ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘ(ನಿ)ದ ಶತಮಾನೋತ್ಸವ ಆಚರಣೆಗೆ ಚಾಲನೆ. “ಶತಾಭಿವಂದನಂ” ಕಾರ್ಯಕ್ರಮ

ಉಡುಪಿ: ಕೆಮ್ಮಣ್ಣು​ವಿನ ಗಣಪತಿ ಸಹಕಾರಿ ವ್ಯವಸಾಯಕ ಸಂಘ ಇದರ ಶತಮಾನೋತ್ಸವ ಆಚರಣೆಯ ​”ಶತಾಭಿವಂದನಂ​” ಕಾರ್ಯಕ್ರಮ ದಿನಾಂಕ 16 ​.11 2023ನೇ ಗುರುವಾರ ಬೆಳಿಗ್ಗೆ ಗಂಟೆ 10.30 ಕ್ಕೆ ಕೆಮ್ಮಣ್ಣಿನ ಸಂಘದ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ​.

ಸಮಾರಂಭದ ಅಧ್ಯಕ್ಷತೆಯನ್ನು ಗಣಪತಿ ಸಹಕಾರಿ ​ವ್ಯವಸಾಯಕ ಸಂಘದ ಅಧ್ಯಕ್ಷ ಟಿ ಸತೀಶ್ ಶೆಟ್ಟಿ ವಹಿಸಿಕೊಳ್ಳಲಿದ್ದಾರೆ​. ​ಉಡುಪಿ ಶಾಸಕ ​ಯಶ್ ಪಾಲ್ ಸುವರ್ಣ​, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ​, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ​ಜಯಕರ ಶೆಟ್ಟಿ ಇಂದ್ರಾಳಿ​, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಐಕಳಭಾವ ದೇವಿ ಪ್ರಸಾದ್ ಶೆಟ್ಟಿ, ಉದ್ಯಮಿ ಪ್ರಸಾದ್ ರಾಜಕಾಂಚನ್, ದಕ​ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ​, ​ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ರಾಜೇಶ್ ರಾವ್ ಪಾಂಗಳ​,

ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ​ ಮೈರ್ಮಾಡಿ , ಕುಂದಾಪುರ ವಿಭಾಗದ ಸಹಕಾರ ಸಂಘಗಳ ಸಹಾಯಕ ಉಪನಿಬಂಧಕ ಅರುಣ್ ಕುಮಾರ್, ​ತೋನ್ಸೆ ಗ್ರಾಮ ಪಂಚಾಯತ್ ಅಧ್ಯ​ಕ್ಷೆ ಕುಸುಮ ರವೀಂದ್ರ​, ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ ಕುಂದರ್​, ಬಡಾನಿಡಿಯೂರು ಗ್ರಾಮ ಪಂಚಾಯತ್ ಅಧ್ಯ​ಕ್ಷೆ ಯಶೋದ ಆಚಾರ್ಯ​, ತೆಂಕ​ನಿಡಿಯೂರು ಗ್ರಾಮ ಪಂಚಾಯತ್ ಅಧ್ಯ​ಕ್ಷೆ ಶೋಭಾ ಡಿ ನಾಯ​ಕ್, ಪಡು​ಕುದ್ರು ಮಾಧವ ರಾವ್, ​ಹೂಡೆಯ ಬೀಚ್ ಹೀಲಿಂಗ್ ​ಹೋಮ್ ಇದರ ನಿರ್ದೇಶಕ  ಡಾ। ಮೊಹಮದ್ ರಫೀಕ್​ ಅತಿಥಿಗಳಾಗಿ ಉಪಸ್ಥಿತರಿರುವರು​.

ಇದೇ ಸಂದರ್ಭದಲ್ಲಿ ​ಶತಾ​ಯುಷಿ ಕ್ರಿಸ್ತಿನ್ ಅಂದ್ರಾದೆ ಪಡುಕುದ್ರು ಇವರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ,ಎಂದು ಉಪಾಧ್ಯಕ್ಷ ಬಿ ಆಫ್ಝಲ್ ಸಾಹೇಬ್ ಹಾಗೂ ಮುಖ್ಯ ಕಾರ್ಯನಿರ್ವಹಣಾ​ ​ಅಧಿಕಾರಿ ಮಹೇಶ್ ಸಾಲಿಯಾನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ​. ​

 
 
 
 
 
 
 
 

Leave a Reply