ತರಬೇತಿಯಲ್ಲಿ ಶಿಕ್ಷಕರ ಬದ್ಧತೆ ಶ್ಲಾಘನೀಯ: ಡಾ. ಅಶೋಕ ಕಾಮತ್

ಉಡುಪಿ, ಮಾರ್ಚ್ 17 (ಕವಾ):ಶಿಕ್ಷಕರು ನಿರಂತರ ಕಲಿಕಾದಾರರು. ಆನ್‌ಲೈನ್ ಮೂಲಕ ಶಾಲಾ ಅವಧಿಯ ಬಳಿಕ ನಡೆಸಿದ ತರಬೇತಿಯಲ್ಲಿ
ಸಕ್ರಿಯವಾಗಿ ಪಾಲ್ಗೊಂಡ ಶಿಕ್ಷಕರ ಬದ್ಧತೆಯು ಶ್ಲಾಘನೀಯ ಎಂದು ಉಡುಪಿ ಡಯಟ್‌ನ ಉಪಪ್ರಾಂಶುಪಾಲ ಡಾ. ಅಶೋಕ ಕಾಮತ್
ತಿಳಿಸಿದರು.

ಅವರು ಇಂದು ಉಡುಪಿ ಡಯಟ್ ಇಲ್ಲಿ ಶ್ರೀ ಅರಬಿಂದೋ ಸೊಸೈಟಿ ವತಿಯಿಂದ ಆನ್‌ಲೈನ್ ಮೂಲಕ ನಡೆದ ತರಬೇತಿಗಳ ಸಮಾರೋಪ
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ತರಬೇತುದಾರ ವಿನಯ್ ಜೆ. ಪ್ರಾಸ್ತಾವಿಕವಾಗಿ ಮಾತನಾಡಿ, ತರಬೇತಿ ಪಡೆದ ಶಾಲೆಗಳನ್ನು ರೋಲ್ ಮಾಡೆಲ್ ಶಾಲೆಗಳಾಗಿ ಗುರುತಿಸಿ
ಬ್ಯಾನರ್‌ಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ತರಬೇತುದಾರರನ್ನು ಸನ್ಮಾನಿಸಲಾಯಿತು. ರಾಷ್ಟ್ರೀಯ ಶಿಕ್ಷಣ ನೀತಿ, ಇನ್ನೋವೇಟಿವ್ ಪಾಠಶಾಲಾ, ಎಫ್.ಎಲ್.ಎನ್. ಮುಂತಾದ ವಿಷಯಗಳ ತರಬೇತಿಯ ಕುರಿತು ಶಿಕ್ಷಕರು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಡಯಟ್ ಉಪನ್ಯಾಸಕ ಸುಬ್ರಹ್ಮಣ್ಯ ಭಟ್, ಗಣೇಶ ಕೃಷ್ಣ ಭಾಗವತ್, ಪ್ರವೀಣಾ ಕುಮಾರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ
ಪ್ರಧಾನ ಕಾರ್ಯದರ್ಶಿ ಸಂಜೀವ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಪೆರ್ಣಂಕಿಲ ಶಾಲೆಯ ಶಿಕ್ಷಕಿ ಸುನೀತ ಪ್ರಾರ್ಥಿಸಿದರು, ಕೋಣಿ ಶಾಲೆಯ ಶಿಕ್ಷಕಿ ತಾರಾದೇವಿ ಸ್ವಾಗತಿಸಿದರು, ಚೆರ್ಕಾಡಿ ಶಾಲೆಯ ಶಿಕ್ಷಕಿ ಜಯಶ್ರೀ
ರೋಟೆ ವಂದಿಸಿದರು. ಬೈರಂಪಳ್ಳಿ ಶಾಲೆಯ ಶಿಕ್ಷಕಿ ಶ್ರೀಮತಿ ಮುರಳೀಧರ ಪಿ ನಿರೂಪಿಸಿದರು.

 
 
 
 
 
 
 
 
 
 
 

Leave a Reply