ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಗುರುಪೂರ್ಣಿಮೆ- ಸಾಧಕರಿಗೆ ಸನ್ಮಾನ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಜುಲೈ 13 ರಂದು ಗುರುಪೂರ್ಣಿಮೆ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ್ ಭಟ್ ರವರು ಗುರುತ್ವದ ಮಹತ್ವವನ್ನು ತಿಳಿಸುತ್ತಾ ಗರ್ಭದಲ್ಲಿ ಹೊತ್ತು ಹೆತ್ತು ಪ್ರೀತಿಯ ಧಾರೆ ಎರೆದು ತೊದಲುನುಡಿ ಕಲಿಸುವ ಅಮ್ಮನೇ ಮೊದಲ ಗುರುವಾದರೆ, ತನ್ನ ಭುಜದ ಮೇಲೆ ಹೊತ್ತು ಇಡಿಯ ಜಗವನ್ನೇ ಪರಿಚಯಿಸುವ ಅಪ್ಪನು ಎರಡನೆಯ ಗುರುವಾಗಿ ಮಾನ್ಯನಾಗುತ್ತಾನೆ. ಇವರೊಂದಿಗೆ ವಿದ್ಯೆಯನ್ನು ಧಾರೆ ಎರೆದು ಬದುಕಿನ ಯಶಸ್ಸಿನ ಪಥವನ್ನು ತೋರಿಸುವ ವ್ಯಕ್ತಿ ಗುರುವಾಗಿ ಈ ಮೂರೂ ರೀತಿಯ ಗುರುಗಳು ವ್ಯಕ್ತಿತ್ವ ನಿರ್ಮಾಣದ ಶಿಲ್ಪಿಗಳಾಗಿ ಮಾನ್ಯರಾಗುತ್ತಾರೆ ಎಂದು ಹೇಳಿದರು. ಕಾಲೇಜಿನ ವಿದ್ಯಾರ್ಥಿಗಳಾದ ನಾಗರಾಜ್ ಹೆಗ್ಡೆ ತೃತೀಯ ಬಿ.ಕಾಂ, ಸಚಿನ್ ತೃತೀಯ ಬಿಬಿಎ, ಕಾವ್ಯ ಪ್ರಥಮ ಬಿಬಿಎ ಗುರುಹುಣ್ಣಿಮೆಯ ಸಂದೇಶವನ್ನು ಸಾರಿದರು.
ಉಡುಪಿ ಪರಿಸರದ ಪಿಯು ಕಾಲೇಜಿನ ಕಾಮರ್ಸ್ ವಿಭಾಗದ ಮಕ್ಕಳಿಗೆ ಕಾಲೇಜು ಇತ್ತೀಚೆಗೆ ನಡೆಸಿದ ಕಾಮರ್ಸ್ ಕ್ವಿಜ್ಹ್ ಆನ್ಲೈನ್ ಸ್ಪರ್ಧೆಯಲ್ಲಿ ವಿಜೇತರಾದ ಸಾಧಕ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಕಾಲೇಜಿನ ಐಕ್ಯೂಎಸಿ ಘಟಕದಿಂದ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಚಾರ್ಯರಾದ ಶ್ರೀಮತಿ ಆಶಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅರ್ಥಶಾಸ್ತ್ರ ಉಪನ್ಯಾಸಕ ಶ್ರೀ ಚಂದ್ರಶೇಖರ್ ಸ್ವಾಗತಿಸಿದರು, ವಾಣಿಜ್ಯ ಉಪನ್ಯಾಸಕ ಶ್ರೀ ಹರಿಕೇಶವ್ ವಂದಿಸಿದರು, ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ.ಜಿ ನಿರೂಪಿಸಿದರು.

 
 
 
 
 
 
 
 
 
 
 

Leave a Reply