ಅಭಯ ಹಸ್ತ ಚಾರಿಟಬಲ್ ಟ್ರಸ್ಟ್ ವತಿಯಿಂದ ಯಕ್ಷ ಕಲಾ ವೈಭವ ಕಾರ್ಯಕ್ರಮ

ಉಡುಪಿ ಮಾ.21 : ಅಭಯ ಹಸ್ತ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಭಯ ಹಸ್ತ ವರ್ಷದ ವ್ಯಕ್ತಿ 2022 ಹಾಗೂ ಯಕ್ಷ ಕಲಾ ವೈಭವ ಕಾರ್ಯಕ್ರಮ ಇಂದು ಉಡುಪಿಯ ಪುರಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಹಾಗೂ ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ನಾಡೋಜ ಡಾ.ಕೃಷ್ಣ ಪ್ರಸಾದ್ ಕೂಡ್ಲು ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಅಭಯ ಹಸ್ತ ಟ್ರಸ್ಟ್ ಜನಪ್ರಿಯ ಕಾರ್ಯಕ್ರಮವನ್ನು ನಡೆಸುತ್ತಾ ಬರುತ್ತಿದ್ದೆ. ಪ್ರಸಾದ್ ನೇತ್ರಾಲಯದ ವತಿಯಿಂದ 4 ರಾಜ್ಯ 7 ಜಿಲ್ಲೆಗಳಲ್ಲಿ ನಿರಂತರ ನೇತ್ರ ಚಿಕಿತ್ಸಾ ಶಿಬಿರವನ್ನು ನಡೆಸಿಕೊಂಡು ಬರುತ್ತಿದ್ದು, ಈ ವರೆಗೆ 25 ಲಕ್ಷಕ್ಕೂ ಅಧಿಕ ಕಣ್ಣಿನ ರೋಗಿಗಳ ತಪಾಸಣೆ ಮಾಡಿದ್ದೇವೆ ಎಂದರು.

ಹಾಗೂ ಪ್ರತೀ ವರ್ಷ ಪ್ರಸಾದ್ ನೇತ್ರಾಲಯದ ಸಂಪೂರ್ಣ ಖರ್ಚು ವೆಚ್ಚ ವಹಿಸಿಕೊಂಡು ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಅವರ ನೇತೃತ್ವದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಮಾಡುವ ಯೋಜನೆ ಹೊಂದಿದ್ದೇವೆ ಎಂದರು.

ಈ ವೇಳೆ ಕಾರ್ಯಕ್ರಮದಲ್ಲಿ ಅಭಯ ಹಸ್ತ ಸಂಸ್ಥೆಯ ಟೀ ಶರ್ಟ್ ಬಿಡುಗಡೆಗೊಳಿಸಿ ಮಾತನಾಡಿದ ಸಮಾಜ ಸೇವಕ ಕೃಷ್ಣ ಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ ಅವರು, ಸತೀಶ್ ಸಾಲ್ಯಾನ್ ಅವರು ತಮ್ಮ ಕಾರ್ಯದ ಮೂಲಕ ಸಾವಿರಾರು ಮಂದಿಯ ಜೀವ ಉಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಂದ ಇನ್ನಷ್ಟು ಸಮಾಜಮುಖಿ ಕಾರ್ಯ ನಡೆಯಲಿ. ಅವರ ಆ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವುದಾಗ ತಿಳಿಸಿದರು.

ಕಾರ್ಯಕ್ರಮ ದಲ್ಲಿ ಕುಂದಾಪುರದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಇದರ ಸಭಾಪತಿ ಎಸ್. ಜಯಕರ್ ಶೆಟ್ಟಿ ಅವರಿಗೆ ಅಭಯ ಹಸ್ತ ವರ್ಷದ ವ್ಯಕ್ತಿ2022 ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು,

ಅಭಯ ಹಸ್ತ ತಂಡದವರು ಮಾಡಿರುವ ಕಾರ್ಯವನ್ನು ನಾವು ಪಾಲಿಸಬೇಕಾಗಿದೆ. ಮುಂದಿನ ದಿನಗಳಲ್ಲಿಯೂ ತಂಡದವರಿಂದ ಇಂತಹ ಕಾರ್ಯಕ್ರಮ ಗಳು ನಿರಂತರವಾಗಿ ನಡೆಯುತ್ತಾ ಬರಲಿ ಎಂದು ಶುಭ ಹಾರೈಸಿದರು.

ಹಾಗೂ ಇದೇ ವೇಳೆ ರೆಡ್ ಕ್ರಾಸ್ ಸಂಸ್ಥೆಯ ಬಗ್ಗೆ ಮಾತನಾಡಿ,
ಯಾವುದೇ ಫಲಾಪೇಕ್ಷೆ ಇಲ್ಲದ ರೆಡ್ ಕ್ರಾಸ್ ಸಂಸ್ಥೆ ಯ ಸಿಬ್ಬಂದಿಗಳ ಸೇವೆಯಿಂದ ಇಂದು ಇಂಡಿಯನ್ ರೆಡ್ ಕ್ರಾಸ್ ಯಶಸ್ವಿಯಾಗಿ ನಡೆಯುತ್ತಿದೆ . ರೆಡ್ ಕ್ರಾಸ್ ಸಂಸ್ಥೆಯ ಮ‌ೂಲಕ ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಬಂದಿದೆ.

