ಸುಮನಸಾ ರಾಷ್ಟ್ರೀಯ ರಂಗಹಬ್ಬದ ಬಹುಭಾಷಾ ನಾಟಕೋತ್ಸವದಲ್ಲಿ ಮುಂಡ್ಕೂರು ವಿನಯ್ ಆಚಾರ್ಯ

ಉಡುಪಿ: ರಂಗಭೂಮಿ ಉಜ್ವಲವಾಗಿ ಉಳಿಯಬೇಕಿದ್ದರೆ ಪ್ರಾಥಮಿಕ ಶಾಲಾ ಹಂತದಲ್ಲಿಯೇ ರಂಗಭೂಮಿಯ ಬಗ್ಗೆ ಮಾಹಿತಿ ಚಟುವಟಿಕೆ ನೀಡುವ ಪ್ರಯತ್ನಗಳು ನಡೆಯಬೇಕು. ಬಾಲ್ಯದಲ್ಲಿಯೇ ರಂಗಭೂಮಿಯ ಶಿಕ್ಷಣ ನೀಡುವ ಕಾರ್ಯಕ್ಕೆ ಸುಮನಸಾ ಮುಂದಾಗಬೇಕು ಎಂದು ವಕೀಲ ಮುಂಡ್ಕೂರು ವಿನಯ್ ಆಚಾರ್ಯ ಹೇಳಿದರು.

ಇಲ್ಲಿನ ಅಜ್ಜರಕಾಡು ಬಯಲು ಮಂದಿರದಲ್ಲಿ ನಡೆಯುತ್ತಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ರಾಷ್ಟ್ರೀಯ ರಂಗಹಬ್ಬ ‘ಬಹುಭಾಷಾ ನಾಟಕೋತ್ಸವ’ದಲ್ಲಿ ಮೂರನೇ ದಿನವಾದ ಮಂಗಳವಾರ ಅವರು ಮಾತನಾಡಿದರು.

ನಾಟಕಗಳು ನಡೆಯುವಾಗ ಎದುರಲ್ಲಿ ವಯಸ್ಕ, ಮಧ್ಯವಯಸ್ಕ ಪ್ರೇಕ್ಷಕರೇ ಹೆಚ್ಚಾಗಿ ಕಾಣುತ್ತಾರೆ. ಯುವಜನರೂ ಕಾಣುವಂತಾಗಬೇಕು. ರಂಗಚಟುವಟಿಕೆ ಯುವಜನರನ್ನು ಪ್ರೇರೇಪಿಸಬೇಕು. ಯುವಜನರು ರಂಗಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಶತಮಾನಗಳ ಇತಿಹಾಸ ಇರುವ ರಂಗಭೂಮಿ ಮುಂದೆಯೂ ಶತಮಾನಗಳ ಕಾಲ ಉಳಿದು ಬೆಳೆಯಲಿದೆ ಎಂದು ಅಭಿಪ್ರಾಯಪಟ್ಟರು.

