ರಾಷ್ಟೀಯ ಸರಕಾರಿ ನಿವೃತ್ತ ನೌಕರರ ದಿನಾಚರಣೆ  

ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಉಡುಪಿ ಜಿಲ್ಲಾ ಸಂಘದ ವತಿಯಿಂದ ಇದೇ ತಿಂಗಳ ದಿನಾಂಕ 19 ರಂದು ಸಂಘದ ಕಚೇರಿಯಲ್ಲಿ ರಾಷ್ಟೀಯ ಪಿಂಚಣಿ ದಾರರ ದಿನವನ್ನು ಆಚರಿಸಲಾಯಿತು.

ಸಂಘದ ಅಧ್ಯಕ್ಷರಾದ ಶ್ರೀ ಯಂ ನಾರಾಯಣ ಭಟ್ ಅವರು ಅಧ್ಯಕ್ಷರ ಭಾಷಣದಲ್ಲಿ ರಾಷ್ಟ್ರೀಯ ಸರಕಾರೀ ನಿವೃತ್ತ ನೌಕರರ ದಿನಾಚರಣೆ ಬಗ್ಗೆ ಮಾತಾಡುತ್ತಾ ಈ ದಿನಾಚರಣೆಗೆ ಕಾರಣೀಭೂತರಾದ ಶ್ರೀ ಡಿ ಎಸ್ ನಕ್ರಾ ಇವರು ಕೇಂದ್ರ ಸರ್ಕಾರ ನೇಮಿಸಿದ ಭಟ್ಟಾಚಾರ್ಯ ವರದಿಯಲ್ಲಿನ ನಿವೃತ್ತ ನೌಕರರಿಗೆ ಪಿಂಚಣಿ ಯನ್ನು ನಿಲ್ಲಿಸಬೇಕು ಎಂಬುದನ್ನು ಸರ್ವೋಚ್ಚ ನ್ಯಾಯಾಲಯದ ಲ್ಲೀ ಪ್ರಶ್ನಿಸಿ ನಿವೃತಿ ವೇತನ ಪಿಂಚಣಿ ದಾರರ ಹಕ್ಕು ಅದು ಬಿಕ್ಷೆಯಲ್ಲ ಎಂದು ಸಮರ್ಥವಾದ ವಾದ ಮಂಡಿಸಿದರು.ಅದರಂತೆ ಸೇವೋಚ್ಚ ನ್ಯಾಯಾಲಯದ ಪೂರ್ಣ ಪೀಠವು ದಿನಾಂಕ 17-12-1982 ರಲ್ಲಿ ತನ್ನ ಐತಿಹಾಸಿಕ ತೀರ್ಪನ್ನು ನೀಡಿ ಪಿಂಚಣಿಯನ್ನು ಮುಂದುವರಿಸುವಂತೆ ಆದೇಶ ನೀಡಿತು. ಆ ತೀರ್ಪಿನ ಫಲವಾಗಿ ನಾವಿಂದು ನಿವೃತ್ತಿ ವೇತನ ವನ್ನು ಪಡೆಯುತ್ತಿದ್ದೇವೆ. ಇದಕ್ಕಾಗಿ ಈ ದಿನವನ್ನು ಪಿಂಚಣಿ ದಾರರ ದಿನವನ್ನಾಗಿ ಆಚರಿಸುವುದರ ಮೂಲಕ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು ಎಂದು ತಿಳಿಸಿದರು.
ಸಂಘಟನಾ ಕಾರ್ಯದರ್ಶಿ ಶೇಖರ್ ನಾಯಕ್ ಸ್ವಾಗತಿಸಿದರು.ಕಾರ್ಯದರ್ಶಿ ಆನಂದ ಗಾಣಿಗ ರು ಕಾರ್ಯಕ್ರಮ ನಿರೂಪಿಸಿದರು.ಉಪಾಧ್ಯಕ್ಷರಾದ ಹರಿಕೃಷ್ಣ ಶಿವತ್ಠಾಯ ಧನ್ಯವಾದವಿತ್ತರು.ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಉಪ್ಸ್ಥಿತರಿದ್ದರು.

 
 
 
 
 
 
 
 
 
 
 

Leave a Reply