ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇದರ ವಾರ್ಷಿಕೋತ್ಸವ ಕಾರ್ಯಕ್ರಮ

 ಕೋಟ: ಈ ಭರತ ಖಂಡದಲ್ಲಿ ಮಹಿಯರಿಗೆ ಹೆಚ್ಚಿನ ಪ್ರಾತಿನಿಧ್ಯ ದೊರಕುತ್ತಿದ್ದು ಅಂತಯೇ ಹಿಂದೂ ಧರ್ಮದಲ್ಲೂ ಕೂಡಾ ಅವರ ಪಾತ್ರ ಗಣನೀಯವಾದದ್ದು ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವದ ಧರ್ಮದರ್ಶಿ ಕೆ.ಅನಂತಪದ್ಮನಾಭ ಐತಾಳ್ ಹೇಳಿದ್ದಾರೆ. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಜ್ಞಾನಮಂದಿರಲ್ಲಿ ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇದರ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿಶ್ವದಲ್ಲಿ ಹಿಂದೂ ಧರ್ಮ ಶ್ರೇಷ್ಠತೆಯನ್ನು ಪಡೆದುಕೊಂಡಿದೆ, ಅಂತಹ ಧರ್ಮ ವಿಶ್ವಕ್ಕೆ ಸಂಸ್ಕಾರ ನೀಡುವ ಕಾಯಕ ಮಾಡುತ್ತಿದೆ.

ಮಹಿಳಾ ಸಂಘಟನೆಗಳು ಸಂಸ್ಕೃತಿ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.ಜನಸಂಖ್ಯಾ ಅಂಕಿಅoಶಗಳನ್ನು ಅವಲೋಕಿಸಿದರೆ ಕ್ಷೀಣಿಸುವ ಮನ್ಸೂಚನೆ ಕಾಣುತ್ತಿದೆ, ಇದಕ್ಕೆ ಪರಿಹಾರವಾಗಿ ಒಂದು ಕುಟುಂಬ ಒಂದು ಮಗು ಬಿಟ್ಟು ಎರೆಡೆರೆಡು ಮಕ್ಕಳಿಗೆ ಜನ್ಮ ನೀಡಿ ಆಗ ಮಾತ್ರ ಹಿಂದೂ ಸಮಾಜ ಉಳಿಯಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆಯನ್ನು ವಿಪ್ರ ಮಹಿಳಾ ಬಳಗದ ಅಧ್ಯಕ್ಷೆ ಜ್ಞಾನವಿ ಹೇರ್ಳೆ ವಹಿಸಿದ್ದರು.

ಈ ಸಂದರ್ಭದಲ್ಲಿ ಮಹಿಳಾ ಸಾಧಕಿ ಸುಪ್ರೀತಾ ಪುರಾಣಿಕ್ ಹಾಗೂ ಸಾಮಾಜಿಕ ಚಟುವಟಿಕೆಯಲ್ಲಿ ನಿರತರಾದ ನಿಸ್ವಾರ್ಥ ಸೇವಾ ಟ್ರಸ್ಟ್ ಕೋಟ ಇವರುಗಳನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಬರಹಗಾರ್ತಿ ಪೂರ್ಣಿಮಾ ಕಮಲಶೀಲೆ,ಸಾಲಿಗ್ರಾಮ ಬ್ರಾಹ್ಮಣ ವಲಯ ಅಧ್ಯಕ್ಷ ಶಿವರಾಮ ಉಡುಪ ಉಪಸ್ಥಿತರಿದ್ದರು. ವಿಪ್ರ ಮಹಿಳಾ ಬಳಗದ ಸಂಚಾಲಕಿ ವನೀತಾ ಉಪಾಧ್ಯ ಪ್ರಾಸ್ತಾವನೆ ಸಲ್ಲಿಸಿ ಸ್ವಾಗತಿಸಿದರು.ಕಾರ್ಯಕ್ರಮವನ್ನು ಸುಜಾತ ಬಾಯಿರಿ ನಿರೂಪಿಸಿದರು.ರಶ್ಮಿ ವಂದಿಸಿದರು.

ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಜ್ಞಾನಮಂದಿರಲ್ಲಿ ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇದರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿ ಸುಪ್ರೀತಾ ಪುರಾಣಿಕ್ ಹಾಗೂ ಸಾಮಾಜಿಕ ಚಟುವಟಿಕೆಯಲ್ಲಿ ನಿರತರಾದ ನಿಸ್ವಾರ್ಥ ಸೇವಾ ಟ್ರಸ್ಟ್ ಕೋಟ ಇವರುಗಳನ್ನು ಸನ್ಮಾನಿಸಲಾಯಿತು. ವಿಪ್ರ ಮಹಿಳಾ ಬಳಗದ ಅಧ್ಯಕ್ಷೆ ಜ್ಞಾನವಿ ಹೇರ್ಳೆ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವದ ಧರ್ಮದರ್ಶಿ ಕೆ.ಅನಂತಪದ್ಮನಾಭ ಐತಾಳ್, ಬರಹಗಾರ್ತಿ ಪೂರ್ಣಿಮಾ ಕಮಲಶೀಲೆ,ಸಾಲಿಗ್ರಾಮ ಬ್ರಾಹ್ಮಣ ವಲಯ ಅಧ್ಯಕ್ಷ ಶಿವರಾಮ ಉಡುಪ ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply