ಪದವಿ ವಿದ್ಯಾರ್ಥಿಗಳಿಗಾಗಿ ಕಥಾ ಕಮ್ಮಟ

ಎಂಜಿಎಂ ಕಾಲೇಜು, ಉಡುಪಿ ಇದರ ಅಮೃತ ಮಹೋತ್ಸವದ ಸಂದರ್ಭದಲ್ಲಿ ಎಂ.ಜಿ.ಎಂ ಕಾಲೇಜು ಕನ್ನಡ ಸಾಹಿತ್ಯ ಸಂಘ , ಐಕ್ಯುಎಸಿ  ಹಾಗೂ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದ ಆಶ್ರಯದಲ್ಲಿ  ಉಡುಪಿ ಜಿಲ್ಲೆಯ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ – ‘ಕಥಾ ಕಮ್ಮಟ’ ನವೆಂಬರ್ 16 ಗುರುವಾರ ನಡೆಯಲಿದ್ದು, ಬೆಳಗ್ಗೆ 10 ಗಂಟೆಗೆ ಸಾಹಿತಿ ವಿಮರ್ಶಕ ಪ್ರೊ. ಮುರುಳಿಧರ್ ಉಪಾಧ್ಯಾಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು.
ಸಭಾಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ ವಹಿಸಿಕೊಳ್ಳಲಿದ್ದಾರೆ.  ಹಿರಿಯ ಕಥೆ ಗಾರರು ವಿಮರ್ಶಕರಾದ ಡಾ ಬಿ ಜನಾರ್ದನ ಭಟ್, ಬೆಳಗೋಡು ರಮೇಶ್ ಭಟ್ ಹಾಗೂ ಟಿ. ಎ. ಎನ್ ಖoಡಿಗೆ ವಿದ್ಯಾರ್ಥಿ ಗಳಿಗೆ ಕಥೆ ಬರೆಯಲು ಮಾರ್ಗದರ್ಶನ ,ಸಲಹೆ ಸೂಚನೆಗಳನ್ನು ನೀಡಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ನಾಡಿನ ಹೆಸರಾಂತ ಸಾಹಿತಿ ಕಥೆಗಾರರು ಆಗಿರುವ ವೈದೇಹಿ ಅವರೊಂದಿಗೆ ಮಾತು -ಮಾತುಕತೆ ನಡೆಯಲಿದೆ.  ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಹಿರಿಯ ಕಥೆಗಾರರಾಗಿರುವ ಹೆಚ್. ಗೋಪಾಲ್ ಭಟ್ ಕೂ.ಗೋ ಅವರನ್ನು ಅಭಿನಂದಿಸಲಾಗುವುದು ಎಂದು ಕ ಸಾ ಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್. ಪಿ ಪ್ರಕಟಣೆಯಲ್ಲಿ ತಿಳಿಸಿರು ತ್ತಾರೆ.
 
 
 
 
 
 
 
 
 
 
 

Leave a Reply