ಕೆಮಿಕಲ್ ಮಿಶ್ರಿತ ತರಕಾರಿ ಹಣ್ಣುಹಂಪಲು ಮಾರಾಟ ನಿಷೇಧಿಸಿ – ಕೆ.ವಿಜಯ್ ಕೊಡವೂರು

ಸರಕಾರದ ಅಂಕಿ ಅಂಶ ಪ್ರಕಾರ ಶೇಕಡ 10 ಜನರಿಗೆ ಕ್ಯಾನ್ಸರ್ ನಂತಹ ಭೀಕರ ರೋಗ ಇದೆ ಇದಕ್ಕೆ ಕಾರಣ ಏನು ಎಂದು ನಮಗೆ ತಿಳಿದಿದೆ. ನಾವು ಉಪಯೋಗಿಸುವ ಎಲ್ಲಾ ಆಹಾರ ಪದ್ಧತಿಗಳು ಕೆಮಿಕಲ್ ಮಿಶ್ರಿತವಾಗಿರುವ ವಿಷಯ ನಮಗೆ ತಿಳಿದಿದೆ. ಅದರಲ್ಲೂ ತರಕಾರಿ ಮತ್ತು ಹಣ್ಣು ಹಂಪಲು ಬೆಳೆಸುವ ಸಂದರ್ಭ ದಲ್ಲಿ ಕೆಮಿಕಲ್ ಗೊಬ್ಬರಗಳನ್ನು ಹಾಕುವಂಥದ್ದು ಸಾಧಾರಣವಾಗಿದೆ. ಯೂರಿಯಾ ಅಥವಾ ಪೊಟ್ಯಾಶಿ ಯಂ ಇರಬಹುದು.

ಬೆಳೆಸಿದ ಗಿಡಕ್ಕೆ ಹುಳಗಳು ಬರೆದಂತೆ ಮತ್ತು ಬಲಿಷ್ಠವಾಗಿ ಬೆಳೆಯಬೇಕು ಎನ್ನುವ ದೃಷ್ಟಿಯಿಂದ ಕೆಮಿಕಲ್ ಔಷಧಿಗಳನ್ನು ಸಿಂಪಡನೆ ಮಾಡುತ್ತಾರೆ ಮತ್ತೆ ಬೆಳೆದ ಹಣ್ಣುಗಳನ್ನು ಮಾರಾಟ ಕೇಂದ್ರಕ್ಕೆ ಸಾಗಿಸುವ ಮೊದಲು ಅಂದವಾಗಿ ಕಾಣಲು ಬಣ್ಣಗಳ ಔಷಧಿಯನ್ನು ಬೆರೆಸುತ್ತಾರೆ, ಸಿಹಿಯಾಗಿ ಇರಲು ಮತ್ತೊಂದು ಔಷಧಿ, ಮತ್ತು ಬೇಗನೆ ಹಣ್ಣಾಗಲು ಔಷಧಿಗಳನ್ನು ಬೆರೆಸಿ ಮಾರುಕಟ್ಟೆಗೆ ತರುತ್ತಾರೆ.ಮಾರುಕಟ್ಟೆಯಲ್ಲಿ ಬೇರೆಬೇರೆ ವಿತರಕರು ಬೇರೆಬೇರೆ ಅಂಗಡಿ ಅವರನ್ನು ಕಳೆದುಕೊಂಡು ಮಾರಾಟ ಮಾಡುವಾಗ ಅದು ನಮಗೆ ಸುಂದರವಾಗಿ ಕಾಣುತ್ತದೆ.

ಹಣ್ಣುಗಳು ನೋಡಲು ಸುಂದರವಾಗಿಯೂ, ತಿನ್ನಲು ಸಿಹಿಯಾಗಿಯೂ ಇರುವುದರಿಂದ ಮತ್ತು ಮತ್ತು ಸ್ವೀಕಾರ ಮಾಡಬೇಕು ಎಂದು ಮನಸ್ಸಾಗುತ್ತದೆ. ಕೆಮಿಕಲ್ ಬಳಕೆಯಿಂದ ವಿದ್ಯಾರ್ಥಿಗಳು, ಪೋಷಕರು, ಮಹಿಳೆಯರು ಮತ್ತು ಪುರುಷರು ಎಲ್ಲರಿಗೂ ಕ್ಯಾನ್ಸರ್ ನಂತಹ ಅನೇಕ ರೋಗಗಳು ಕಟ್ಟಿಟ್ಟಬುತ್ತಿ. ಪ್ರಜ್ಞಾವಂತರಾದ ಜಿಲ್ಲೆಯಾದ ಉಡುಪಿ ಜಿಲ್ಲೆಯಲ್ಲಿ ನಾವು ಈ ರೀತಿಯ ಆಹಾರವನ್ನು ಸ್ವೀಕಾರ ಮಾಡುತ್ತಿದ್ದೇವೆ.

ಉಡುಪಿ ನಗರಸಭೆಯಲ್ಲಿ ಬರುವಂತಹ ವ್ಯಾಪ್ತಿಯಲ್ಲಿ ಇಂತಹ ಆಹಾರಗಳು ಮಾರಾಟ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನಂತಹ ನಗರ ಸಭಾ ಸದಸ್ಯನಿಗೆ ಇದೆ. ಎಂದು ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಮಂಡಿಸಿದರು.

 
 
 
 
 
 
 
 
 
 
 

Leave a Reply