ಹಿಜಾಬ್‌ ವಿವಾದದ ಬಗ್ಗೆ ಕೋರ್ಟ್‌ಗೆ ಹೋಗಲು ನಾವೇ ಕಾರಣ ~ಅಮೃತ್ ಶೆಣೈ..!

ಉಡಪಿ: ಹಿಜಾಬ್‌ ಆರಂಭವಾದ ಬಳಿಕ ನಾವು ಕಾಲೇಜಿಗೆ ಭೇಟಿ ನೀಡಿದೆವು. ಆಗ ಅಲ್ಲಿ ಹಿಜಾಬ್‌ಗೆ ಅವಕಾಶ ಇರಲಿಲ್ಲ ಎಂಬುದು ಗೊತ್ತಾಯಿತು. ಅದಕ್ಕೆ ಮಕ್ಕಳಿಗೆ ನಾವೇ ಕೋರ್ಟ್‌ಗೆ ಹೋಗಲು ಹೇಳಿರುವುದು. ನಾವೇ ಅವರಿಗೆ ವಕೀಲರ ವ್ಯವಸ್ಥೆ ಮಾಡಿರುವುದು. ಕೋರ್ಟ್ ಹೋಗುವುದು ಅವರ ಹಕ್ಕು ಎಂದು ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ ತಿಳಿಸಿದ್ದಾರೆ.

ಉಡುಪಿ ತಾಲೂಕು ಸೌಧದಲ್ಲಿ ನಡೆದ ಶಾಂತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶೆಣೈ, ನಮಗೆ ಕುಂದಾಪುರ, ಉಡುಪಿ ಕಾಲೇಜುಗಳಲ್ಲಿ ನಡೆದ ಘಟನೆಯ ಬಗ್ಗೆ ಅಸಮಾಧಾನ ಇದೆ. ಆ ಕಾಲೇಜುಗಳಲ್ಲಿ ಎಷ್ಟೋ ವರ್ಷಗಳಿಂದ ಹಿಜಾಬ್ ಹಾಕಿಕೊಂಡು ಬಂದು ಕಲಿತು ಡಾಕ್ಟರ್, ಇಂಜಿನಿಯರ್ ಆದವರು ಇದ್ದಾರೆ. ಅಲ್ಲಿ ಇಷ್ಟು ದಿನ ಸಮಸ್ಯೆ ಇರಲಿಲ್ಲ. ಈಗ ಏಕಾಏಕಿ ಕೆಲವು ಹುಡುಗರು ಕೇಸರಿ ಶಾಲು ಹಾಕಿಕೊಂಡು ಪುಂಡಾಟಿಕೆ ಮಾಡಿದ್ದಾರೆ.

ಕೇಸರಿ ಎಂಬುದು ಧಾರ್ಮಿಕ ಪವಿತ್ರ ಬಣ್ಣ. ಈ ರೀತಿ ಕಾನೂನು ಉಲ್ಲಂಘನೆ ಚಟುವಟಿಕೆಗಳಿಗೆ ಬಳಸುವುದು ಸರಿಯಲ್ಲ. ಅಂತಹ ಘಟನೆ ಮುಂದೆ ಆಗದಂತೆ ಎಚ್ಚರ ವಹಿಸಬೇಕೆಂದು ನಾವು ಸರಕಾರವನ್ನು ಒತ್ತಾಯಿಸಿದ್ದೇವೆ ಎಂದು ಅವರು ಹೇಳಿದರು.

 
 
 
 
 
 
 
 
 
 
 

1 COMMENT

  1. Manya Shenai avare nimage paristiti arta aagtila ansutte. Nimmantaha vyaktigalu paristhitiya arivillada reeti maataaduttiruvudu bahala besarada sangati. Naavu kooda shaalege hogi kalitavaru..modlella hijab iddaru adu classroom na olage iruttiralilla school, college na gate tanaka matra iruttittu adanna Muslim sahodara ,Sahodariyare opputtiruvaga nimmantaha kelavaru vote goskara ee reeti Shanti kadaduva hunnara maaduttiddiri. Aa makkala bhavishyada jote baaki makkala bhavishyaanu haalu Maadi bitri. Yaaru nimge hijab haakbardu aandiddare? Classroom na olagade avakaasha illa antiddare bitre yaaru kooda hijab haakbardu,ban maadbeku antilla.dayavittu Dharmada hesaralli Rajakeeya maadodanna bittu Hindu -Muslim ondaagi shaantiyinda badukoke bidi🙏🙏🙏🙏

Leave a Reply