ಹೈನುಗಾರಿಕೆ ಹಾಗೂ ಎರೆಹುಳು ಗೊಬ್ಬರ ತಯಾರಿ ಉಚಿತ ಸ್ವ ಉದ್ಯೋಗ ತರಬೇತಿ

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಮಣಿಪಾಲ- ಕೆನರಾ ಬ್ಯಾಂಕ್ ಆರ್ ಸೆಟಿ (ಸಿಂಡ್ ಆರ್ ಸೆಟಿ), ನಿಧಿ ಸಂಜೀವಿನಿ ಒಕ್ಕೂಟ, ಅಮಾಸೆಬೈಲ್ ಇವರ ಸಹಯೋಗದಲ್ಲಿ ದಿನಾಂಕ 05.10.2020 ರಿಂದ 14.10.2020 ವರೆಗೆ 10 ದಿನಗಳ ಹೈನುಗಾರಿಕೆ ಹಾಗೂ ಎರೆಹುಳು ಗೊಬ್ಬರ ತಯಾರಿ ಉಚಿತ ಸ್ವ ಉದ್ಯೋಗ ತರಬೇತಿ ನಡೆಯಲಿದೆ. 

ತರಬೇತಿಯಲ್ಲಿ ಜಾನುವಾರುಗಳ ತಳಿಯ ಆಯ್ಕೆ, ಕೊಟ್ಟಿಗೆ ರಚನೆ, ಪೌಷ್ಠಿಕ ಆಹಾರ, ಜಾನುವಾರುಗಳ ಕಾಯಿಲೆಗಳು ಮತ್ತು ಪ್ರಥಮ ಚಿಕಿತ್ಸೆ, ಎರೆಹುಳು ಗೊಬ್ಬರ ತಯಾರಿ, ಪಶು ಆಹಾರ ತಯಾರಿ, ಸಬ್ಸಿಡಿ ಸಾಲ ಸೌಲಭ್ಯ, ವಿಮೆ, ಸರಕಾರದ ಯೋಜನೆಗಳು, ಮಾದರಿ ಹೈನುಗಾರಿಕಾ ಘಟಕ ಭೇಟಿ ಇತ್ಯಾದಿ ಹಾಗೂ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ನೀಡಲಾ ಗುವುದು. 

ತರಬೇತಿಯ ನಂತರ ಸ್ವ ಉದ್ಯೋಗ ಪ್ರಾರಂಭಿಸಲು ಮಾರ್ಗದರ್ಶನ, ಸಹಕಾರ ನೀಡಲಾಗುವುದು. ಸ್ವ ಉದ್ಯೋಗ ಪ್ರಾರಂಭಿ ಸಲು ಸಾಲ ಸೌಲಭ್ಯದ ಅವಶ್ಯಕತೆ ಇದ್ದಲ್ಲಿ ಬ್ಯಾಂಕ್ ಲಿಂಕೇಜ್ ಮಾಡಿ ಕೊಡಲಾಗುವುದು. ಊಟ, ಉಪಹಾರ ದೊಂದಿಗೆ ಸಂಪೂರ್ಣ ಉಚಿತ ತರಬೇತಿ ನೀಡಲಿದ್ದು, ಆಸಕ್ತರು ಕೂಡಲೇ ಕರೆ ಮಾಡಿ ಅಥವಾ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ

ತರಬೇತಿ ನಡೆಯುವ ಸ್ಥಳ: ಅಮಾಸೆಬೈಲ್

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
1. ಗೀತಾ, ಕಾರ್ಯದರ್ಶಿ, ನಿಧಿ ಸಂಜೀವಿನಿ ಒಕ್ಕೂಟ, ಅಮಾಸೆಬೈಲ್: 9632605085

 2. ಅಮಿತ, ಕೋಶಾಧಿಕಾರಿ, ನಿಧಿ ಸಂಜೀವಿನಿ ಒಕ್ಕೂಟ, ಅಮಾಸೆಬೈಲ್: 7338241634

ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಬಳಸಿ
https://docs.google.com/forms/d/e/1FAIpQLSfdoGNiTcI4sZP2IbLJ1fsw_iTTmyj8nY4pcNTt5iYyrezhDQ/viewform

Leave a Reply