ಅಕ್ರಮ ಗೋಸಾಗಾಟ–52 ಮರಿ ಕೋಣಗಳ ವಶ, 4 ಮಂದಿ ಬಂಧನ

ಕುಂದಾಪುರ: ಅಮಾಸೆಬೈಲು ಹಿಂಸಾತ್ಮಕವಾಗಿ ಕೋಣಗಳನ್ನು ಅಕ್ರಮವಾಗಿ ಕಂಟೈನರ್ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಹೊಸಂಗಡಿ ಚೆಕ್ ಪೋಸ್ಟ್ ಬಳಿ ಮಂಗಳವಾರ ಬೆಳಿಗ್ಗೆ ಅಮಾಸೆಬೈಲು ಪೊಲೀಸರು 52 ಕೋಣಗಳು ವಶಪಡಿಸಿಕೊಂಡು 4 ಮಂದಿಯನ್ನು ಬಂಧಿಸಿದ ಘಟನೆ ನಡೆದಿದೆ.

ಬಂಧಿತರನ್ನು ದಾವಣಗೆರೆ ಜಿಲ್ಲೆ ಹರಿಹರ ನಿವಾಸಿ ಮೆಹಬೂಬ್ (27), ಬೆಳಗಾಂ ಬೈಲಹೊಂಗಲ ನಿವಾಸಿ ಬಾಪು ಸಾಹೇಬ್ (46), ದಾವಣಗೆರೆ ಚಿಕ್ಕನಹಳ್ಳಿ ನಿವಾಸಿ ಇಮ್ರಾನ್ (29) ಮತ್ತು ಬೈಲಹೊಂಗಲ ನಿವಾಸಿ ಆಸಿಫ್ ಎಂದು ಗುರುತಿಸಲಾಗಿದೆ.

ಸಪ್ಟೆಂಬರ್ 15 ರಂದು ಬೆಳಿಗ್ಗೆ ಅಮಾಸೆಬೈಲು ಪಿ ಎಸ್ ಐ ಅನಿಲ್ ಕುಮಾರ್ ಅವರಿಗೆ ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಯವ ರೊಂದಿಗೆ ಹೊಸಂಗಡಿ ಚೆಕ್ ಪೋಸ್ಟ್ ಹತ್ತಿರ ವಾಹನ ತಪಾಸಣೆ ಮಾಡುತ್ತಿರುವಾಗ ಬೆಳಿಗ್ಗೆ 9:30 ಗಂಟೆಗೆ ಹುಲಿಕಲ್ ಘಾಟಿ ಕಡೆಯಿಂದ ಹೊಸಂಗಡಿ ಕಡೆಗೆ ಬರುತ್ತಿದ್ದ ಕಂಟೈನರ್ ವಾಹನಗಳನ್ನು ನಿಲ್ಲಿಸಿ ವಾಹನಗಳನ್ನು ತಪಾಸಣೆ ಮಾಡಿದಾಗ 52 ಮರಿ ಕೋಣಗಳಿದ್ದು ಅವುಗಳನ್ನು ಯಾವುದೇ ಮೇವು, ಆಹಾರ ನೀಡದೆ  ಹಿಂಸ್ಮಾತಕವಾಗಿ ಕಟ್ಟಿ ಹಾಕಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ.ವಧೆ ಮಾಡುವ ಉದ್ದೇಶದಿಂದ ಹಿಂಸ್ಮಾತಕವಾಗಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವ ಹಿನ್ನಲೆಯಲ್ಲಿ 52 ಮರಿ ಕೋಣಗಳನ್ನು ಮತ್ತು ಎರಡು ಕಂಟೈನರ್ ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply