ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ- ಹೊರೆಕಾಣಿಕೆ ಸಮರ್ಪಣೆ

ಕಾಪು ತಾಲೂಕಿನ ಮಜೂರು ಗ್ರಾಮದ ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮೇ 3 ತಾರೀಖು ಮಂಗಳವಾರದಂದು ನಡೆಯಲಿರುವ ಶತ ಚಂಡಿಕಾಯಾಗಕ್ಕೆ ಕರಂದಾಡಿ ಗ್ರಾಮಸ್ಥರಿಂದ ಹೊರೆಕಾಣಿಕೆಯನ್ನು ನೀಡಲಾಯಿತು… ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥಿಸಿ ಭಜನೆಯೊಂದಿಗೆ ಹೊರೆಕಾಣಿಕೆಯನ್ನು ಅರ್ಪಿಸಲಾಯಿತು….. ಈ ಸಂಧರ್ಭದಲ್ಲಿ ಕರಂದಾಡಿ ಶ್ರೀ ವಿಷ್ಣುಮೂರ್ತಿ, ಬ್ರಹ್ಮಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾದ ಪದ್ಮನಾಭ ಶಾನುಭೋಗ್, ರವಿ ಉಪಾಧ್ಯಾಯ ಕರಂದಾಡಿ ಗುತ್ತು ವಿಶ್ವಜಿತ್ ಶೆಟ್ಟಿ ಮತ್ತು ಮನೆಯವರು, ಸಮಾಜ ಸೇವಕ ಲೀಲಾಧರ್ ಜಿ ಶೆಟ್ಟಿ , ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು, ಊರಿನ ಹಿರಿಯರು, ಪ್ರಮುಖರು ಪಾಲ್ಗೊಂಡು ಭಕ್ತಿಪೂರ್ವಕವಾಗಿ ಹೊರೆ ಕಾಣಿಕೆ ಸಮರ್ಪಿಸಲಾಯಿತು…. ಉಳಿಯಾರು ದೇವಸ್ಥಾನದ ಅರ್ಚಕರಾದ ಲಕ್ಷ್ಮೀಶ ಭಟ್, ಲಕ್ಷ್ಮೀನಾರಾಯಣ ತಂತ್ರಿ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ್ ಬಿ ಮೂಲ್ಯ ಶತ ಚಂಡಿಕಾಯಾಗದ ಸಂಚಾಲಕರಾದ ತ್ರಿವಿಕ್ರಮ ಭಟ್, ಉಳಿಯಾರು ಭಜನಾ ಮಂಡಳಿಯ ಅಧ್ಯಕ್ಷರಾದ ಹರೀಶ್ ಆಚಾರ್ಯ ರವರು ಹೊರೆಕಾಣಿಕೆ ಮೆರವಣಿಗೆಯನ್ನು ಸ್ವಾಗತಿಸಿ, ಶತಚಂಡಿಕಾ ಯಾಗ ಸಾಂಗವಾಗಿ ನೆರವೇರಲಿ ಎಂದು ಉಭಯ ಗ್ರಾಮಗಳ ಭಕ್ತರು ಶ್ರೀ ದೇವರಲ್ಲಿ ಪ್ರಾರ್ಥಸಿದರು.

 
 
 
 
 
 
 
 
 
 
 

Leave a Reply