ್ತ “ಹಸುರು ಹೊನ್ನ ಬಿತ್ತೋಣ ಜಗದಗಲ”  “ಕಾಡು-ಕಾನನ, ನಾಡು ನದಿ ಕಾಯೋಣ”  “ಇರುವುದೊಂದೇ ಭೂಮಿ ಕಾಪಾಡಿ”  ಆಶಯ ಗಳ ಮಾಹಿತಿ ಹಂಚಿಕೊಂಡರು.

ಎಂಐಟಿಯ ಸಿವಿಲ್ ವಿಭಾಗದ ಸಹ ಪ್ರಾಧ್ಯಾಪಕ ಡಾ.ರಾಘವೇಂದ್ರ ಹೊಳ್ಳ, ಮುಖ್ಯ ಭದ್ರತಾ ಅಧಿಕಾರಿ ಶ್ರೀ ರತ್ನಾಕರ್ ಸಾಮಂತ್ ಮತ್ತು ಸಿಎಸ್‌ಇ ವಿಭಾಗದ ಸಹಾಯಕ ಪ್ರಾಧ್ಯಾಪಕಿ .ಮ್ಯೂಸಿಕ ಸುಪ್ರಿಯ ‘ಪರಿಸರ -ಪರಸ್ಪರ ‘-ನಮ್ಮ ಧ್ಯೇಯವೆಂಬ ಆಶಯದೊಂದಿಗೆ ಉಪಸ್ಥಿತರಿದ್ದರು.

ಒಪ್ಪಿಕೊ ಪಚ್ಚೆವನಸಿರಿ ಜಾಗೃತಿ ಅಭಿಯಾನ ಆರಂಭಗೊಂಡು ಇಂದಿಗೆ ಐದುವರ್ಷಗಳಾದವು: ಸಂಕಲ್ಪದಂತೆ ಕಾವೇರಿಯಿಂದ ಗಂಗಾ, ವಾರಣಾಸಿ ತನಕ ಸುಮಾರು 99569+ 527 = 1,00096 ಗಿಡ/ಬೀಜ/ಕಾಯಿ/ಮೊಳಕೆ ಸಸಿ ವಿತರಿಸಲಾಗಿದೆ, ಹೊರ ರಾಷ್ಟ್ರ ಶ್ರೀಲಂಕಾ-ದೇಶದ ಪ್ರದೇಶಕ್ಕೂ 500 ಬೀಜ/ಕಾಯಿಗಳನ್ನು ವಿತರಿಸಲಾಗಿದೆ.

 
 
 
 
 
 
 
 
 
 
 

Leave a Reply