ವೈಶಾಖ ಮಾಸ ತೃತಿಯದಂದು ಹರಿಣೀಪತಿ ಶ್ರೀಪರಶುರಾಮ ದೇವರ ಜಯಂತಿ ಹಾಗೂ ಅಕ್ಷಯ ತೃತೀಯ ಹಬ್ಬ.

ತ್ರೇತಾಯುಗದಲ್ಲಿ ಕೆಲ ದುಷ್ಟ ಕ್ಷತ್ರಿಯರು ಅನಾಚಾರ ಮಾಡುತ್ತಿದ್ದರು. ಇದರಿಂದ ಭೂಭಾರ(ಲೋಕ ಸಂಕಟ) ಹೆಚ್ಚಾಗುತ್ತಿತ್ತು. ಇದನ್ನು ಗಮನಿಸಿದ ಶ್ರೀಹರಿ, ಲೋಕ ಸಂಕಟಕ್ಕೆ ಕಾರಣೀಭೂತರಾದ ದುಷ್ಟ ಕ್ಷತ್ರಿಯರನ್ನು ಸದೆ ಬಡೆಯಬೇಕಿತ್ತು. ಇದಕ್ಕಾಗಿ ಶ್ರೀರೇಣುಕಾದೇವಿ ಹಾಗೂ ಶ್ರೀಜಮದಗ್ನಿ ಮಹರ್ಷಿಗಳ ಸುಪುತ್ರನಾಗಿ ಶ್ರೀಪರಶುರಾಮದೇವರ ಅವತಾರಿತಾಗಿ ಭುವಿಯಲ್ಲಿ ಅವತರಿಸಿದ ದಿನ.

ಇದರ ಜತೆ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರ ಪ್ರಭುವಿಗಿಂತ ಮೊದಲೇ, ಭುವಿಯಲ್ಲಿ ಪಿತೃವಾಕ್ಯ ಪರಿಪಾಲನೆ ಮಾಡಲು ಶ್ರೀಹರಿ, ಈ ರೂಪದಲ್ಲಿ ಧರೆಯಲ್ಲಿ ಅವತರಿಸಿದ್ದ.

ತಂದೆಯ ಮಾತನ್ನು ಪಾಲಿಸಲು ತಾಯಿಯ ಶಿರಸ್ಸನ್ನು ಕಡಿದು, ತಂದೆಯ ಅನುಗ್ರಹಕ್ಕೆ ಪಾತ್ರರಾಗಿ ತಾಯಿಯನ್ನು ಮರಳಿ ಬದುಕಿಸಿದ ಮಹಾವೀರರು ಪರಶುರಾಮ ದೇವರು.

ಇಂತಹ ಶ್ರೀಪರಶುರಾಮ ದೇವರು, ಪ್ರಜೆಗಳಿಗೆ ಸಂತಸವೀಯಲಿ. ನಮ್ಮಲ್ಲಿರುವ ಅರಿಷಡ್ವರ್ಗಗಳನ್ನು ಹಾಗೂ ದುಃಖ ದುಮ್ಮಾನಗಳನ್ನು ಹೋಗಲಾಡಿಸಿ ಸುಖ ಸಂತೋಷ ಕರುಣಿಸಲಿ ಎಂದು ಬೇಡೋಣ.

ಅಂಗಾರವರ್ಣಮಭಿತೋಂಡಬಹಿ: ಪ್ರಭಾಭಿರ್ವ್ಯಾಪ್ತಂ ಪರಶ್ವಧಧನುರ್ಧರಮೇಕವೀರಂ | ಧ್ಯಾಯೇದಜೇಶಪುರುಹೂತಮುಖೈಸ್ತುವದ್ಭಿರಾವೀತಮಾತ್ಮಪದವೀಂ ಪ್ರತಿಪಾದಯಂತಮ್ ||

ಶ್ರೀಪರಶುರಾಮಾಯ ನಮಃ…..🙏🙏🙏

ಹಾಗೆಯೇ ಈ ದಿನ ಅಕ್ಷಯ ತದಿಗೆ
ಅಕ್ಷಯ ತದಿಗೆಯಂದು ಮಾಡಿದ ಒಳ್ಳೆಯ ಕೆಲಸಗಳಿಂದ ಬರುವ ಪುಣ್ಯ ಅಕ್ಷಯವಾಗುತ್ತದೆ ಎಂಬುದು ಶಾಸ್ತ್ರ ವಿಧಿತ.