ಸಿನಿಮಾ, ಧಾರಾವಾಹಿಗಳಿಂದ ಮನರಂಜನೆಯಷ್ಟೇ ಸಿಗುತ್ತದೆ. ಆದರೆ ರಂಗಭೂಮಿಯಲ್ಲಿ ತೊಡಗಿಸಿಕೊಂಡ ವ್ಯಕ್ತಿಗೆ ಮಾನಸಿಕ ಉಲ್ಲಾಸ, ದೈಹಿಕ ಆರೋಗ್ಯ, ದೃಢತೆ ಸಿಗುತ್ತದೆ. ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಹೀಗೆ ಎಲ್ಲವೂ ಸಿಗುವ ಏಕೈಕ ಮಾಧ್ಯಮ ರಂಗಭೂಮಿ ಎಂದು ವಿಶ್ಲೇಷಿಸಿದರು.
ಸುಮನಸಾ ಸಂಸ್ಥೆಯು ಉತ್ತಮ ಕೆಲಸ ಮಾಡುತ್ತಿದೆ ಮುಂದೆ ಬೆಳ್ಳಿ ಹಬ್ಬ, ಚಿನ್ನದ ಹಬ್ಬ, ವಜ್ರದ ಹಬ್ಬಗಳನ್ನು ಕಾಣಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ‘ರಂಗಭೂಮಿಯ ತಂತ್ರಗಾರಿಕೆಯನ್ನು ಬೋಧನಾ ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳುವಂತಾಗಬೇಕು. ಆಗ ವಿದ್ಯಾರ್ಥಿಗಳ ಕಲಿಕೆ ಸುಲಭವಾಗುತ್ತದೆ. ಈ ಭಾಗದಲ್ಲಿ ಯಕ್ಷಗಾನದ ತಾಳಮದ್ದಳೆಯ ತಂತ್ರ ಪಠ್ಯಬೋಧನೆಗೆ ಉಪಯೋಗಿಸಿದರೆ ಮಕ್ಕಳು ಪಠ್ಯವನ್ನು ಬೇಗ ಕಲಿಯಲಿದ್ದಾರೆ’ ಎಂದು ತಿಳಿಸಿದರು.

ಕೆಲವು ವರ್ಷಗಳ ಹಿಂದೆ ಈ ಅಜ್ಜರಕಾಡಿಗೆ ಬಂದಾಗ ಇದು ಮುಳ್ಳುಗಂಟಿ, ಪೊದೆ ಬೆಳೆದ ನಿರ್ಜನ ಪ್ರದೇಶವಾಗಿತ್ತು. ಇದೀಗ ಇಲ್ಲಿ ರಂಗಮAಟಪ ಎದ್ದಿದೆ. ಇಲ್ಲಿ ನಾಟಕೋತ್ಸವವನ್ನು ಮಾಡುವ ಮೂಲಕ ಎಲ್ಲ ಗಿಡಮರಗಳಿಗೆ ಜೀವಕಳೆಯನ್ನು ಸುಮನಸಾ ನೀಡಿದೆ. ಎಂದು ಹೇಳಿದರು.
ಹಿರಿಯ ರಂಗಕರ್ಮಿ ಕೆಮ್ಮಣ್ಣು ಸದಾಶಿವ ಕೋಟ್ಯನ್ ಅವರಿಗೆ ರಂಗ ಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಉದಯ ಕುಮಾರ್ ಉಡುಪಿ, ನೂತನ್ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಗಣೇಶ್ ಶೇರಿಗಾರ್, ಉದ್ಯಮಿ ಗುರುವ ಸುವರ್ಣ, ಕೊಡವೂರು ಅಯ್ಯಪ್ಪ ಭಕ್ತವೃಂದದ ಗುರುಸ್ವಾಮಿ ಕೆ.ರಾಮ ಶೇರಿಗಾರ್ ಹಾಗೂ ವೇದಿಕೆಯಲ್ಲಿ ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಉಪಾಧ್ಯಕ್ಷ ವಿನಯ್ ಕುಮಾರ್ ಕಲ್ಮಾಡಿ, ಗೌರವ ಸಲಹೆಗಾರ ಮನೋಹರ್ ಜತ್ತನ್ನ ಉಪಸ್ಥಿತರಿದ್ದರು.
ಸುಮನಸಾ ಕೊಡವೂರು ತಂಡದಿAದ ಕನ್ನಡ ನಾಟಕ ವಾಹ್‌ತಾಜ್ ಪ್ರದರ್ಶನಗೊಂಡಿತು.

ಮನೋಹರ್ ಕಲ್ಮಾಡಿ ಸ್ವಾಗತಿಸಿದರು. ಕವನ ವಂದಿಸಿದರು. ಪ್ರವೀಣ್‌ಚಂದ್ರ ತೋನ್ಸೆ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply