ಲಿಂಗ ಸೂಕ್ಷ್ಮತೆಯ ಬಗ್ಗೆ ಪ್ರತಿಯೊಬ್ಬರು ಮಾರ್ಗದರ್ಶನ ಪಡೆಯುವಂತೆ :- ಡಾ.ಅನಿತಾ ರವಿಶಂಕರ್ ಕರೆ

ಇಂದಿನ ಆಧುನಿಕ ಯುಗದಲ್ಲಿ ಒಬ್ಬ ಮಹಿಳೆಗೆ ತನ್ನ ಬಗ್ಗೆ ಮತ್ತು ಸಮಾಜದಲ್ಲಿ ತನ್ನ ರಕ್ಷಣೆಗಾಗಿ ಇರುವ ಕಾನೂನಿನ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ತಿಳುವಳಿಕೆಯ ಅಗತ್ಯತೆ ಇರುವುದರಿಂದ ಲಿಂಗಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆ ಇದೆ ಎಂಬುದಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಅನಿತಾ ರವಿಶಂಕರ್ ತಿಳಿಸಿದರು. ಅವರು ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು, ಉಡುಪಿ ಇಲ್ಲಿ ನಡೆದ ಮಹಿಳಾ ಅಧ್ಯಯನ ಕೇಂದ್ರದ ಮಂಗಳೂರು ವಿಶ್ವವಿದ್ಯಾನಿಲಯ, ಐಕ್ಯೂಎಸಿ ಮತ್ತು ಮಹಿಳಾ ವೇದಿಕೆ ಜಂಟಿಯಾಗಿ ಹಮ್ಮಿಕೊಂಡಿರುವ “ಲಿಂಗಸೂಕ್ಷ್ಮತಾ ಕಾರ್ಯಗಾರವನ್ನು” ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಭಾಸ್ಕರ ಶೆಟ್ಟಿ ಎಸ್ ಇವರು ಹೆಣ್ಣಿನ ವಿದ್ಯಾಭ್ಯಾಸದ ಕುರಿತು ಮಾತನಾಡುತ್ತಾ ಹೆಣ್ಣು ಸಮಾಜಕ್ಕೆ ಮಾದರಿ “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಸಮಾಜದಲ್ಲಿ ಒಬ್ಬ ಹೆಣ್ಣು ಮಗಳು ಸುರಕ್ಷಿತವಾಗಿ ಬಾಳಿಬದುಕಲು ಮತ್ತು ತನ್ನ ಕುಟುಂಬದ ರಕ್ಷಣೆಗಾಗಿ ಅವಳಿಗೆ ಲಿಂಗಸೂಕ್ಷö್ಮತೆಯ ಅರಿವು ಅಗತ್ಯವಾಗಿ ಬೇಕಾಗಿರುತ್ತದೆ ಎಂಬುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರಿನ ಡೀಡ್ಸ್ ಸಂಸ್ಥೆಯ ಶ್ರೀಮತಿ ಮರ್ಲಿನ್ ಮಾರ್ಟಿಸ್ ವಿದ್ಯಾರ್ಥಿನಿಯರಿಗೆ ಲಿಂಗತ್ವ, ಅದಕ್ಕೆ ಸಂಬoಧಿಸಿದ ವಿಚಾರಗಳು ಹಾಗೂ ಕಾನೂನಿನ ಬಗ್ಗೆ ಅರಿವು ಮೂಡಿಸಿದರು. ಕಾಲೇಜಿನ ಸಾಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ರಾಜೇಂದ್ರ ಕೆ ಉಪಸ್ಥಿತರಿದ್ದರು, ಕಾಲೇಜಿನ ಮಹಿಳಾವೇದಿಕೆ ಸಂಚಾಲಕರಾದ ಶ್ರೀಮತಿ ವಾರಿಜ ಸ್ವಾಗತಿಸಿದರು. ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಕು. ಭಾವನಾ ವಂದಿಸಿದರು. ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಕು. ಗೌರಿ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 

Leave a Reply