ಮುಗಿಯದು ಮುಂದಿನ ದಾರಿ~Click:Ashok Donderangadi

ಮುಗಿಯದು ಮುಂದಿನ ದಾರಿ
ಸಾಗಿದಷ್ಟೂ ಇದೆ ಬಯಲು..!
ಸಾಗಬೇಕು ಸಂತಸದಿ ಸದಾ
ಮೊಗಾರವಿಂದ ಅರಳಿದಂತೆ..!
ಸಾಗುವುದು ಬದುಕ ಪಥ
ಹೀಗೆಯೇ ಎಂದಿನಂತೆ…!!

ಎತ್ತಿನ ಗಾಡಿಯನೇರಿ ಸಾಗುವಾಗ ಕೇಳಿಸುವ ಗಾಲಿಯ ಶಬ್ದ, ಗೊರಸುಗಳು ನೆಲಕ್ಕೆ ಬಲವಾಗಿ ಊರಿದಾಗ ಬರುವ ಗತ್ತಿನ ಸದ್ದು,ಗಾಡಿಗೆ ಕಟ್ಟಿದ ಲೋಲಕವು ಹೊಮ್ಮಿಸುವ ಮಧುರ ಸ್ವರ….ಇವೆಲ್ಲವೂ ಸುತ್ತಲಿನ ಪರಿಸರವನ್ನು ಕುಳಿತವಗೆ ಪರಿಚಯಿಸುತ್ತಾ ಸಾಗುತ್ತವೆ.ಆ ಮಾತುಗಳನ್ನು ಆಲಿಸುತ್ತಾ ಸಾಗುವ ಪಯಣ ಸಾಗಲಿ….”ದಾರಿ ಯಾವುದಯ್ಯಾ” ಎಂದು ಕೇಳಲು ಮತ್ತೊಬ್ಬ ನಮ್ಮವನು ದೊರೆಯುವವರೆಗೂ….!!

 
 
 
 
 
 
 
 
 
 
 

Leave a Reply