ವಿದ್ಯುತ್ ಕಾಯಿದೆ ತಿದ್ದುಪಡಿ ರೈತರ, ಗ್ರಾಹಕರ ಹಿತದೃಷ್ಟಿಯಿಂದ ಅತೀ ಅಗತ್ಯ~ ಸತ್ಯನಾರಾಯಣ ಉಡುಪ

ವಿದ್ಯುತ್ ಕಾಯಿದೆ 2003ಕ್ಕೆ ಕೇಂದ್ರ ಸರ್ಕಾರ ತರುತ್ತಿರುವ ತಿದ್ದುಪಡಿ ವಿರುದ್ದ ಸಮಗ್ರ ಅಧ್ಯಯ ನ ಮಾಡದ ರೈತ ಹಾಗೂ ವಿದ್ಯುತ್ ಕಂಪನಿಗಳ ನೌಕರರ ಸಂಘಟನೆಯಿಂದ ಪ್ರತಿಭಟನೆ ಯನ್ನು ಇಂದು ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿದೆ. ಆದರೆ ಈ ತಿದ್ದುಪಡಿ ರೈತರ, ಗ್ರಾಹಕರ ಹಿತದೃಷ್ಟಿ ಯಿಂದ ಅತೀ ಅಗತ್ಯವಾಗಿದೆ
ಪ್ರಮುಖ ಅಂಶಗಳು: ಯಾವುದೇ ವಿದ್ಯುತ್ ಸರಬರಾಜು ಕಂಪನಿಗಳನ್ನು ಖಾಸಗಿಕರಣ ಗೊಳಿಸು ವುದಿಲ್ಲ. ಬದಲಾಗಿ ಒಂದಕ್ಕಿಂತ ಹೆಚ್ಚು ಕಂಪನಿಗಳಿಗೆ ಒಂದೇ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುತ್ತದೆ.
*ಈಗಾಗಲೇ ಇರುವ ವಿದ್ಯುತ್ ಮಾರ್ಗ ಬಳಸಲು ಎಸ್ಕಾಂಗಳಿಗೆ ವೀಲಿಂಗ್ ವೆಚ್ಚವನ್ನು ನೀಡಿ ಹೊಸ ಕಂಪನಿ ಗ್ರಾಹಕರಿಗೆ ವಿದ್ಯುತ್ ಸರಬರಾಜು ಮಾಡಬೇಕು.

 

*ಒಂದೇ ಪ್ರದೇಶದಲ್ಲಿ ಎರಡು ಮೂರು ಕಂಪನಿಗಳು ಕಾರ್ಯ ನಿರ್ವಹಿಸುವುದರಿಂದ  ಆ ಎಲ್ಲಾ ಗ್ರಾಹಕರಿಗೂ ಉತ್ತಮ ಗುಣಮಟ್ಟದ, ಹೆಚ್ಚಿನ ಅವಧಿಯ ಹಾಗೂ ಪೈಪೋಟಿ ದರದ ವಿದ್ಯುತ್ ಸಿಗುತ್ತದೆ. *ಈಗಿರುವ ವಿದ್ಯುತ್ ಸರಬರಾಜು ಕಂಪನಿಗಳಿಗೆ ಹೆಚ್ಚಿನ ಹಣ ಬರುತ್ತದೆ, ಆ ಕಾರಣ ಕ್ಕೆ ಅಗತ್ಯ ನೌಕರರ ನೇಮಕಾತಿ ಹಾಗೂ ಸೇವಾ ಗುಣಮಟ್ಟ ಹೆಚ್ಚಿಸಲೇ ಬೇಕಾಗುತ್ತದೆ. ಇನ್ನು ಮುಂದೆ ನೌಕರರ ಕೊರತೆ ಕಾರಣ ನೀಡುವಂತಿಲ್ಲ ಹಾಗೂ ನೌಕರರ ನೇಮ  ಕಾತಿಗೆ ಸರಕಾರದ ಆದೇಶಕ್ಕಾಗಿ ಕಾಯಬೇಕಿಲ್ಲ.

*ಗ್ರಾಮೀಣ ಪ್ರದೇಶದಲ್ಲಿ ಸೇವೆ ನೀಡಲು ಮುಂದಾಗುವ ಕಂಪನಿಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಅವಕಾಶ ಇದೆ. ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ಮಾನದಂಡ ಪಾಲನೆ ಮಾಡದಿ ದ್ದರೆ ದಂಡವನ್ನು ಹೆಚ್ಚಿಸಲಾಗಿದೆ. ಆಯೋಗ ಇದನ್ನು ಗಮನಿಸಲು ಪ್ರತ್ಯೇಕ ಅಧಿಕಾರಿಗಳನ್ನು ನೇಮಿಸಬೇಕಾಗುತ್ತದೆ.

*ಮುಂದೆ ರೈತರಿಗೆ ಹಾಗೂ ಬಡವರಿಗೆ ನೀಡುವ ಸಬ್ಸಿಡಿಯನ್ನು ಸರಕಾರ ಮುಂಚಿತವಾಗಿ ನೀಡಬೇಕು ಅಥವಾ ಆ ಬಗ್ಗೆ ಬ್ಯಾಂಕ್ ಗ್ಯಾರೆಂಟಿ ರೀತಿಯ ಭದ್ರತೆಯನ್ನು ಕಂಪನಿಗಳಿಗೆ ನೀಡಬೇಕು. ಇದರಿಂದ ಸರಕಾರ ಸಾವಿರಾರು ಕೋಟಿ ರೂಪಾಯಿ ಸಹಾಯಧನ ಬಾಕಿ ಯಿಡುವುದು ತಪ್ಪುತ್ತದೆ. *ರಾಜ್ಯ ರಾಜ್ಯಗಳ ನಡುವಿನ ವಿದ್ಯುತ್ ಹಂಚಿಕೆಗೆ ಸಂಬಂಧಿಸಿದ ಸಂಘರ್ಷ ತಪ್ಪಿಸಲು ಕೇಂದ್ರ ಲೋಡ್ ಡೆಸ್ಪ್ಯಾಚ್ ಸೆಂಟರ್ ನ್ನು ಬಲ ಪಡಿಸಲಾಗಿದೆ.