ತಾಲೂಕು ಮಟ್ಟದಲ್ಲಿ ರಕ್ತ ನಿಧಿ ಕೇಂದ್ರ ಸ್ಥಾಪಿಸುವ ಉದ್ದೇಶದಿಂದ 2018 ರಲ್ಲಿ ರಕ್ತ ನಿಧಿ ಕೇಂದ್ರವನ್ನು ಸ್ಥಾಪಿಸಲಾಯಿತು. ತಾಲೂಕು ಮಟ್ಟದಲ್ಲಿ ಯಾವುದೇ ಅನುದಾನವಿಲ್ಲದೆ ರಕ್ತನಿಧಿ ಕೇಂದ್ರವನ್ನು ಸ್ಥಾಪಿಸುವುದು ಕಷ್ಟ ಅದರಲ್ಲೂ ಸಂಸ್ಥೆಯನ್ನು ಮುನ್ನಡೆ ಸಿಕೊಂಡು ಹೋಗುವುದು ಅದಕ್ಕಿಂತ ದೊಡ್ಡ ಸವಾಲಾಗಿದೆ.

ರೆಡ್ ಕ್ರಾಸ್ ಸಂಸ್ಥೆಯು ಸರಕಾರಿ ಜಾಗದಲ್ಲಿದೆ ಎಂದು ಸರಾಕಾರ ನಡೆಸಿಕೊಂಡು ಬರುತ್ತಿದೆ ಎಂದು ಹಲವರು ನಂಬಿಕೊಂಡಿದ್ದಾರೆ. ಸಂಸ್ಥೆ ಮಾಲಕತ್ವ ಸರಕಾರದ್ದಾಗಿರುತ್ತದಯೇ ಹೊರತು ಸಂಸ್ಥೆ ನಡೆಸಲು ಸರಕಾರದಿಂದ ಯಾವುದೇ ಅನುದಾನ ಬರುವುದಿಲ್ಲ. ಪ್ರಸ್ತುತ ರಾಜ್ಯದಲ್ಲಿ ಕುಂದಾಪುರ ರೆಡ್ ಕ್ರಾಸ್ ಸೊಸೈಟಿ ಸುಸಜ್ಜಿತವಾದ ರಕ್ತ ನಿಧಿ ಕೇಂದ್ರವಾಗಿ ಮಾರ್ಪಟ್ಟಿದೆ ಎಂದರು.

ಕಾರ್ಯಕ್ರಮದಲ್ಲಿ ಕರಾವಳಿ ಯೂತ್ ಕ್ಲಬ್ ಉಡುಪಿ , ಮಾತೃಶ್ರೀ ಸೇವಾ ಸಂಘ ಮಣಿಪಾಲ, ಕುಂದಾಪುರ ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆಗಳಿಗೆ ಅಭಯ ಹಸ್ತ ಪ್ರತಿಷ್ಠಿತ ಸಂಘಟನೆ 2022 ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ನ ಗೌರವಾಧ್ಯಕ್ಷ ಯಶ್ ಪಾಲ್ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಡಾ.ಜಿ.ಶಂಕರ್,
ಮಾತೃಶ್ರೀ ಸೇವಾ ಸಂಘ ಮಣಿಪಾಲ ಇದರ ಪ್ರವರ್ತಕ ಡಾ. ಬಳ್ಕೂರು ಗೋಪಾಲ ಆಚಾರ್ಯ, ಮಣಿಪಾಲದ ಎಂ.ಐಟಿ ಯ ಭದ್ರತಾ ಅಧಿಕಾರಿ ರತ್ನಾಕರ ಸಾಮಂತ್,ಟ್ರಸ್ಟ್‌ ನ ಅಧ್ಯಕ್ಷ ಸತೀಶ್ ಸಾಲಿಯಾನ್, ರಾಜೇಶ ಮೆಂಡನ್ ಉಪಸ್ಥಿತರಿದ್ದರು.
ಅಭಯಹಸ್ತ ಹೆಲ್ಪ್ ಲೈನ್‌ ಇದರ‌ ಅಧ್ಯಕ್ಹ ರಾಜೇಶ್ ಶೆಟ್ಟಿ ಅವರನ್ನು ಕೂಡಾ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು..

ಸತೀಶ್ ಶೆಟ್ಟಿ ಮತ್ತು ರಾಘವೇಂದ್ರ ಮರವಂತೆ ಕಾರ್ಯಕ್ರಮ ನಿರೂಪಿಸಿದರು.
ದಿನೇಶ್ ಹೆಗ್ಡೆ ಆತ್ರಾಡಿ ವಂದಿಸಿದರು.
ಬಳಿಕ ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಹಾಗೂ ಅತಿಥಿ ಕಲಾವಿದರಿಂದ ವೀರ ಬಾರ್ಬರಿಕ ಯಕ್ಷಗಾನ ಪ್ರದರ್ಶನ ನಡೆಯಿತು.

 
 
 
 
 
 
 
 
 
 
 

Leave a Reply