ಆದರೆ ಯಾವ ಕೆಲಸ ಒಳಿತು ಯಾವ ಕಾರ್ಯ ಅಕ್ಷಯವಾಗುತ್ತದೆ ಎಂಬುದು ಅರಿತು ಮಾಡಿದರೆ ಒಳಿತು. ಈ ದಿನ ಬೆಳ್ಳಿ, ಬಂಗಾರ ಖರೀದಿಸಿದರೆ ಅದು ಅಕ್ಷಯ ಆಗುವುದಿಲ್ಲ. ಈ ರೀತಿ ಅಕ್ಷಯ ಆಗುವಂತಿದ್ದರೆ ಸಾಕಷ್ಟು ಮಂದಿ ಈ ದಿನ ಮದುವೆಯಾಗಿ ಪತ್ನಿಯರನ್ನು ಅಕ್ಷಯ ಮಾಡಿಕೊಳ್ಳುತ್ತಿದ್ದರೇನೋ…😅😅.

ಆದರೆ‌ ಈ‌ ಹಬ್ಬದಂದು ದೀನರಿಗೆ ದಾನ ನೀಡಬೇಕು. ಸುಡು ಬೇಸಿಗೆ ಕಾಲವಾದ್ದರಿಂದ ನಿರ್ಗತಿಕರು ಬಿಸಿಲ ಬೇಗೆಯಿಂದ ಪಾರಾಗಲು ಅವರಿಗೆ ಕೊಡೆ ದಾನ ಮಾಡಿ. ಬಿಸಿ ನೆಲದ ಮೇಲೆ ನಡೆದಾಡಲು ಚಪ್ಪಲಿ ಕೊಡಿಸಿ. ದಾಹದಿಂದ ಬಳಲುವವರಿಗಾಗಿ ಅರವಂಟಿಗೆ ಇಡಿ. ಇದರ ಜತೆ ಅನಾರೋಗ್ಯ ಪೀಡಿತರು ಕಂಡು ಬಂದರೆ ಔಷಧ ಕೊಡಿಸಿ. ಇಂತಹ ಪುಣ್ಯಕಾರ್ಯಗಳನ್ನು ಮಾಡಿದರೆ ಪುಣ್ಯ ಅಕ್ಷಯವಾಗುತ್ತದೆ.

ಈ ದಿನ ನಾವು ಮಾಡುವ ದಾನ ಮತ್ತಿತರ ಪುಣ್ಯಕಾರ್ಯಗಳಿಂದ ಬರುವ ಪುಣ್ಯ ಮಾತ್ರವೇ ಅಕ್ಷಯವಾಗುತ್ತದೆ ಎಂಬುದನ್ನು ನೆನಪಿಡಿ. ಹಣವಿದ್ದವರು ಬೇಕಿದ್ದರೆ ಬೆಳ್ಳಿ ಬಂಗಾರ ಖರೀದಿಸಿ. ಮನವಿದ್ದವರು ಕಷ್ಟದಲ್ಲಿರುವವರಿಗೆ ದಾನ ಧರ್ಮ ಮಾಡುವ ಮೂಲಕ ನೆರವಾಗಿ. ಇಂತಹ ಪುಣ್ಯ ಖಂಡಿತ ಅಕ್ಷಯವಾಗುತ್ತದೆ.

ಶ್ರೀಶ ಚರಣಾರಾಧಕ
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,
ಆನೇಕಲ್..

 
 
 
 
 
 
 
 
 

Leave a Reply