Janardhan Kodavoor/ Team KaravaliXpress
26.6 C
Udupi
Monday, January 30, 2023
Sathyanatha Stores Brahmavara

ಸಂವಿಧಾನದ ತಾತ್ವಿಕ ಮೌಲ್ಯ ಅರಿತು ಅನುಸರಿಸಿ – ಡಾ ದಿನೇಶ್ ಹೆಗ್ಡೆ

ಉಡುಪಿ: ಸಂವಿಧಾನದ ತಾತ್ವಿಕ ಮೌಲ್ಯಗಳನ್ನು ಅರಿತು ಅದನ್ನು
ಪಾಲಿಸುವುದು ಪ್ರಜಾಪ್ರಭುತ್ವದ ಉಳಿವಿಗೆ ಬಹಳ ಮುಖ್ಯ. ಸಂವಿಧಾನದ
ಪೀಠಿಕೆ ನಮ್ಮ ಸಂವಿಧಾನದ ಒಟ್ಟು ತಾತ್ವಿಕ ಚಿಂತನೆಯ ಸಾರಾಂಶವಾಗಿದೆ.
ಸoವಿಧಾನದ ತಾತ್ವಿಕ ತಿರುಳನ್ನು ಅರಿತು ಅಳವಡಿಸಿಕೊಳ್ಳುವುದು
ಯುವಜನರ ಆದ್ಯ ಕರ್ತವ್ಯವಾಗಬೇಕು ಎಂದು ಬಸರೂರು ಶಾರದಾ
ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ದಿನೇಶ್ ಹೆಗ್ಡೆ ಹೇಳಿದರು. ಅವರು
ಕೇಂದ್ರ ಸಂವಹನ ಇಲಾಖೆ ಮಂಗಳೂರು, ಸರಕಾರಿ ಪ್ರಥಮ ದರ್ಜೆ
ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ
ತೆAಕನಿಡಿಯೂರು ಉಡುಪಿ, ಐ.ಕ್ಯೂ.ಎ.ಸಿ ರಾಜ್ಯಶಾಸ್ತç ವಿಭಾಗ ಇವರ
ಸಂಯುಕ್ತ ಆಶ್ರಯದಲ್ಲಿ ನಡೆದ ಸಂವಿಧಾನ ಜಾಗೃತಿ
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಆದ್ಯಕ್ಷತೆಯನ್ನು ವಹಿಸಿದ್ದ ತೆಂಕನಿಡಿಯೂರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್ ರೈ ಕೆ.
ಸಂವಿಧಾನದ ಪೀಠಿಕೆಯ ಪ್ರತಿಜ್ಷಾವಿಧಿ ಬೋಧಿಸಿ ಜಗತ್ತಿನ ಅತ್ಯಂತ
ದೊಡ್ಡ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ
ಕರ್ತವ್ಯ ಎಂದರು. ಮಂಗಳೂರು ಕೇಂದ್ರ ಸಂವಹನ ಇಲಾಖೆಯ
ಕ್ಷೇತ್ರ ಪ್ರಚಾರ ಅಧಿಕಾರಿ ಜೆ. ತುಕರಾಮ ಗೌಡ ಪ್ರಸ್ತಾವಿಕವಾಗಿ
ಮಾತನಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗಾಗಿ ಸಂವಿಧಾನದ ಅರಿವಿನ
ಮಹತ್ವದ ಕುರಿತಾಗಿ ನಡೆಸಿದ ಭಾಷಣ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಾದ ಸುಷ್ಮಾ, ಕಿಶೋರ ಮತ್ತು ಎಲ್ಲಪ್ಪ ಅವರಿಗೆ ಬಹುಮಾನ ವಿತರಿಸಲಾಯಿತು.
ತದನಂತರದಲ್ಲಿ ಜಿಲ್ಲಾಡಳಿತದಲ್ಲಿ ನಿಯೋಜನೆಗೊಂಡ ಅಧಿಕಾರಿ
ವರ್ಗದವರಿಂದ ಅರ್ಹ ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ
ಸೇರ್ಪಡೆಗೊಳ್ಳುವ ಆನ್‌ಲೈನ್ ನೋಂದಣಿ ಕಾರ್ಯಕ್ರಮವನ್ನು
ನಡೆಸಲಾಯಿತ್ತು. ಕಾಲೇಜಿನ ಸಮಾಜಕಾರ್ಯ ಸ್ನಾತಕೋತ್ತರ ವಿಭಾಗದ
ಮುಖ್ಯಸ್ಥ ಡಾ. ದುಗ್ಗಪ್ಪ ಕಜೆಕಾರ್, ಸಮಾಜಶಾಸ್ತç ವಿಭಾಗದ ಮುಖ್ಯಸ್ಥ
ಡಾ. ರಾಘವ ನಾಯ್ಕ್ , ಗ್ರಂಥಾಲಯ ಅಧಿಕಾರಿ ಶ್ರೀ. ಕೃಷ್ಣ ಸಾಸ್ತಾನ,
ಐ.ಕ್ಯೂ.ಎ.ಸಿ. ಸಂಚಾಲಕಿ ಡಾ. ಮೇಮಿ ಮಿರಾಂದ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ
ಶ್ರೀ ರಾಧಾಕೃಷ್ಣ ಮತ್ತಿತರರು ಉಪಸ್ಥಿತರಿದ್ದರು. ರಾಜ್ಯಶಾಸ್ತç
ವಿಭಾಗದ ಸಹಾಯಕ ಪ್ರಾಧ್ಯಾಪಕರ ಶ್ರೀ. ಪ್ರಶಾಂತ್ ನೀಲಾವರ ಸ್ವಾಗತಿಸಿ
ಕಾರ್ಯಕ್ರಮ ನಿರೂಪಿಸಿದರು. ಡಾ. ಮಹೇಶ್ ಕುಮಾರ್ ವಂದಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!