*ಒಂದು ಪ್ರದೇಶದ ಪಂಪು ಸೆಟ್ ಹಾಗೂ ಭಾಗ್ಯ ಜ್ಯೋತಿ-ಕುಟಿರ ಜ್ಯೋತಿ ಗ್ರಾಹಕರ ಸಹಾಯಧನವನ್ನು ಪ್ರತೀ ಕಂಪನಿಗಳಲ್ಲಿರುವ ಆ ಗ್ರಾಹಕರ ಸಂಖ್ಯೆಗನುಗುಣವಾಗಿ ಹಂಚ ಲಾಗುತ್ತದೆ.

*ಮೀಟರೀಕರಣದ ಬಗ್ಗೆ ಒತ್ತು ನೀಡಲಾಗಿದೆ. ಹಿಂದೆಯೇ ಈ ಕಾಯಿದೆಯಲ್ಲಿ ಕಡ್ಡಾಯವಾಗಿ ಮೀಟರ್ ಅಳವಡಿಸಿದರೆ ಮಾತ್ರ ಹಣ ಪಡೆಯಬಹುದು ಎಂದು ಇದ್ದರೂ, ಕಂಪನಿಗಳು ಅವರ ಲಾಭಕ್ಕಾಗಿ ಮೀಟರ್ ಅಳವಡಿಸಿರಲಿಲ್ಲ.

2010 ರಲ್ಲಿ  ಉಡುಪಿ ಜಿಲ್ಲೆಯ 98% ಪಂಪು ಗಳಿಗೆ ಮೀಟರ್ ಅಳವಡಿಸಿ ಅದರ ಲೆಕ್ಕ ಹಾಕಿ ದಾಗ ಪ್ರತೀ ಪಂಪಿನ ವಿದ್ಯುತ್ ಬಳಕೆ ವಾರ್ಷಿಕ 780 ಯುನಿಟ್ ಇದ್ದಿತ್ತು, ಆದರೆ ಆಗ ಕಂಪನಿ ಯವರು 1350 ಯುನಿಟ್ ಗೆ ಸಹಾಯಧನ ಪಡೆಯುತ್ತಿ ದ್ದರು. ಇದನ್ನು ಕೇಳಿದ ನಂತರ ಮೀಟರ್ ಸರಿಯಿಲ್ಲ ಎಂಬ ಕಾರಣ ನೀಡಿ, ಮೀಟರ್ ಹಾಕುವುದು ಹಾಗೂ ರೀಡಿಂಗ್ ತೆಗೆ ಯುವುದನ್ನೆ ನಿಲ್ಲಿಸಿ ಬಿಟ್ಟರು.

*ಯಾರಿಗೂ ಪ್ರೀಪೆಯ್ಡಿ ಮೀಟರ್ ಕಡ್ಡಾಯ ಮಾಡಿಲ್ಲ. ಆದರೆ ಪ್ರೀಪೆಯ್ಡಿ ಮೀಟರ್ ಹಾಕಿಕೊಳ್ಳು ವವರು ಯಾವುದೇ ಭದ್ರತಾ ಠೇವಣಿ ನೀಡಬೇಕಾಗಿಲ್ಲ.  *ವಿದ್ಯುತ್ ಖರೀದಿಯಲ್ಲಿ ನಡೆಯುವ ಮೋಸ ನಿಲ್ಲುತ್ತದೆ. ಖರೀದಿ ದರದಲ್ಲೂ ಪೈಪೋಟಿ ಬರುತ್ತದೆ. ವಿದ್ಯುತ್ ಕ್ಷೇತ್ರದಲ್ಲಿ ಪೈಪೋಟಿ ಬಂದರೆ ದೂರವಾಣಿ ಕ್ಷೇತ್ರದಂತೆ ಗುಣಮಟ್ಟದ ಸುಧಾರಣೆ ಸಾಧ್ಯ.

ಆದರೂ ಮುಕ್ತ ಪರವಾನಿಗೆ ನೀಡುವುದರಿಂದ  ಅನುಭವ ಇಲ್ಲದ ಕಂಪನಿಗಳು ವಿದ್ಯುತ್ ಸರಬ ರಾಜಿಗೆ ಬಂದರೆ ತೊಂದರೆ ಆಗಬಹುದು. ಕೆಲಸ ಮಾಡದೆ ಸಂಬಳ ಪಡೆಯುವ ನೌಕರರಿಗೆ ತೊಂದರೆ ಆಗಬಹುದು. ಮತ್ತು ಈ ಕ್ಷೇತ್ರದಲ್ಲಿ ಅದಾನಿ, ರಿಲಯನ್ಸ್ ರೀತಿಯ ಬೃಹತ್ ಕಂಪನಿ ಗಳು ಬಂದು ಸಣ್ಣ ಕಂಪನಿಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಅಲ್ಲಗಳೆಯುವಂ ತಿಲ್ಲ. ಆದರೂ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ನಿಯಂತ್ರಣಕ್ಕೆ ಒಳಪಟ್ಟಿ ರುತ್ತವೆ.

ಭಾರತೀಯ ಕಿಸಾನ್ ಸಂಘ, ಉಡುಪಿ ಜಿಲ್ಲೆಯ ಪ್ರಕಟಣೆ.

 
 
 
 
 
 
 
 
 
 
 

Leave a Reply