ಕಟಪಾಡಿ -ಕನ್ನಡ ಸಾಹಿತ್ಯ ಸಮ್ಮೇಳನ ಕೃತಜ್ಞತಾರ್ಪಣೆ

ಯಾವುದೇ ಬೃಹತ್ ಕಾರ್ಯಕ್ರಮಗಳ ಹಿಂದೆ ಸಾಕಷ್ಟು ಪೂರ್ವಸಿದ್ಧತೆ, ಕಠಿಣ ಪರಿಶ್ರಮ, ಸಮರ್ಥ ನಾಯತ್ವ, ಕಾರ್ಯಕರ್ತರ ಕ್ರಿಯಾಶೀಲತೆ,ಪರಸ್ಪರ ಸಹಕಾರ ಮನೋಭಾವ ಇದ್ದಲ್ಲಿ ಅಸಾಧ್ಯ ಎಂಬುದು ಯಾವುದೂ ಇಲ್ಲ. ಎಲ್ಲರ ಸಹಕಾರ,ಸಫಲತೆಯ ಮನೋಭಾವ ಪೂರ್ವಸಿದ್ಧತೆ, ಕಠಿಣಪರಿಶ್ರಮದ ಸಮ್ಮಿಳಿತವೇ ಯಶಸ್ಸು ಎಂದು ಕಟಪಾಡಿ ಎಸ್‌ವಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರು, ಕಾಪು ತಾಲೂಕು ೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಗೌರವಾಧ್ಯಕ್ಷರಾದ ಕೆ.ಸತ್ಯೇಂದ್ರ ಪೈ ನುಡಿದರು.

ಅವರು ಶನಿವಾರ ತಮ್ಮ ವಿದ್ಯಾಲಯದಲ್ಲಿ ಜರುಗಿದ ಕಾಪು ತಾಲೂಕು ೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಹಕರಿಸಿದವರಿಗಾಗಿ ಏರ್ಪಡಿಸಿದ ಕೃತಜ್ಞತಾರ್ಪಣೆ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ತಾಲೂಕು ಸಮಿತಿಯೊಂದಿಗೆ ಶಾಲೆಯ ಮುಖ್ಯಸ್ಥರು, ಅಧ್ಯಾಪಕ ವೃಂದದವರ ಪರಿಶ್ರಮವಿದೆ. ದಾನಿಗಳ ಸಹಕಾರದಿಂದ ಸಮ್ಮೇಳನ ಸ್ಮರಣೀಯವಾಗಿ ನಡೆದಿದೆ. ಮುಂದೆಯೂ ಜಿಲ್ಲಾ ಸಮ್ಮೇಳನ ನಡೆಸುವುದಿದ್ದಲ್ಲಿ ನಮ್ಮ ಸಂಸ್ಥೆಯ ಪೂರ್ಣ ಸಹಕಾರ ಇದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿ ಮಾತನಾಡುತ್ತಾ, ಸರ್ವರ ಸಹಕಾರದಿಂದ ಸಮ್ಮೇಳನದ ಎಲ್ಲಾ ಕಾರ್ಯಕ್ರಮಗಳು, ಅರ್ಥಪೂರ್ಣವಾಗಿ ಸಂಪನ್ನಗೊoಡಿವೆ. ಪ್ರಾಂಶುಪಾಲ ಡಾ.ದಯಾನಂದ ಪೈರವರ ಕಾಯಾಧ್ಯಕ್ಷತೆಯಲ್ಲಿ ನಡೆದ ಸ್ವಾಗತ ಸಮಿತಿಯ ಕಾರ್ಯ ಅನುಕರಣೀಯ ಎಂದರು.
ಸಭೆಯಲ್ಲಿ ಸಮ್ಮೇಳನದ ಕಾರ್ಯಾಧ್ಯಕ್ಷ ಡಾ.ದಯಾನಂದ ಪೈ, ಕಾರ್ಯದರ್ಶಿ ಭಾಸ್ಕರ ಕಾಮತ್, ಫ್ರೌಢ ಶಾಲಾ ಮುಖ್ಯಶಿಕ್ಷಕ ಸುಬ್ರಹ್ಮಣ್ಯ ತಂತ್ರಿ, ಆಡಳಿತ ಮಂಡಳಿ ಸದಸ್ಯ ಗಣೇಶ್ ಕಿಣಿ, ಕಸಾಪ ತಾಲೂಕು ಘಟಕದ ಕೋಶಾಧ್ಯಕ್ಷ ವಿದ್ಯಾಧರ್ ಪುರಾಣಿಕ, ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು, ಸಂಘಟನಾ ಕಾರ್ಯದರ್ಶಿ ದೀಪಕ್ ಬೀರ, ಕಸಾಪ ಸಮಿತಿ ಸದಸ್ಯೆ ಗ್ರೆಟ್ಟಾ ಮೋರಾಸ್ ಪಲಿಮಾರು, ಧರ್ಮಸ್ಥಳ ಗ್ರಾ.ಯೋ.ಪದಾಧಿಕಾರಿ ಪ್ರಭಾ ಬಿ.ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕ ಕಿರಣ್‌ಕುಮಾರ್ ಶೆಟ್ಟಿ, ದಿಲೀಪ್ ಕುಮಾರ್ ಬನ್ಸೋಡೆ, ನವೋದಯ ಸಂಘದ ಕಾರ್ಯಕರ್ತರು, ಶಿಕ್ಷಕವೃಂದದವರು ಉಪಸ್ಥಿತರಿದ್ದರು. ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು ಧನ್ಯವಾದವಿತ್ತರು.

 
 
 
 
 
 
 
 
 
 
 

Leave a Reply