ಲಯನ್ಸ್ ಕ್ಲಬ್ ಬ್ರಹ್ಮಗಿರಿಗೆ ಜಿಲ್ಲಾ ಗವರ್ನರ್ ದಂಪತಿಗಳ ಅಧಿಕೃತ ಭೇಟಿ

ವ್ಯಕ್ತಿ ವಿಕಸನ, ಜನರ ಸೇವೆ ಹಾಗೂ ಉತ್ತಮ ಬಾಂಧವ್ಯ ಬೆಳೆಸಲು ಲಯನ್ಸ್ ಕ್ಲಬ್ ಗಳು ಒಂದು ಮಾದರಿ ಸಂಸ್ಥೆಯಾಗಿವೆ. ಅದನ್ನು ಎಲ್ಲರೂ ಉಪಯೋಗಿಸಿ ಹಾಗೂ ಅದರಲ್ಲಿ ತೊಡಗಿಸಿ.ಇದರ ಒಂದು ಮಾದರಿ ಕ್ಲಬ್ ಆಗಿ ಲಯನ್ಸ್ ಕ್ಲಬ್ ಬ್ರಹ್ಮಗಿರಿ  ರೂಪುಗೊಂಡಿದೆ ಎಂದು 317 ಸಿ ಜಿಲ್ಲಾ ಗವರ್ನರ್ ಲಯನ್ ಎಂ ಕೆ ಭಟ್ ಕ್ಲಬ್ಬಿಗೆ ಅಧಿಕೃತ ಭೇಟಿ ಕೊಟ್ಟ ಸಂದರ್ಭದಲ್ಲಿ ಶ್ರೀ ಲಕ್ಷ್ಮಿ ಸಭಾಭವನ, ಲಕ್ಷ್ಮಿ ಟವರ್ಸ್ ಉಡುಪಿ ಚಿಟ್ಪಾಡಿಯಲ್ಲಿ ನಡೆದ ಸಮಾರಂಭದಲ್ಲಿ ನೆರೆದ ಲೈನ್ಸ್ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕ್ಲಬ್ ವತಿಯಿಂದ   ಜಿಲ್ಲಾ ಗವರ್ನರ್ ಲಯನ್ ಎಂ ಕೆ ಭಟ್  ರವರನ್ನು ಗೌರವಿಸಲಾಯಿತು ಬಳಿಕ ವೇದಿಕೆಯಲ್ಲಿ    ವಿದ್ಯಾರ್ಥಿ ನಿಶ್ಚಿತ್ ಶೆಟ್ಟಿಗೆ, ಕಿಡ್ನಿ ಡಯಾಲಿಸಿಸ್ ತೊಂದರೆಯಿಂದ ಬಳಲುತ್ತಿರುವ ಮಹಾಂತೇಶ್ ಹಾಗೂ ಇನ್ನಿತರ ಅಗತ್ಯವಿರುವವರಿಗೆ ಕ್ಲಬ್ಬಿನ ವತಿಯಿಂದ ಧನಸಹಾಯ ಮಾಡಲಾಯಿತು. ಲಯನ್ಸ್ ಕ್ಲಬ್ ಬ್ರಹ್ಮಗಿರಿಯ ಅಧ್ಯಕ್ಷರಾದ ಉಮೇಶ್ ನಾಯಕ್ ಸ್ವಾಗತಿಸಿ ಕ್ಲಬ್ಬಿನ ಮುಂದಿರುವ ಡಿಸೆಂಬರ್ ಹತ್ತರಂದು ಟೌನ್ ಹಾಲಿನಲ್ಲಿ ನಡೆಯಲಿರುವ ಯಕ್ಷಗಾನದ ಮುಖಾಂತರ ನಿಧಿ ಸಂಗ್ರಹಣೆಗೆ ಎಲ್ಲರ ಸಹಕಾರ ಕೋರಿದರು. ಕಾರ್ಯದರ್ಶಿ ಲಯನ್ ಗೀತಾ ವೀ ರಾವ್ ಕ್ಲಬ್ಬಿನ ಸಂಕ್ಷಿಪ್ತ ವರದಿ  ವಿವರಿಸಿದರು. ಖಜಾಂಚಿ ಲಯನ್ ವಿಜೇತಾ ರೈ, ಧನ್ಯವಾದ ಕಾರ್ಯಕ್ರಮ ನೆರವೇರಿಸಿದರು. ಲಯನ್ ಹರಿಪ್ರಸಾದ್ ರಾಯ್ ಪ್ರಾಂತ್ಯದ ಅಧ್ಯಕ್ಷರು, ಲಯನ್ ಜಯಾನಂದ ಕೊಡವೂರು ಡವಲಯಾಧ್ಯಕ್ಷರು, ಲಿಯೊ ಅಧ್ಯಕ್ಷೆ ಲಿಯೋ ಅನಿಕಾ ರೈ, ಲಿಯೋ ಖಜಾಂಚಿ ಲಿಯೋ ಶ್ರೀನಿಧಿ ರಾವ್ ವೇದಿಕೆ ಮೇಲೆ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply