ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಗೋಪಾಲ್ ಕಾರ್ವಿಗೆ ನಾಲ್ಕು ಪದಕ

ಕೋಟ: ಕರ್ನಾಟಕ ಮಾಸ್ಟರ್ ಗೇಮ್ಸ್ ಅಸೋಸಿಯೇಶನ್ ಆಯೋಜಿಸಿದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ಗುಂಡ್ಮಿ ನಿವಾಸಿ ಗೋಪಾಲ ಖಾರ್ವಿ ಕೋಡಿಕನ್ಯಾಣ ನಾಲ್ಕು ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರು 100 ಮೀ. ಫ್ರೀ ಸ್ಟೈಲ್ ಚಿನ್ನದ ಪದಕ, 400 ಮೀ. ಫ್ರೀ ಸ್ಟೈಲ್ ಚಿನ್ನದ ಪದಕ, 50 ಮೀ. ಬಟರ್ ಫ್ಲೈ ಚಿನ್ನದ ಪದಕ, 4×50 ಫ್ರೀ ಸ್ಟೈಲ್ ರಿಲೇಯಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ. ಇವರು ಉಡುಪಿಯ ಅಜ್ಜರಕಾಡು ಈಜುಕೊಳದ ತರಬೇತುದಾರರಾಗಿದ್ದಾರೆ. 2013ರಲ್ಲಿ ಕೈ ಕಾಲುಗಳನ್ನು ಕೋಳದಿಂದ ಬಂಧಿಸಿ ಅರಬ್ಬೀ ಸಮುದ್ರದಲ್ಲಿ 3.71 ಕಿ.ಮೀ. ಈಜಿ ಗಿನ್ನೀಸ್ ವಿಶ್ವ ದಾಖಲೆ ಮಾಡಿದ್ದರು. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ, ಸಂದೇಶ ಪ್ರಶಸ್ತಿಗಳು ಲಭಿಸಿದೆ. ಒಂಬತ್ತನೆಯ ತರಗತಿಯ ಕೊಂಕಣಿ ಪಠ್ಯಪುಸ್ತಕದಲ್ಲಿ ಇವರ ಜೀವನ ಚರಿತ್ರೆಯ ಕುರಿತಾದ ಪಾಠವಿರುವುದು ಗಮನಾರ್ಹವಾಗಿದೆ.

 
 
 
 
 
 
 
 
 
 
 

Leave a Reply