Janardhan Kodavoor/ Team KaravaliXpress
31.6 C
Udupi
Tuesday, May 24, 2022
Sathyanatha Stores Brahmavara

ಶ್ರೀ ಶಾಂತಿಮತೀ ಪ್ರತಿಷ್ಠಾನ ದ ಸಾಧಕರೆಡೆ ನಮ್ಮ ನಡೆ ಮಾಸಿಕ ಕಾರ್ಯಕ್ರಮ

ಶ್ರೀ ಶಾಂತಿಮತೀ ಪ್ರತಿಷ್ಠಾನ ದ ಸಾಧಕರೆಡೆ ನಮ್ಮ ನಡೆ ಮಾಸಿಕ ಕಾರ್ಯಕ್ರಮ ದ ಅಂಗವಾಗಿ ನಿನ್ನೆ ಸಂಜೆ ಕೋಟೇಶ್ವರ ದ ಪದ್ಮಮ್ಮ ಎಂಬುವವರನ್ನು ಗೌರವಿಸಲಾಯಿತು, ಈ ಕಾರ್ಯಕ್ರಮದಲ್ಲಿ ಶಾಂತಿಮತೀ ಪ್ರತಿಷ್ಠಾನ ದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಅಡಿಗಳು,ಮಾಜಿ ಅಧ್ಯಕ್ಷರಾದ ವಿದ್ವಾನ್ ಡಾ.ವಿಜಯ ಮಂಜರು, ಶ್ರೀ ಉಮೇಶ್ ಬಾಯರಿ, ಪ್ರಸನ್ನ ಭಟ್, ಕಾರ್ಯದರ್ಶಿ ಸಚ್ಚಿದಾನಂದ ಅಡಿಗ ವಡ್ಡರ್ಸೆ ಹಾಗೂ ಸದಸ್ಯರಾದ ಕುಕ್ಕೆಹಳ್ಳಿ ಪ್ರವಿಣ್ ಉಡುಪ, ಲಕ್ಷ್ಮೀ ಭಟ್, ವನಿತಾ ಉಪಾಧ್ಯಾಯರು ಭಾಗವಹಿಸಿದ್ದರು, ಯಾವುದೇ ಸಭೆ ಸಮಾರಂಭಗಳಲ್ಲಿ ದಣಿದು ಬಂದವರಿಗೆ ನೀರನ್ನು ಕೊಡುವ ಮೂಲಕ ನಿಸ್ವಾರ್ಥ ಸೇವೆಗೈಯುವ ಪದ್ಮಮ್ಮ ಅವರ ಸೇವೆಯನ್ನು ಗುರುತಿಸಿ ಅವರನ್ನು ಗೌರವಿಸಲಾಯಿತು, ಪ್ರಸನ್ನ ಭಟ್ ಸ್ವಾಗತಿಸಿ ವಿಜಯ ಮಂಜರ್ ಪ್ರಾಸ್ತಾವಿಕ ಭಾಷಣ ಮಾಡಿದರು, ಉಮೇಶ್ ಬಾಯರಿ ಧನ್ಯವಾದ ಸಮರ್ಪಣೆಗೈದು ಸಚ್ಚಿದಾನಂದ ಅಡಿಗ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು, ಲಘು ಉಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಶಾಂತಿಮತೀ ಪ್ರತಿಷ್ಠಾನ ದ ಸದಸ್ಯರು ಹಾಗೂ ಪದ್ಮಮ್ಮ ಅವರ ಹಿತೈಷಿಗಳು ಭಾಗವಹಿಸಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!