ಉಡುಪಿಯಲ್ಲೂ ಸರಕಾರಿ‌ ಜಮೀನು ಲಕ್ಷಗಟ್ಟಲೆಗೆ ಮಾರಾಟ..?

ಉಡುಪಿ :  ಆದಿ ಉಡುಪಿಯಲ್ಲಿ ಸುಮಾರು 20 ವರ್ಷಗಳಿಂದ ಸಣ್ಣ ವರ್ತಕರು ವ್ಯಾಪಾರಿ ಮಾಡಿ ಜೀವನ ಕಂಡುಕೊಂಡಿದ್ದ ಮಾರುಕಟ್ಟೆ ಜಾಗವನ್ನು ಇದೀಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇತರರಿಗೆ ಮಾರಲು ಹೊರಟಿದೆ. ಇನ್ನು ಮಾರುಕಟ್ಟೆಯ ಅಂಗಡಿಗಳನ್ನು ಪ್ರತಿ ಚದರ ಅಡಿಗೆ 376 ರೂ.ಗಳಂತೆ 14 ನಿವೇಶನ ಗಳನ್ನು ಮಾರಾಟ ಮಾಡಲು ಸಮಿತಿ ಮುಂದಾಗಿದ್ದು, ಈ ಬಗ್ಗೆ ಪತ್ರಿಕೆಗಳಲ್ಲಿ ನಿವೇಶನ ಮಾರಾಟದ ಜಾಹಿರಾತು ಕೂಡಾ ಪ್ರಕಟಗೊಂಡಿದೆ. 

 

ಈ ಬಗ್ಗೆ ಮಾರುಕಟ್ಟೆಯಲ್ಲಿ ಹಲವು ವರುಷಗಳಿಂದ ವ್ಯಾಪಾರ ನಿರ್ವಹಿಸುತ್ತಿರುವ ವರ್ತಕರು ವಿರೋಧ ವ್ಯಕ್ತಪಡಿಸಿದ್ದು, ಸಮಿತಿಯ ಈ ನಿರ್ಧಾರದಿಂದ ಇಲ್ಲಿ ಹಲವಾರು ವರ್ಷಗಳಿಂದ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ ವರ್ತಕರು ಆತಂಕಕ್ಕೀಡಾಗಿದ್ದಾರೆ.

 

ತಾವುಗಳು ವ್ಯಾಪಾರ ಮಾಡುವ ಜಾಗವನ್ನು ಇತರರಿಗೆ ಮಾರಾಟ ಮಾಡದೆ ವರ್ತಕರ ವ್ಯಾಪಾರಕ್ಕೆ ವ್ಯವಸ್ಥೆ ಮಾಡಿ ಕೊಡಬೇಕು ಎಂದು ಆದಿಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆಯ ಹಣ್ಣು, ತರಕಾರಿ ಮತ್ತು ದಿನಸಿ ವರ್ತಕರ ಸಂಘದ ಸದಸ್ಯರು  ಜಿಲ್ಲಾಧಿಕಾರಿಗೆ ಮನವಿ ಮಾಡಿ ಕೊಂಡಿದ್ದಾರೆ.

 
 
 
 
 
 
 
 
 
 
 

Leave a Reply