Janardhan Kodavoor/ Team KaravaliXpress
30.6 C
Udupi
Sunday, October 2, 2022
Sathyanatha Stores Brahmavara

ಶ್ರೀ ರಮಾನಂದ ಗುರೂಜಿ ದಂಪತಿಗಳಿಗೆ ಆದರ್ಶ ದಂಪತಿ ಪ್ರಶಸ್ತಿ

ಹೊಸಪೇಟೆ: ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಅಭಿವೃದ್ಧಿ ಟ್ರಸ್ಟ್ (ರಿ)  ಹಾಗುಾ ಕನ್ನಡ ಸಂಸ್ಕೃತಿ ಮತ್ತು ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ಹೊಸಪೇಟೆಯಲ್ಲಿ ನೆರವೇರಿದ ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜ್ ಕುಮಾರ್ ಸಾಂಸ್ಕೃತಿಕ ಲೋಕೋತ್ಸವ 2022 ಹಾಗೂ ಜುಲೈ 31ರ೦ದು ನೆರವೇರಲಿರುವ ವಿಜಯನಗರ ಕರ್ನಾಟಕ 4ನೇ ಸಾಂಸ್ಕೃತಿಕ ಸಮ್ಮೇಳನ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾದ ದೊಡ್ಡಣ್ಣಗುಡ್ಡೆಯ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿ ಖ್ಯಾತ ಆಧ್ಯಾತ್ಮಿಕ ಮಾರ್ಗದರ್ಶಕ ರಾದ ಶ್ರೀ ಶ್ರೀ ರಮಾನಂದ ಗುರೂಜಿ ಆಶೀರ್ವಚನ ನೀಡಿದರು. 
ಕಾರ್ಯಕ್ರಮದ ಆರಂಭಕ್ಕೂ ಮುನ್ನ ಹೊಸಪೇಟೆಯಲ್ಲಿ ನೂತನವಾಗಿ ನಿರ್ಮಿಸಿದ ಡಾಕ್ಟರ್ ಪುನೀತ್ ರಾಜ್ ಕುಮಾರ್ ಪುತ್ಥಳಿಗೆ ಶ್ರೀ ರಮಾನಂದ ಗುರೂಜೀ ಹಾಗೂ ಸಮ್ಮೇಳನಾಧ್ಯಕ್ಷ ಸತೀಶ ಹೊಸಮನಿ ಜಂಟಿಯಾಗಿ ಮಾಲಾರ್ಪಣೆಗೈದು ಗೌರವ ಸಮರ್ಪಿಸಿದರು. 
ಈ ಸಂದರ್ಭದಲ್ಲಿ ವೈವಾಹಿಕ ರಜತ ಸಂಭ್ರಮದಲ್ಲಿರುವ ಶ್ರೀ ರಮಾನಂದ ಗುರೂಜಿ ದಂಪತಿಗಳನ್ನು ಅಪಾರ ಭಕ್ತ ಸಮೂಹ ಆದರ್ಶ ದಂಪತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು..
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!