ಬಣವಿಕಲ್ಲು:ಕ್ರೂಸರ್ ಪಲ್ಟಿ 5ಜನರು ಮೃತ 9ಜನರು ತೀವ್ರ ಗಾಯ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಬಣವಿಕಲ್ಲು ಗ್ರಾಮದ ಬಳಿ,ಹೊಸಪೇಟೆ ಯಿಂದ ಚಿತ್ರದುರ್ಗ ಮಾರ್ಗದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ.ಬುಧವಾರ ಬೆಳಗಿನ ಜಾವ2ಗಂಟೆ ಸಮಯದಲ್ಲಿ ಕ್ರೂಸರ್ ಪಲ್ಟಿಯಾಗಿದ್ದು,ಪರಿಣಾಮ ಕ್ರ್ಯೂಸರ್ ನಲ್ಲಿದ್ದ 3ಜನರು ಪ್ರ‍ಾರಂಭದಲ್ಲಿ ಮೃತಪಟ್ಟಿದ್ದು, ನಂತರ ಮೃತರ ಸಂಖ್ಯೆ 5ಕ್ಕೇರಿದೆ ಎಂದು ತಿಳಿದು ಬಂದಿದೆ ಉಳಿದ 7ಜನರು ತೀವ್ರ ಗಾಯಗೊಂಡಿರುವುದಾಗಿ ತಿಳಿದು ಬದಿದೆ. ಇವರು ವಿಜಾಪುರ ಜಿಲ್ಲೆ ನಿಡಗುಂದಿ ಗ್ರಾಮದವರಾಗಿದ್ದು, ತಮಿಳು ನಾಡಿನ ರಾಮೇಶ್ವರ ಕ್ಷೇತ್ರಕ್ಕೆ ತೆರಳಿದ್ದರೆನ್ನಲಾಗಿದೆ.ವಾಹನ ಚಾಲಕ ವಾಹನವನ್ನು ಅತಿವೇಗವಾಗಿ ಚಲಾಯಿಸುತ್ತಿದ್ದು,ವಾಹನ ರಸ್ತೆಯ ಮದ್ಯದ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ರಸ್ಥೆಯ ಬದಿಗೆ ಪಲ್ಟಿ ಹೊಡೆದಿದೆ ಎನ್ನಲಾಗಿದೆ.

ಮೃತರು:- ನಿಡಗುಂದಿ ಸಿದ್ದಯ್ಯ ಕಾಳಗಿ(42),ಕಲ್ಲವ್ವ(60), ಲಕ್ಷ್ಮೀಬಾಯಿ(60), ಕಿರಶಹಾಳ್ ಗ್ರಾಮದ ಕಂತವ್ವ(50),ಆಲಮಟ್ಟಿ ಗ್ರಾಮದ ನೀಲಮ್ಮ(54), ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡವರು- ಬಸವನಬಾಗೇವಾಡಿಯ ಬಸಮ್ಮ, ನಿಡಗುಂದಿಯ ನಿರ್ಮಲ, ಭೀಮೇಶಪ್ಪ, ಅನಸೂಯಾ, ಕಿರುಶಾಳ್ ರೇಣುಕಾ,ಸುಮಂಗಳಾ, ಸಿದ್ನಾಳ ಮಹಾನಂದೆಮ್ಮ,ತಿಪ್ಪಮ್ಮ, ಅಬ್ಯಾಳ್ ಶಂಕ್ರಮ್ಮ ತೀವ್ರ ಗಾಯಗೊಂಡಿದ್ದಾರೆ ಇವರೆಲ್ಲರೂ ವಿಜಯಪುರ ಜಿಲ್ಲೆಯವರಾಗಿದ್ದಾರೆ.ಗಾಯಾಳು ನಿರ್ಮಲ ನೀಡಿದ ದೂರಿನಂತೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಸ್ಥಳಕ್ಕೆ ಘಟನಾ ಸ್ಥಳಕ್ಕೆ ಕೂಡ್ಲಿಗಿ ಡಿವೈಎಸ್ಪಿ ಜಿ.ಹರೀಶ ರೆಡ್ಡಿ ಬೇಟ್ಟಿ ನೀಡಿ ಪರಿಶೀಲಿಸಿದ್ದಾರೆ,ಆಸ್ಪತ್ರೆಗೆ ತೆರಳಿ ಗಾಯಳುಗಳನ್ನು ಭೆಟ್ಟಿಯಾಗಿ ವಿಚಾರಿಸಿದ್ದಾರೆ.ಕೂಡ್ಲಿಗಿ ಸಿಪಿಐ ಕೊಟ್ಟೂರು ಸಿಪಿಐ ಪಿಎಸ್ಐ, ಹೊಸಹಳ್ಳಿ ಪಿಎಸ್ಐ, ಮರಿಯಮ್ಮನಹಳ್ಳಿ ಪಿಎಸ್ಐ ಸೇರಿದಂತೆ ಹಾಗೂ ಹೈವೇ ಪೆಟ್ರೋಲ್ ಸಿಬ್ಬಂದಿ ಸ್ಥಳಕ್ಕೆ ದಾವಿಸಿದ್ದಾರೆ.ಕೊಟ್ಟೂರು ಸಿಪಿಐ ನೇತೃತ್ವದಲ್ಲಿ ಪ್ರಕರಣ ತನಿಖೆ ಜರುಗಿಸಲಾಗಿದೆ ಎಂದು ಇಲಾಖೆ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply