ಶ್ರೀದೇವಿ ಜ್ಯುವೆಲರ್ಸ್ ನವೀಕರಣಗೊಂಡ ಫೇವರೇಟ್ ಬಿಲ್ಡಿಂಗ್ ಸ್ಥಳಾಂತರ

ಕೋಟ: ಶ್ರೀ ದೇವಿ ಜ್ಯುವೆಲರ್ಸ್ ಕೋಟ ಪೇಟೆಗೆ ಸಿಂಧೂರವಿದ್ದAತೆ ಅಲ್ಲದೆ ಅದು ಉದ್ಯಮ ರಂಗದಲ್ಲಿ ಹೊಸ ಭಾಷ್ಯ ಬರೆದಿದೆ ಎಂದು ಕೋಟದ ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್ ಹೇಳಿದ್ದಾರೆ.
ಕೋಟ ಹೃದಯಭಾಗದಲ್ಲಿ ೩೫ ಸಂವತ್ಸರಗಳ ಚಿನ್ನದ ವ್ಯವಹಾರದಲ್ಲಿ ವಿಶ್ವಾಸರ್ಹತೆಯೊಂದಿಗೆ ನವೀಕರಣಗೊಂಡ ಫೇವರೇಟ್ ಬಿಲ್ಡಿಂಗ್‌ನ ಐತಾಳ್ ಕಾಂಪ್ಲೆಕ್ಸ್ನಲ್ಲಿ ಶ್ರೀದೇವಿ ಜ್ಯುವೆಲ್ಲರ್ಸ್ನ ಉದ್ಘಾಟಿಸಿ ಮಾತನಾಡಿ ಉದ್ಯಮ ಕ್ಷೇತ್ರದಲ್ಲಿ ಮೌಲ್ಯಯುತವಾಗಿ ಪಳಗಿರುವ ಸೀತಾರಾಮ ಆಚಾರ್ಯ ತನ್ನ ದುಡಿಮೆಯ ಜೊತೆ ಸಾಮಾಜಿಕ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ಇದೊಂದು ಶ್ಲಾಘನಾರ್ಹವಾಗಿದೆ.ತನ್ಮೂಲಕ ಕೋಟದ ಗರಿಮೆ ಹೆಚ್ಚಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು. .

ಕಟ್ಟಡದ ಮಾಲಕರಾದ ಪೂರ್ಣಿಮಾ ಶಂಕರ್ ಹೆಗ್ಡೆ ಮಳಿಗೆ ಉದ್ಘಾಟಿಸಿದರು.
ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಅಧ್ಯಕ್ಷತೆ ವಹಿಸಿ ಕಾರ್ಯಾಗಾರ ಕಛೇರಿ ಉದ್ಘಾಟಿಸಿದರು. ಮಾಂಡವಿ ಬಿಲ್ಡರ್ಸ್ನ ಅಧ್ಯಕ್ಷ ಡಾ. ಜರ‍್ರಿ ವಿನ್ಸೆಂಟ್ ಡಯಾಸ್ ಭದ್ರತಾಕೋಶ ಅನಾವರಣಗೈದರು.

ಮುಖ್ಯ ಅತಿಥಿಗಳಾಗಿ ಕೋಟ ಶ್ರೀ ವಿರಾಡ್ವಿಶ್ವಬ್ರಾಹ್ಮಣ ಸಂಘದ ಅಧ್ಯಕ್ಷ ಎಂ.ಸುಬ್ರಾಯ ಆಚಾರ್ಯ ಮಣೂರು ,ಸಾಸ್ತಾನ ಉದ್ಯಮಿ ಮಹಾಬಲೇಶ್ವರ ಉಪಾಧ್ಯ ,ಭಾಗ್ಯವಾದಿರಾಜ್,ಸುಮಂಗಲಿ ಸುಧಾಕರ್,ಕರುಣಾ ಮಹಾಬಲೇಶ್,ವೀಣಾ ಪ್ರಭಾಕರ್ ಐತಾಳ್,ಸುಮಾ ಉಮೇಶ್ ಪುತ್ರನ್,ವಿಶ್ವಕರ್ಮ ಮಹಾಸಭಾ ಉಡುಪಿ ಜಿಲ್ಲಾ ಯುವ ವೇದಿಕೆ ಅಧ್ಯಕ್ಷ ರಾಮಕೃಷ್ಣ ಆಚಾರ್ಯ, ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಟ್ಟಡ ಮಾಲಿಕ ಶಂಕರ್ ಹೆಗ್ಡೆ ದಂಪತಿ, ಗುತ್ತಿಗೆದಾರ ಮಹಾಬಲ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು.
ಶ್ರೀದೇವಿ ಜ್ಯುವೆಲರ್ಸ್ ಮಾಲಿಕ ರೊ.ಪಿ.ಎಚ್.ಎಫ್ ಸೀತಾರಾಮ್ ಆಚಾರ್ಯ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು.ಪತ್ನಿ ಸೌಮ್ಯ ಸೀತಾರಾಮ ಆಚಾರ್ಯ ವಂದಿಸಿದರು.ಕಾರ್ಯಕ್ರಮವನ್ನು ಕೋಟ ಗ್ರಾಮಪಂಚಾಯತ್ ಸದಸ್ಯ ಚಂದ್ರಯ್ಯ ಆಚಾರ್ಯ ನಿರೂಪಿಸಿದರು.

 
 
 
 
 
 
 
 
 
 
 

Leave a Reply